ಚೀನಾ ಮತ್ತು ಮ್ಯಾನ್ಮಾರ್ ನಲ್ಲಿ ಭೂಕಂಪ ಸಂಭವಿಸಿದೆ. ಚೀನಾದ ಕ್ಸಿಜಾಂಗ್ ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ರ ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.2ರಷ್ಟು ಭೂಕಂಪ ದಾಖಲಾಗಿದೆ. ಭೂಮಿಯಿಂದ 30 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ಭೂಕಂಪ ವಿಜ್ಞಾನದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಕ್ಸಿಜಾಂಗ್ ನಲ್ಲಿ ಭೂಕಂಪ ಸಂಭವಿಸಿದ ಕೆಲವು ಗಂಟೆಗಳ ನಂತರ, ನೆರೆಯ ಮ್ಯಾನ್ಮಾರ್‌ನಲ್ಲಿ ಮತ್ತೊಂದು ಭೂಕಂಪದ ಅನುಭವವಾಯಿತು. ಮ್ಯಾನ್ಮಾರ್‌ನಲ್ಲಿ ತಡರಾತ್ರಿ 2:15 ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2 ರಷ್ಟು ದಾಖಲಾಗಿದೆ.
ಭೂಮಿಯಿಂದ 7 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ಭೂಕಂಪ ವಿಜ್ಞಾನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಸದ್ಯದ ಮಾಹಿತಿಯ ಪ್ರಕಾರ ಎರಡು ದೇಶಗಳಲ್ಲಿ ಭೂಕಂಪದಿಂದ ಯಾವುದೇ ಹಾನಿಯಾಗಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296