ಶಿವಮೊಗ್ಗ, ಜೂ. 3 ಹೌದು. ಇದು ವಿಚಿತ್ರವಾದರೂ ಸತ್ಯ! ಪ್ರಸ್ತುತ ಮಾರುಕಟ್ಟೆಯಲ್ಲಿ ಲೀಟರ್ ಡಿಸೇಲ್ ದರ 89ದೆ! ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ, ಪ್ರತಿ ಲೀಟರ್ ಗೆ ಸರಿಸುಮಾರು 22ರೂ. ಹೆಚ್ಚು ದರ ಹೆಚ್ಚು ನೀಡಿ ಖರೀದಿಸುತ್ತಿದೆ!ಇದು ಕೆ.ಎಸ್.ಆರ್.ಟಿ.ಸಿ.ಗೆ ಅಕ್ಷರಶಃ ದುಬಾರಿ ಯಾಗಿ ಪರಿಣಮಿಸಿದೆ. ಇಂಧನ ವೆಚ್ಚ ಕಾರಣದಿಂದಲೇ ಹಲವೆಡೆ ಬಸ್ ಓಡಿಸಲು ಹಿಂದೇಟು ಹಾಕುವಂತಾಗಿದೆ. ಈ ಕಾರಣದಿಂದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಪೆಟ್ರೋಲ್ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಮುಂದಾಗುತ್ತಿದ್ದಾರೆ.
ಆದರೆ ಇದಕ್ಕೂ ಅಡ್ಡಗಾಲು ಹಾಕುವ ಹುನ್ನಾರಗಳು ನಡೆಯುತ್ತಿರುವುದು ಸತ್ಯ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಇಂಧನ ಮಾರಾಟ ಮಾಡದಂತೆ ಬಂಕ್ ಗಳಿಗೆ ಪರೋಕ್ಷ ಒತ್ತಡ ಹಾಕಲಾಗುತ್ತಿದೆ. ತೈಲ ಕಂಪೆನಿಯಿಂದಲೇ ನೇರವಾಗಿ ಇಂಧನ ಖರೀದಿಸುವ ತಂತ್ರಗಳು ನಡೆಯುತ್ತಲೆ ಇದೆ.
ನಷ್ಟ: ಕಳೆದೆರೆಡು ವರ್ಷಗಳ ಅವಧಿಯಲ್ಲಿ, ಕೋವಿಡ್ ಕಾರಣದಿಂದ ಸರ್ಕಾರಿ ಸಾರಿಗೆ ಸಂಸ್ಥೆಯು ಭಾರೀ ನಷ್ಟಕ್ಕೀಡಾಗಿದೆ. ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿತ್ತು. ಪ್ರಸ್ತುತ ಸಂಸ್ಥೆ ಚೇತರಿಸಿಕೊಳ್ಳುತ್ತಿದ್ದ ಸಂಸ್ಥೆಯ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಬರುತ್ತಿದೆ. ಈ ನಡುವೆ ಕಳೆದ ಕೆಲ ತಿಂಗಳುಗಳಿಂದ, ಕೆ.ಎಸ್.ಆರ್.ಟಿ.ಸಿ.ಗೆ ತೈಲ ಪೂರೈಕೆ ಮಾಡುವ ಕಂಪೆನಿಗಳು, ಹೆಚ್ಚು ಬೆಲೆಗೆ ಡಿಸೇಲ್ ಮಾರಾಟ ಮಾಡುತ್ತಿವೆ. ಇದು ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಸರ್ಕಾರಿ ಸಂಸ್ಥೆಗೆ ದುಬಾರಿ ದರಕ್ಕೆ ತೈಲ ಮಾರಾಟ ಮಾಡುತ್ತಿದ್ದರೂ, ಸರ್ಕಾರ ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಒಟ್ಟಾರೆ ಕೆ.ಎಸ್.ಆರ್.ಟಿ.ಸಿ. ಸರ್ಕಾರಿ ಸಂಸ್ಥೆಯಾಗಿದೆ. ಲಾಭಕ್ಕಿಂತ ಜನಪರ ಸೇವೆ ಧ್ಯೇಯವಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಮಹತ್ತರ ಇಲಾಖೆಯಾಗಿದೆ ಎಂಬುವುದನ್ನು ರಾಜ್ಯ ಸರ್ಕಾರ ಮರೆಯಬಾರದು. ತನ್ನ ಅಧೀನದ ಸಂಸ್ಥೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿದೆಯೇ? ಕಾದು ನೋಡಬೇಕಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


