ಚಿಕ್ಕಮಗಳೂರು: ಎಗ್ ರೈಸ್ ತಿಂದ ದುಡ್ಡನ್ನು ಕೇಳಿದ್ದಕ್ಕೆ ಮೂವರು ನಡು ರಸ್ತೆಯಲ್ಲಿಯೇ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅಕ್ಕಪಕ್ಕದವರೊಂದಿಗೆ ಮಾರಾಮಾರಿ ನಡೆಸಿರುವ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ.
ತಾಲೂಕಿನ ಸಗನೀಪುರದ ಯುವಕರು ಹಲ್ಲೆ ನಡೆಸಿದವರು ಎಂದು ಹೇಳಲಾಗಿದ್ದು, ಎಗ್ ರೈಸ್ ತಿಂದ ಬಳಿಕ ಹಣ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಈ ವೇಳೆ ಫೈಬರ್ ಚೇರ್, ಮರದ ರೀಪರ್, ಎಗ್ ರೈಸ್ ಮಾಡುವ ಬಾಂಡ್ಲಿ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳಿಂದ ಯುವಕರು ಹಲ್ಲೆ ನಡೆದಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಯುವಕರು ಮದ್ಯ ಅಥವಾ ಗಾಂಜಾದ ಮತ್ತಿನಲ್ಲಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿದ್ದಾರೆ. ನಾವೇನು ಮಾಡುತ್ತಿದ್ದೇವೆ ಎನ್ನುವುದೇ ಯುವಕರಿಗೆ ಗೊತ್ತಿರಲಿಲ್ಲ. ಮನುಷ್ಯತ್ವವೇ ಇಲ್ಲದಂತೆ ವರ್ತಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700