ಕೆಲವೊಮ್ಮೆ ಒತ್ತಡದ ಕೆಲಸ ಅಥವಾ ಅನಾರೋಗ್ಯಕರ ವಾತಾವರಣವು ಅನೇಕರಿಗೆ ಕಿರಿಕಿರಿ ಉಂಟು ಮಾಡುತ್ತದೆ, ಹಾಗಾಗಿ ಇದು ಒಮ್ಮೊಮ್ಮೆ ಸ್ವಂತ ಉದ್ಯೋಗ ಪ್ರಾರಂಭಿಸಲು ಪ್ರೇರೇಪಿಸುತ್ತದೆ.
ಈಗ 42 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ್ ಗೌಡ ಅವರು ಕರ್ನಾಟಕದಲ್ಲಿ ಕತ್ತೆ ಹೈನುಗಾರಿಕೆ ಆರಂಭಿಸಲು ಖಾಸಗಿ ಕಂಪನಿಯ ಕೆಲಸವನ್ನು ತೊರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕರ್ನಾಟಕದಲ್ಲಿ ಪ್ರಥಮ ಪ್ರಯೋಗ ಎನ್ನಬಹುದಾದ ಈ ಕತ್ತೆ ಫಾರ್ಮಿಂಗ್ ನ್ನು ಜೂನ್ 8 ರಂದು ಪ್ರಾರಂಭಿಸಿದರು,ಇರಾ ಗ್ರಾಮದಲ್ಲಿ 11,132 ಚದರ ಗಜ ವಿಸ್ತೀರ್ಣದ ಜಾಗದಲ್ಲಿ ಫಾರ್ಮ್ ಸ್ಥಾಪಿಸಲು ಗೌಡರು 2020 ರಲ್ಲಿ ತಮ್ಮ ಕೆಲಸವನ್ನು ತೊರೆದರು.
ಅವರ ಫಾರ್ಮ್ ನಲ್ಲಿ ಕೋಳಿಗಳು ಮೇಕೆಗಳು ಆಗಲೇ ಇದ್ದವು, ಈಗ ಆರು ಹೊಸದಾಗಿ 20 ಕತ್ತೆಗಳನ್ನು ಜಮೀನಿಗೆ ಸೇರಿಸಲು ಮುಂದಾಗಿದ್ದಾರೆ.ಯಂತ್ರಗಳು ಮತ್ತು ಇತರ ತಂತ್ರಜ್ಞಾನಗಳು ಬಂದಂತೆ, ಧೋಬಿಗಳು ಕತ್ತೆಗಳನ್ನು ಬಳಸುವ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು, ಹೀಗಾಗಿ ಅದರ ಸಂಖ್ಯೆ ಕೂಡ ಕುಸಿಯತೊಡಗುತ್ತಾ ಬಂದಿತು.ಇದು ಅವರನ್ನು ಒಂದು ರೀತಿ ಯೋಚನೆಗೆ ಹಚ್ಚಿತು.
ಆದರೆ ಕತ್ತೆಯ ಸಾಕಾಣಿಕೆ ಕೇಂದ್ರದ ಯೋಚನೆಯನ್ನು ಇಟ್ಟಾಗ ಜನರಿಗೆ ಆರಂಭದಲ್ಲಿ ಇದು ಮನವರಿಕೆಯಾಗಲಿಲ್ಲ, ಆದರೆ ಅವರು ಕತ್ತೆಯ ಹಾಲು ರುಚಿಕರ,ದುಬಾರಿ, ಮತ್ತು ಔಷಧಿಯ ಗುಣಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ.ಇದಾದ ನಂತರ ಜನರಿಗೆ ಕತ್ತೆ ಹಾಲನ್ನು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಿಕ್ಕೆ ಆರಂಭಿಸಿದರು.
30 ಮಿಲಿ ಹಾಲಿನ ಪ್ಯಾಕ್ ಅನ್ನು ಚಿಲ್ಲರೆ ಗ್ರಾಹಕರಿಗೆ 150 ರೂಗಳಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಅವರ ಹತ್ತಿರದ ಮಾಲ್‌ಗಳು, ಮಾರ್ಟ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳಲ್ಲಿಯೂ ಇದು ಲಭ್ಯವಿರುತ್ತದೆ ಎಂದು ಅವರು ಹೇಳುತ್ತಾರೆ.ಈಗಾಗಲೇ 17 ಲಕ್ಷ ರೂಪಾಯಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಅವರು ಹೇಳುತ್ತಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


