ಕಲಬುರಗಿ: ಮುಸ್ಲಿಂ ಯುವತಿಯರ ಮದುವೆಯಾದ್ರೆ 5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕ ಯತ್ನಾಳ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಯತ್ನಾಳ್ ವಿರುದ್ಧ ವಿಜಯಪುರ ಹಾಗೂ ಕಲಬುರಗಿಯಲ್ಲಿ ಎಫ್ ಐಆರ್ ದಾಖಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮುಸ್ಲಿಂ ಹುಡುಗಿ ಪ್ರೀತಿಸಿ ಹಿಂದೂ ಹುಡುಗ ಮದುವೆ ಆದರೆ, 5 ಲಕ್ಷ ನಗದು ಘೋಷಣೆಯನ್ನ ಯತ್ನಾಳ್ ಮಾಡಿದ್ದಾರೆ. ಕೊಪ್ಪಳದಲ್ಲಿ ಈ ರೀತಿ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ ಬೀಳಗಿ ದೂರು ಕೊಟ್ಟಿದ್ದರು.
ಜೊತೆಗೆ ಯತ್ನಾಳ್ ಮೇಲೆ ಕಲಬುರ್ಗಿಯಲ್ಲೂ ದೂರು ದಾಖಲಾಗಿದ್ದು, ಅದನ್ನ ವಿಜಯಪುರ ಗಾಂಧಿಚೌಕ್ ಪೊಲಿಸ್ ಠಾಣೆಗೆ ಕಳಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC