ತುರುವೇಕೆರೆ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮ ದಿನಾಚರಣೆಯ ಪ್ರಯುಕ್ತ ತುರುವೇಕೆರೆಯ ಕಲ್ಪತರು ಗೆಳೆಯರ ಬಳಗದ ವತಿಯಿಂದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಖ್ಯಾತ ಹರಿಕಥೆ ವಿದ್ವಾಂಸರಾದ ಶ್ರೀನಿವಾಸ ನಡುವನಹಳ್ಳಿ, ತಬಲಾ ವಾದಕರಾದ ಸಣ್ಣಪ್ಪ ಗೋಣಿ ತುಮಕೂರು, ಕ್ಯಾಷಿಯೂ ವಾದಕರಾದ ಕೆ.ಹೆಚ್.ಕುಮಾರಸ್ವಾಮಿ, ದ್ರಾಮ ಮಾಸ್ಟರ್ ನಟರಾಜ್, ಭಜನೆ ತಾಯಮ್ಮ ಇವರನ್ನು ಸನ್ಮಾನಿಲಾಯಿತು.
ಈ ಸಂದರ್ಭ ಮಾತನಾಡಿದ ಡಿ.ಪಿ.ವೇಣುಗೋಪಾಲ ಅವರು, ವೀರೇಂದ್ರ ಹೆಗ್ಗಡೆಯವರು 25 ನವೆಂಬರ್ 1948ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸಿದರು. 20ನೇ ವಯಸ್ಸಿಗೆ ಬಂದಾಗಲೇ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿ, ಅಂದಿನಿಂದಲೂ ಆರೋಗ್ಯ, ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ, ಕೃಷಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಕಾರ್ಯಕ್ಕೆ ಹಲವಾರು ಪ್ರಶಸ್ತಿಗಳು ದೊರೆತಿವೆ ಎಂದರು.
ಸಮಾರಂಭದಲ್ಲಿ ಕಲ್ಪತರು ಗೆಳೆಯರು ಬಳಗದ ವಸಂತಯ್ಯ ಗೋವಿಂದಾಗಟ್ಟ, ಮನು ಜಕ್ಕನಹಳ್ಳಿ, ರೇಣುಕಾರಾದ್ಯ, ರವಿದ್ವಾರನಹಳ್ಳಿ, ಕಡೆಹಳ್ಳಿ ಸಿದ್ದೇಗೌಡ, ರಾಜಕುಮಾರ್, ಹನುಮಂತಯ್ಯ, ಅರವಿಂದ, ಲೋಕೇಶ್ ಗೋವಿಂದಘಟ್ಟ, ಪುಟ್ಟರಾಜು ದುಮ್ಮನಹಳ್ಳಿ, ಶಿವರಾಜು ಮಹೇಶ್ ಗೋಣಿ ತುಮಕೂರು, ಪಿ.ಓ.ಯಶೋಧರ, ಮಹೇಂದ್ರ ವಿಶ್ವಕರ್ಮ, ಡಿ.ಪಿ.ವೇಣುಗೋಪಾಲ್ ಮತ್ತಿತರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700