ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಯರಳ್ಳಿ ಜಮೀನಿಲ್ಲಿ ಒಕ್ಕಣೆ ಮಾಡಲು ಹಾಕಿದ್ದ ರಾಗಿ, ಬತ್ತದ, ಹಾಗೂ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯ ರಾಗಿ, ಬತ್ತ, ಹುಲ್ಲು ಸೇರಿದಂತೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ತಾಲೂಕಿನ ಹ್ಯಾಂಡ್ ಪೋಸ್ಟ್ ಯರಳ್ಳಿ ಗ್ರಾಮದ ನಿವಾಸಿಯಾದ ರೈತ ಶಿವನಂಜು ಎಂಬುವರಿಗೆ ಸೇರಿದ, ಜಮೀನಿನಲ್ಲಿ ಹೊಕ್ಕಣೆ ಮಾಡಲು ಇರಿಸಿದ್ದ ರಾಗಿ, ಭತ್ತ, ಹುಲ್ಲುಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಬೆಂಕಿಯನ್ನು ನಂದಿಸಲು ಸತತ ಪ್ರಯತ್ನ ಮಾಡಿದ್ದಾರೆ ಆದರೆ ಅಷ್ಟರಲ್ಲಿ ಸಂಪೂರ್ಣ ಒಕ್ಕಣೆ ಮಾಡಬೇಕಿದ್ದ ಲಕ್ಷಾಂತರ ರೂ ಮೌಲ್ಯದ ರಾಗಿ, ಭಕ್ತ, ಹುಲ್ಲು, ಸಂಪೂರ್ಣ ಭಸ್ಮವಾಗಿದೆ.
ಬಳಿಕ ರೈತ ಶಿವನಂಜು ಮಾತನಾಡಿ, ಹ್ಯಾಂಡ್ ಪೋಸ್ಟ್ ನಲ್ಲಿರುವ ಕೆಲವು ಮಧ್ಯದ ಅಂಗಡಿ ಹಾಗೂ ಬಾರ್ ನವರು, ಮಧ್ಯ ಸೇವನೆ ಮಾಡಿರುವ ತ್ಯಾಜ್ಯಗಳನ್ನ ನಮ್ಮ ಜಮೀನಿನ ಬಳಿ ತಂದು ಬೆಂಕಿ ಹಚ್ಚುತ್ತಾರೆ, ಆದ್ದರಿಂದ ಇಂಥ ಘಟನೆ ನಡೆದಿದೆ ನಾವು ಹಲವು ಬಾರಿ ಅವರಿಗೆ ಹೇಳಿದ್ದೇವೆ, ಆದರೂ ಮತ್ತೆ ಇಲ್ಲೇ ತಂದು ತ್ಯಾಜ್ಯವನ್ನ ಬೆಂಕಿ ಹಚ್ಚಿ ಸುಟ್ಟು ಹಾಕುತ್ತಾರೆ. ಇವರು ಮಾಡಿರುವ ಕೆಲಸಕ್ಕೆ ಸಾಲಾ ಸೋಲ ಮಾಡಿ ಬೆಳೆದಿರುವ ಪಸಲು ನಮ್ಮ ಕೈ ಸೇರದೆ ಬೂದಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಂತರ ರೈತ ಶಿವನಂಜು ಅವರ ತಮ್ಮ ಕುಮಾರ್ ಮಾತನಾಡಿದರು. ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಎಂ. ಜಿ. ಸೋಮಣ್ಣ, ಪ್ರಮುಖ ಅಗ್ನಿಶಾಮಕ ಅಧಿಕಾರಿ ಎಸ್.ಮಂಜು, ವೈ. ಎಂ. ಗಣೇಶ್, ಟಿ.ಎಸ್. ಸುನೀಲ್, ಹೇಮಂತ್ ಕುಮಾರ್, ಎಂ.ಸಿ. ಮುನಿಸಿದ್ದನಾಯ್ಕ, ಯಲ್ಲಪ್ಪ, ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx