ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾವಿಗೆ ಶರಣಾಗಿರುವುದು ಇಂದು ಬೆಳಕಿಗೆ ಬಂದಿತ್ತು. ಇದೀಗ ಅವರ ಸಾವಿಗೆ ಕಾರಣ ಬಯಲಾಗಿದೆ.
ಗುರುಪ್ರಸಾದ್ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಇತ್ತೀಚೆಗೆ ಎರಡನೇ ಮದುವೆ ಆಗಿದ್ದಂತ ನಟ, ನಿರ್ದೇಶಕರ ಗುರುಪ್ರಸಾದ್ ಅವರು ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೇ ತೊಳಲಾಡುತ್ತಿದ್ದರು. ಇದೇ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಪದೇ ಪದೇ ಸಾಲಗಾರರು ಮನೆಗೆ ಬರ್ತಾರೆ ಅಂತ ಮನೆ ಕೂಡ ಮೂರು ಬಾರಿ ಬೆಂಗಳೂರಲ್ಲಿ ಬದಲಾವಣೆ ಮಾಡಿದ್ದರಂತೆ. ಜಯನಗರ, ಕನಕಪುರ, ಅಶೋಕ ನಗರದಲ್ಲಿ ಮನೆ ಮಾಡಿದ್ದರು. ಕೊನೆ ಕೊನೆಗೆ ಒಂಟಿಯಾಗಿ ಕೂಡ ವಾಸವಾಗಿದ್ದರು ಎನ್ನಲಾಗಿದೆ.
ಇದಲ್ಲದೇ ಗುರುಪ್ರಸಾದ್ ಅವರು ಸಾಲದ ಹೊರೆಯ ಬಗ್ಗೆ ನಟ ಜಗ್ಗೇಶ್ ಅವರ ಜೊತೆಗೆ ಹಂಚಿಕೊಂಡಿದ್ದರು. ಈ ವೇಳೆ ಅವರನ್ನು ಸಮಾಧಾನಿಸಿ ಕಳುಹಿಸಿದ್ದಾಗಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296