ಕೊರಟಗೆರೆ: ತುಮಕೂರು ಜಿಲ್ಲೆಯ ಯುವಕರು ‘ದೋಖಾ ದೋಸ್ತಿ’ ಎಂಬ ಚಿತ್ರವನ್ನು ನಿರ್ಮಿಸಿದ್ದು, ಫೆಬ್ರವರಿ 18 ರಂದು ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ದೋಖಾ ದೋಸ್ತಿ ಚಿತ್ರದ ನಿರ್ದೇಶಕ ಮಾತನಾಡಿ, ತುಮಕೂರು ಜಿಲ್ಲೆಯ ಯುವಕರು ಸೇರಿ ದೋಖಾ ದೊಸ್ತಿ ಎಂಬ ಚಿತ್ರವನ್ನು ಚಿತ್ರಿಕರಣ ಮಾಡಿದ್ದೇವೆ, ಫೆಬ್ರವರಿ 18 ರಂದು ತುಮಕೂರು ಜಿಲ್ಲೆಯ ಚಿತ್ರಮಂದಿಗಳಲ್ಲಿ ದೋಖಾ ದೋಸ್ತಿ ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ನಮ್ಮ ಚಿತ್ರತಂಡಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.
ದೋಖಾ ದೋಸ್ತಿ ಚಿತ್ರದ ನಾಯಕ ಮಾತನಾಡಿ, ತುಮಕೂರು ಜಿಲ್ಲೆಯ ಯುವಕರ ತಂಡದಿಂದ ಈ ಚಿತ್ರವನ್ನು ಚಿತ್ರಿಕರಣ ಮಾಡಲಾಗಿದೆ . ಈ ಚಿತ್ರದಲ್ಲಿ ಸುಮಾರು 35 ರಿಂದ 40 ಜನರು ನಟನೆ ಮಾಡಿದ್ದಾರೆ ಎಂದು ತಿಳಿಸಿದರು.
ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ತುಮಕೂರು ಜಿಲ್ಲೆಯ ಹಳ್ಳಿ ಪ್ರತಿಭೆಗಳಿಗೆ ಆಶೀರ್ವಾದ ಮಾಡುವಂತೆ ಅವರು ಕೋರಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. , ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB