nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    August 14, 2026

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!

    August 14, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್
    • ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ
    • ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!
    • ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ
    • ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
    • ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    • ಆ.29: ಪಾವಗಡದಲ್ಲಿ ಉದ್ಯೋಗ ಮೇಳ
    • ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡ್ರೋನ್ ಕಾರ್ಯಾಚರಣೆ: ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯಾಧಿಕಾರಿಗಳು
    ಜಿಲ್ಲಾ ಸುದ್ದಿ July 27, 2025

    ಡ್ರೋನ್ ಕಾರ್ಯಾಚರಣೆ: ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯಾಧಿಕಾರಿಗಳು

    By adminJuly 27, 2025No Comments2 Mins Read
    elephant

    ಸರಗೂರು:   ತಾಲೂಕಿನಲ್ಲಿ ಫಸಲು ತಿಂದು, ನಾಶಪಡಿಸಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಡ್ರೋನ್ ಕಾರ್ಯಾಚರಣೆ ಮೂಲಕ ಕಾಡಿಗಟ್ಟುವ ಕಾರ್ಯ ಆರಂಭವಾಗಿದ್ದು, ಕಾಡಾನೆಯನ್ನು  ಕಾಡಿಗೆ ಹೊರಡಿಸಲು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಕಳೆದ ಆರು ದಿನಗಳಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಮೂರು ಕಾಡಾನೆಗಳನ್ನು ಮೊಳೆಯೂರು ವನ್ಯಜೀವಿ ವಲಯಕ್ಕೆ ಹಿಮ್ಮೆಟ್ಟಿಸಲಾಗಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು, ರೈತರು ಮತ್ತು ಸಂಘ–ಸಂಘಗಳು ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

    ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿಸಿಎಫ್ ನಂದೀಶ್.ಎಲ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸಿಎಫ್ ಸುಮಿತ್ರ ಎಸ್‌ರವರ ನೇತೃತ್ವದಲ್ಲಿ  ಎಲ್‌ ಟಿಎಫ್ ತಂಡ, ಇಟಿಎಫ್ ಹುಣಸೂರು ತಂಡ ಡೋನ್ ಕಾರ್ಯಾಚರಣೆ ಕೈಗೊಂಡು, ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ನಡೆಸಿದರು.

    ನಮ್ಮ ಕಾಡಿನ ಹತ್ತಿರ ರೈತರ ಜಮೀನುಗಳು ಇದ್ದು, ಈ ಸಮಯದಲ್ಲಿ ಕಾಡು ಪ್ರಾಣಿಗಳನ್ನು ಹಾಗೂ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಿದರೂ ಮತ್ತೆ ಮತ್ತೆ ಜಮೀನಿಗೆ ಬರುತ್ತಿವೆ. ಕಾಡಿನ ಹತ್ತಿರ ಜಮೀನಿನಲ್ಲಿ ರೈತರು ಬಾಳೆ, ಇತರೆ ಬೆಳೆಯನ್ನು ಬೆಳೆಯುತ್ತಾರೆ.  ಹೀಗಾಗಿ ಅವನ್ನು ತಿನ್ನಲು ಕಾಡಾನೆಗಳು ಪ್ರತಿದಿನ ಕಾಡು ಬಿಟ್ಟು ಜಮೀನಿಗೆ ಬರುತ್ತಿವೆ. ಇದರಿಂದ ನಾವುಗಳು ರಾತ್ರಿ ಹಗಲು ಎನ್ನದೆ ಪ್ರತಿದಿನ ಕಾಡಾನೆಗಳನ್ನು ಕಾಡಿಗೆ ಓಡಿಸಿದ್ದರೂ, ಇನ್ನೂ ಯಾವುದೋ ಕಡೆಯಿಂದ ಮತ್ತೆ ಬರುತ್ತಿವೆ. ನಾವುಗಳು ಕಾಡಾನೆ ಎಲ್ಲಿ ಬರುತ್ತೋ ಅನ್ನೋದಕ್ಕೆ ಡ್ರೋನ್ ಕ್ಯಾಮೆರಾ ಬಳಸಿಕೊಂಡು ಕಂಡು ಹಿಡಿಯಲು ಮುಂದಾಗಿದ್ದು, ಅದರಲ್ಲಿ ಮೂರು ಕಾಡಾನೆಯನ್ನು ಕಾಡಿಗೆ ಓಡಿಸಿದ್ದೇವೆ. ಇನ್ನೂ ಒಂದು ಆನೆಯನ್ನು ಇಂದು ನಾಳೆ ಹೊರಡಿಸಲಾಗುವುದು ಎಂದು ಎಸಿಎಫ್ ಸುಮೀತ್ರ ಎಸ್  ತಿಳಿಸಿದರು.

    ಕಾಡಂಚಿನ ಭಾಗದಲ್ಲಿ ರೈತರ ಜಮೀನು ಇರುವುದರಿಂದ ಬಾಳೆ ತೋಟವನ್ನು ಮಾಡಲು ಮುಂದಾಗುತ್ತಾರೆ, ಇದನ್ನು ಕಾಡಾನೆ ನಾಶ ಮಾಡುತ್ತಿದೆ. ಹಾಗಾಗಿ ಬಾಳೆ ತೋಟ ಬಿಟ್ಟು ಬೇರೆ ಬೆಳೆಯನ್ನು ಮುಂದಾಗಿ ಎಂದು ರೈತರಿಗೆ ಸಲಹೆ ನೀಡಿದರು.

    ನಿರಂತರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಈಗಾಗಲೇ 3 ಕಾಡಾನೆಗಳನ್ನು ಮೊಳೆಯೂರು ವನ್ಯಜೀವಿ ವಲಯಕ್ಕೆ ಹಿಮ್ಮೆಟ್ಟಿಸಲಾಗಿದೆ. ಪ್ರತಿದಿನ ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಕಾಡಾನೆ ಕಂಡು ಬಂದರೆ ಭಯಪಡದೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದರೆ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸರಗೂರು ವಲಯದ ಆರ್‌ ಎಫ್‌ ಓ ಮಹಾಲಕ್ಷ್ಮಿ ತಿಳಿಸಿದ್ದಾರೆ.

    ಸರಗೂರು ವಲಯದ ಆರ್‌ ಎಫ್‌ ಓ ಮಹಾಲಕ್ಷ್ಮಿ, ನಂಜನಗೂಡು ವಲಯದ ಆರ್‌ ಎಫ್‌ ಓ ನಿತೀನ್ ಮತ್ತು ನುಗು ವಲಯದ ಆರ್‌ ಎಫ್‌ ಓ ವಿವೇಕ್ ಜೊತೆಯಲ್ಲಿ ಸರಗೂರು ವಲಯದ ಎಲ್ಲಾ ಡಿಆರ್‌ಎಫ್‌ ಓ ಅಕ್ಷಯ್ ,ಹಾಗೂ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ

    August 13, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    August 14, 2026

    ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್…

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!

    August 14, 2026

    ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ

    August 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.