nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

    October 12, 2026

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ

    October 12, 2026
    Facebook Twitter Instagram
    ಟ್ರೆಂಡಿಂಗ್
    • ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
    • ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!
    • ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ
    • ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ
    • ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ್
    • ಅಖಿಲ ಭಾರತ ಪ್ರತಿಭಟನಾ ದಿನ : AIDSO
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ
    ಕೊರಟಗೆರೆ August 18, 2025

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    By adminAugust 18, 2025No Comments2 Mins Read

    ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

    ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ  ಆಂಜನೇಯಸ್ವಾಮಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮದ್ಯೆ ಸಮನ್ವಯತೆ ಇರಬೇಕು ಆಗ ಮಾತ್ರ ದೇಶ ಮತ್ತು ರಾಜ್ಯಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.

    ಈ ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗದ್ದಿದ್ದರೆ ದೇಶ ಪರಿಸ್ಥಿತಿ ಈಗ ಏನು ಆಗುತ್ತಿತೋ ಗೊತ್ತಿಲ್ಲ, ಅಪರೇಷನ್ ಸಿಂಧೂರ ಈ ದೇಶದ ಸ್ವಾಭಿಮಾನ ಪ್ರತೀಕ. ಸ್ವಾತಂತ್ರ್ಯದ ದಿನದಂದು ದೇಶದಲ್ಲಿ ಗ್ರಾ.ಪಂ ಅಧ್ಯಕ್ಷರನ್ನು ಕರಸಿ ಗೌರವಿಸುವ ಕಾರ್ಯವನ್ನು 10 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ದೇಶದ ಜನರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ೫ ಲಕ್ಷ ಕೋಟಿ ನೀಡಿದ್ದಾರೆ. ಇತಂಹ ಪ್ರದಾನಿ ವಿಶ್ವದಲ್ಲೇ ವಿರಳ ಎಂದರು.

    ಡಾ.ಜಿ.ಪರಮೇಶ್ವರ ಬಗ್ಗೆ ಮೆಚ್ಚುಗೆ:

    ಕೇಂದ್ರ ಸಚಿವ ಸೋಮಣ್ಣ ಗೃಹ ಸಚಿವ ಡಾ.ಜಿ.ಪರಮೇಶ್ವರರನ್ನು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಮುಂದೆಯೆ ಹಾಡಿ ಹೊಗಳುವ ಮೂಲಕ  ಈ ಕಾರ್ಯಕ್ರಮಕ್ಕೆ ಡಾ.ಜಿ.ಪರಮೇಶ್ವರ ಬರಬೇಕಿತ್ತು, ಈ ಭಾಗಕ್ಕೆ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಗಳು ಬರಬೇಕಿದೆ, ಇದಕ್ಕಾಗಿ ಎರಡು ಸರ್ಕಾರಗಳು ಶ್ರಮಿಸುತ್ತಿವೆ, ಈ ಕ್ಷೇತ್ರದ ಶಾಸಕರು, ರಾಜ್ಯದ ಸಚಿವರಾದ ಡಾ.ಜಿ.ಪರಮೇಶ್ವರ  ಈ ಭಾಗದ ಕೆರೆಗಳಿಗೆ ನೀರು ಹರಿಸಲು ಕೇಂದ್ರ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ, ನಾನು, ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಮೂವರು ಜನರು ಸೇರಿ ಪಕ್ಷಭೇದ ಮರೆತು  ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವ ತಿರ್ಮಾನ ಮಾಡಿದ್ದೇವೆ, ಈ ಭಾಗದ ಅಭಿವೃದ್ಧಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನನಗೆ ಪೂರ್ಣ ಸಹಕಾರ ನೀಡುತ್ತಿದ್ದು ಡಾ.ಜಿ. ಪರಮೇಶ್ವರರಂತ ಒಳ್ಳೆಯ ಉತ್ತಮ ರಾಜಕಾರಣ ಅಪರೂಪ ಎಂದು ಕೊಂಡಾಡಿದರು.

    ತುಂಬಾಡಿ ಗ್ರಾಮಕ್ಕೆ ವಿಶೇಷ ಅನುಧಾನ:

    ತುಂಬಾಡಿ ಗ್ರಾಮದ ಮುಖಂಡರ, ಜನರ ಕೋರಿಕೆ ಮೇರೆಗೆ ಇಲ್ಲಿನ ಶಾಲಾ ಕೊಠಡಿ ನಿರ್ಮಾಣಕ್ಕೆ 1.10 ಕೋಟಿ ನೀಡುವುದಾಗಿ ಭರವಸೆ ನೀಡಿ ಆ ಕೆಲಸವನ್ನು ಶೀಘ್ರವಾಗಿ ಪ್ರಾರಂಭಿಸಿ ಮುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು, ಅದೇ ರೀತಿ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ ಪ್ಲೋರೈಡ್ ಯುಕ್ತ ಕುಡಿಯುವ ನೀರಿದ್ದು ಅಲ್ಲಿನ ಶುದ್ದ  ಕುಡಿಯುವ ನೀರಿನ ವ್ಯವಸ್ಥೆಗೆ 2 ಕೋಟಿ ಅನುದಾನ ನೀಡಿರುವುದಾಗಿ ಮಾಹಿತಿ ನೀಡಿದರು.

    ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ನಮ್ಮ ಪೂರ್ವಜರು ಊರಿನ ಹಿತಕ್ಕಾಗಿ ದೇವಾಲಯಗಳನ್ನು ಕಟ್ಟುತ್ತಿದ್ದರು ಊರಿನಲ್ಲಿ ಆಂಜಿನೇಯ ಸ್ವಾಮಿ ದೇವಾಲಯವಿದ್ದರೆ ಆ ಊರು ದುಷ್ಟಶಕ್ತಿಗಳಿಂದ ದೂರ ಮತ್ತು ಶಾಂತಿ ನೆಮ್ಮದಿಯಿಂದ ಇರುತ್ತದೆ ಎನ್ನುವ ನಂಬಿಕೆಯಿಂದ ಕಟ್ಟುತ್ತಿದ್ದರು, ಹಿಂದೆ ಅವುಗಳ ಜೀರ್ಣೋದ್ಧಾರ ಕಷ್ಟವಾಗುತ್ತಿತ್ತು ಆದರೆ ಈಗ ಜನರು ದೇವಾಲಯಗಳಿಗೆ ಹಣ ನೀಡುತ್ತಿದ್ದಾರೆ, ಆದರೆ ಈ ಯುವಕರಲ್ಲಿ ಮತ್ತು ಮಕ್ಕಳಲ್ಲಿ ದೈವದ ನಂಬಿಕೆ ಕಡಿಮೆ ಯಾಗುತ್ತಿರುವುದರಿಂದ ಯುವಕರು ಹಾದಿ ತಪ್ಪುತ್ತಿದ್ದಾರೆ, ತುಂಬಾಡಿ ಗ್ರಾಮದ ಜನರು 25 ವರ್ಷಗಳಿಂದ ಶ್ರಮಿಸಿ ಒಂದು ದೊಡ್ಡ ಸಮುದಾಯ ಭವನವನ್ನು, ಕಲ್ಯಾಣ ಮಂಟಪದ ರೀತಿ ನಿರ್ಮಿಸಿರುವುದು ಸಾಧನೆಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಸಿ.ಲಕ್ಷ್ಮೀಶ್, ಮಾಜಿ ಶಾಸಕ ಪಿ.ಆರ್. ಸುಧಾಕರ್‌ ಲಾಲ್, ಮಾಜಿ ಜಿ.ಪಂ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ತಾ.ಜೆಡಿಎಸ್ ಅಧ್ಯಕ್ಷ ಜಿ.ಎಂ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ತುಂಬಾಡಿ ಗ್ರಾ.ಪಂ ಅಧ್ಯಕ್ಷ  ನಟರಾಜು, ಉಪಾದ್ಯಕ್ಷೆ ಲತಾ, ಸದಸ್ಯರಾದ ಪ್ರಸನ್ನಕುಮಾರ್, ಹೇಮಂತ್, ಪ.ಪಂ ಸದಸ್ಯ ಕೆ. ಎನ್   ಲಕ್ಷ್ಮೀನಾರಾಯಣ,  ಮುಖಂಡರುಗಳಾದ ಜೆ. ಎನ್ ನರಸಿಂಹರಾಜು, ಮುಖಂಡರಾದ ತಿಮ್ಮಜ್ಜ, ವಿನಯ್‌ ಬಾಬು, ಕೃಷ್ಣಾಚಾರ್, ರಾಘವೇಂದ್ರ, ಸಿದ್ದಮಲ್ಲಯ್ಯ, ಸೇರಿದಂತೆ ಇತರರು ಇದ್ದರು.

    ದೇವಾಲಯಕ್ಕೆ ಹಣ ಕೇಳಬೇಡಿ:

    ನನಗೆ ಕೆಂದ್ರದಿಂದ ವರ್ಷಕ್ಕ 5 ಕೋಟಿ ಅನುದಾನ ಮಾತ್ರ ಬರುತ್ತದೆ. ಇದರಲ್ಲಿ 33000 ಸಾವಿರ ಹಳ್ಳಿಗಳು ಮತ್ತು ನಗರಗಳ ಅಭಿವೃದ್ದಿಗೆ ಅನುದಾನ ಹಂಚಬೇಕು. ನಾನು ಹೋಗುವ ಕಡೆ ಹೆಚ್ಚು ದೇವಸ್ಥಾನಗಳಿಗೆ ಜನರು ಹಣ ಕೇಳುತ್ತಾರೆ ಮತ್ತು ನಾನು ಅನುದಾನ ಎಲ್ಲಿಂದ ನೀಡಲಿ ಮತ್ತು ಎಲ್ಲಿಂದ ತರಲಿ ಎಂದು ಪರೋಕ್ಷವಾಗಿ ದೇವಾಲಯದ ಅಭಿವೃದ್ಧಿಗೆ ಹಣ ಕೇಳಲು ಬಂದಿದ್ದ ದೇವಾಲಯ ಸಮಿತಿಗೆ ನಾನು ಹಣ ನೀಡುವುದಿಲ್ಲ ಎಂದು ಹೇಳಿದರು

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Comments are closed.

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

    October 12, 2026

    ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ತುರ್ತು ಪರಿಸ್ಥಿತಿಯೇ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉತ್ತರ ನೀಡಬೇಕು…

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ

    October 12, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.