ಸರಗೂರು: ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸರಗೂರು ಪಟ್ಟದ ಪೊಲೀಸ್ ಯಶಸ್ವಿಯಾಗಿದ್ದಾರೆ. ಕೃಷ್ಣ(40) ಕುಮಾರ ಅಲಿಯಾಸ್ ಸೀನ(28) ಕುಮಾರ (35) ಬಂಧಿತ ಆರೋಪಿಗಗಳಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಟ್ಟಣದ ಗ್ರಾಮೀಣ ಭಾಗದಲ್ಲಿ ಕೂದಲು ವ್ಯಾಪಾರ ಹಾಗೂ ಚಿನ್ನ ಬೆಳ್ಳಿ ಅಭರಣಗಳಿಗೆ ಪಾಲಿಶ್ ಮಾಡುವ ಕೆಲಸ ಮಾಡುತ್ತಿದ್ದ ಇವರು, ವ್ಯಾಪಾರದ ವೇಳೆ ಮನೆ ಹಾಗೂ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಸಿಕೊಂಡು ಬಳಿಕ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.
ಹಲವಾರು ದಿನಗಳಿಂದ ಒಂದಾದ ಮೇಲೆ ಒಂದರಂತೆ ದೇವಾಲಯಗಳಲ್ಲಿ ಕಳ್ಳತನವಾಗುತ್ತಿದ್ದ ಪ್ರಕರಣವನ್ನು ಬೆನ್ನತ್ತಿದ ಸರಗೂರು ಪೊಲೀಸರು, ಸರ್ಕಲ್ ಇನ್ಸ್ ಪೆಕ್ಟರ್ ಆನಂದ ನೇತೃತ್ವದಲ್ಲಿ ಪಿಎಸ್ ಐ ಶ್ರಾವಣ ದಾಸ ರೆಡ್ಡಿ ಮಾರ್ಗದರ್ಶನದಲ್ಲಿ ತಂಡವನ್ನು ರಚನೆ ಮಾಡಿ, ಕಾರ್ಯಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ತಾಲ್ಲೂಕಿನ ಕೊತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ರಂಗಮಂದಿರದಲ್ಲಿ ರಾತ್ರಿ ವೇಳೆ ತಂಗುತ್ತಿದ್ದರು. ಖಚಿತ ಮಾಹಿತಿ ಪಡೆದು ಕಳ್ಳರನ್ನು ಬಂಧಿಸಿ ಕದ್ದ ಮಾಲು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡು, ಇನ್ನೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಣದ 11 ನೇ ವಾರ್ಡನಲ್ಲಿ ಬಸವೇಶ್ವರ ದೇವಾಲಯದ ಬೀಗ ಮುರಿದು ಕಾಣಿಕೆ ಹುಂಡಿ ಕಳವು, ಹೆಚ್.ಡಿ. ಕೋಟೆ ತಾಲ್ಲೂಕಿನ ಚಕ್ಕೂರು ಗ್ರಾಮದಲ್ಲಿ ಜೈನ ದೇವಾಲಯದಲ್ಲಿ 3 ತಾಳಿ ಕಳವು, ನಂಜನಗೂಡು ತಾಲ್ಲೂಕಿನ ಮಹದೇವ ತಾತ ರವರ ಐಕ್ಯ ಸ್ಥಳವಾದ ಸಂಗಮ ದೇವಾಲಯದಲ್ಲಿ ಬೆಳ್ಳಿ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿ ಕದ್ದಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700