ಧರ್ಮನಿಂದನೆಯ ಸಂದೇಶ ಕಳುಹಿಸಿದ್ದಕ್ಕಾಗಿ ಪಾಕಿಸ್ತಾನ ನ್ಯಾಯಾಲಯ ಮಹಿಳೆಯೊಬ್ಬರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.ಆರೋಪಿತ ಮಹಿಳೆ ಅನಿಕಾ ಅಟ್ಟಿಕ್ ಅವರನ್ನು ದೋಷಿ ಎಂದು ಪಾಕಿಸ್ತಾನದ ರಾವಲ್ಪಿಂಡಿ ನ್ಯಾಯಾಲಯ ತೀರ್ಪು ನೀಡಿದೆ.
2020ರಲ್ಲಿ ಫಾರೂಕ್ ಹಸ್ಸಂತ್ ಅವರು ಮಹಿಳೆಯ ವಿರುದ್ಧ ದೂರು ದಾಖಲಿಸಿದರು. ಅನಿಕಾ ವಾಟ್ಸಾಪ್
ನಲ್ಲಿ ಪ್ರವಾದಿ ಮಹಮ್ಮದ್ ವ್ಯಂಗ್ಯ ಚಿತ್ರಗಳನ್ನು ರವಾನೆ ಮಾಡಿ ಧರ್ಮನಿಂದನೆ ಮಾಡಿದ್ದಾರೆ. ಇದರಿಂದ ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಮತ್ತು ಸೈಬರ್ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ದಾಖಲಾಗಿತು.
ವಿಚಿತ್ರವೆಂದರೆ ದೂರುದಾರ ಫಾರೂಕ್ ಮತ್ತು ಆರೋಪಿತೆ ಅನಿಕಾ ಪರಸ್ಪರ ಸ್ನೇಹಿತರಾಗಿದ್ದರು. ಆದರೆ ಇಬ್ಬರ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದವು. ಈ ಸಂದರ್ಭದಲ್ಲಿ ಫಾರೂಕ್ ಮಹಿಳೆಯ ವಿರುದ್ಧ ದೂರು ನೀಡಿದ್ದು, ಆಕೆ ಉದ್ದೇಶಪೂರ್ವಕವಾಗಿ ಪ್ರವಾದಿ ಅವರ ಅವಹೇಳನ ಮಾಡಿದ್ದಾಳೆ, ಫೆಸ್ಬುಕ್ ಖಾತೆಯಲ್ಲೂ ಧರ್ಮನಿಂದನೆಯ ಸಂದೇಶಗಳನ್ನು ಹರಡಿದ್ದಾಳೆ. ನೀತಿವಂತ ಧರ್ಮಿಯರನ್ನು ಅಪಮಾನಿಸಿ, ಮುಸ್ಲಿಂರ ಭಾವನೆಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದರು.
ಸಂದೇಶಗಳನ್ನು ಡಿಲಿಟ್ ಮಾಡಿ, ಕ್ಷಮೆ ಕೇಳುವಂತೆ ತಾವು ಆಗ್ರಹಿಸಿದ್ದು, ಆಕೆ ಅದನ್ನು ನಿರಾಕರಿಸಿದ್ದಾಳೆ ಎಂದು ಫಾರೂಕ್ ಫೆಡರಲ್ ಇನ್ವಿಟಿಗೇಷನ್ ಸಂಸ್ಥೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಅಕಾರಿಗಳು ಆರೋಪಿತೆಯನ್ನು ಬಂಧಿಸಿದ್ದರು. ಆದರೆ ಆಕೆ ತನ್ನ ವಿರುದ್ಧ ಇರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದರು. ಫಾರೂರೂಕ್ ನೊಂದಿಗೆ ಸ್ನೇಹವನ್ನು ತಿರಸ್ಕರಿಸಿದ್ದಕ್ಕಾಗಿ ಆತ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ. ದುರುದ್ದೇಶಪೂರ್ವಕವಾಗಿ ವಿಷಯವನ್ನು ಲಂಭಿಸಿ, ಧರ್ಮನಿಂದನೆಗೆ ಜೋಡಿಸಿ ದೂರು ನೀಡಿದ್ದಾನೆ ಎಂದು ನ್ಯಾಯಾಲಯದ ವಿಚಾರಣೆಯ ವೇಳೆ ಆಕೆ ಸಮರ್ಥಿಸಿಕೊಂಡಿದ್ದಳು.
1980ರಲ್ಲಿ ಮಿಲಿಟರಿ ಸರ್ವಾಕಾರಿ ಜಿಯಾವುಲ್ ಹಕ್ ಆಡಳಿತದಲ್ಲಿ ಧರ್ಮನಿಂದನೆಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು ಪಾಕಿಸ್ತಾನದಲ್ಲಿ ಜಾರಿಗೆ ತಂದಿದೆ. ಈವರೆಗೂ ಈ ಕಾನೂನಿನ ಅಡಿ ಯಾರನ್ನು ಶಿಕ್ಷಿಸಿಲ್ಲವಾದರೂ, ಧರ್ಮನಿಂದನೆಯ ಆರೋಪಕ್ಕೆ ಗುರಿಯಾದ ಹಲವರನ್ನು ಹಲವರು ಗುಂಪುಗೂಡಿ ಕೊಂದು ಹಾಕಿರುವ ಪ್ರಕರಣಗಳು ನಡೆದಿವೆ.
ಕಳೆದ ವರ್ಷ ಸೈಲಕೋಟ್ ಸಿಟಿಯ ಫ್ಯಾಕ್ಟರಿಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಲಂಕ ಮೂಲದ ವ್ಯಕ್ತಿಯನ್ನು ಗುಂಪೊಂದು ಧರ್ಮನಿಂದನೆಯ ಆರೋಪಕ್ಕಾಗಿ ಹತ್ಯೆ ಮಾಡಿತ್ತು.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy