ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಶಾಲೆಗಳು ಬೆಳಗ್ಗೆ 8-9 ಗಂಟೆಯ ಅವಧಿಯಲ್ಲಿ ಆರಂಭವಾಗುತ್ತವೆ. ಆದರೆ ಇಂಡೋನೇಷ್ಯಾದ ಈ ಪ್ರದೇಶದ ಶಾಲೆಯಲ್ಲಿ ಬೆಳಗ್ಗೆ 5.30ಕ್ಕೆ ತರಗತಿಗಳು ಆರಂಭವಾಗುತ್ತವೆ. ಮಕ್ಕಳು 4 ಗಂಟೆಗೆ ಎದ್ದು ತಯಾರಾಗಿ ಶಾಲೆಗೆ ಹೋಗುತ್ತಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಆ ಕತ್ತಲಲ್ಲಿ ಮಕ್ಕಳು ರಸ್ತೆಯಲ್ಲಿ ಆಟೋ, ಟ್ಯಾಕ್ಸಿ, ಶಾಲಾ ಬಸ್ಗಳಿಗಾಗಿ ಕಾಯುತ್ತಾ ನಿಂತಿರುತ್ತಾರೆ.
ಮಕ್ಕಳು ಬೆಳಗ್ಗೆ ಬೇಗ ಏಳುವುದಿಲ್ಲ, ಮಕ್ಕಳಲ್ಲಿ ಸೋಮಾರಿತನ ಹೆಚ್ಚಾಗಿರುವುದರಿಂದ ಓದಿನ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳು ಬೇಗ ಎದ್ದರೆ ತುಂಬಾ ಲವಲವಿಕೆಯಿಂದಿರುತ್ತಾರೆ, ಹಾಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ ಶಿಕ್ಷಕರು.
ಮಕ್ಕಳನ್ನು ಅಷ್ಟು ಬೆಳಗ್ಗೆ ಏಳಿಸಲು ಸಾಧ್ಯವಿಲ್ಲ, ಎದ್ದರೂ ನಿದ್ದೆ ಮಂಪರಿನಲ್ಲಿಯೇ ಇರುತ್ತಾರೆ, ವಾಹನಗಳ ವ್ಯವಸ್ಥೆಯೂ ಕಷ್ಟ, ಮಧ್ಯಾಹ್ನ ಮನೆಗೆ ಬಂದ ತಕ್ಷಣ ಮಲಗಿಬಿಡುತ್ತಾರೆ, ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಮಕ್ಕಳಿಗೆ ಮೊದಲು ಸರಿಯಾದ ನಿದ್ರೆ ಬೇಕು ಎಂದಿದ್ದಾರೆ ಪಾಲಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


