ರಾಂಝಿ: ನೆರೆಹೊರೆಯವರ ಕಿರುಕುಳ ತಾಳಲಾರದೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ ಪುರ ಜಿಲ್ಲೆಯ ರಾಂಝಿಯಲ್ಲಿ ನಡೆದಿದೆ.
ಬಾಲಕಿಯು ಮಧ್ಯಪ್ರದೇಶದ ಪ್ರದೇಶದ ನಿವಾಸಿಯಾಗಿದ್ದು, ನೆರೆಹೊರೆಯ ಮನೆಯವರು ಬಾಲಕಿಯು ಶಾಲೆಗೆ ಹೋಗುವ ವೇಳೆ ಅವಳ ಚಿತ್ರಗಳನ್ನು ಕ್ಲಿಕ್ಕಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.. ಇದರಿಂದ ಬೇಸತ್ತಿದ್ದ ಬಾಲಕಿಯೂ ಪೊಲೀಸರಿಗೆ ದೂರು ನೀಡಲು ಹೋದರೆ ಪೊಲೀಸರು ಮೂರು ಗಂಟೆಯಾದರೂ ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ.. ಹೀಗಾಗಿ ಮನನೊಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಬಾಲಕಿಯ ಮನೆಯಲ್ಲಿದ್ದ ಡೆತ್ ನೋಟ್ನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆಶಾ ಖನ್ನಾ, ತನ್ವಿ ಕೇವತ್ ಮತ್ತು ಮಮತಾ ಕೇವತ್ ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ..
ಮೃತ ಬಾಲಕಿಯ ತಂದೆ , ಬಾಲಕಿಗೆ ಆರೋಪಿಗಳು ಕಿರುಕುಳ ನೀಡುತ್ತಿದ್ದು, ನನಗೂ ಹೊಡೆದಿದ್ದಾರೆ ಎಂದು ಈ ಹಿಂದೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಬಾಲಕಿಯೂ ಪೊಲೀಸ್ ಠಾಣೆಗೆ ಹೋಗಿ ದೂರುದಾರರ ವಿರುದ್ಧ ರಾಜಿಯನ್ನು ಮಾಡಿಕೊಳ್ಳಲು ಬಯಸಿದ್ದಳು ಎಂದು ಎಎಸ್ಪಿ ಸಂಜಯ್ ಅಗರವಾಲ್ ತಿಳಿಸಿದ್ದಾರೆ.
ಸಂತ್ರಸ್ತೆ ಅಪ್ರಾಪ್ತ ಬಾಲಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಮತ್ತು ಇದು ಆಕೆಯ ತಂದೆ ಮತ್ತು ಹುಡುಗನ ಕುಟುಂಬದ ವಿವಾದಕ್ಕೆ ಕಾರಣವಾಗಿತ್ತು ಎಂದು ಕೂಡ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 1770