nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಟಾಕಿ ಅನಾಹುತ: ನಾರಾಯಣ ನೇತ್ರಾಲಯದಲ್ಲಿ 20 ಪ್ರಕರಣ!

    October 21, 2025

    ಪೊಲೀಸರ ತ್ಯಾಗಗಳನ್ನು ಸ್ಮರಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

    October 21, 2025

    ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತದಿಂದ ಮಾಜಿ ಅಧ್ಯಕ್ಷ ಸಾವು

    October 21, 2025
    Facebook Twitter Instagram
    ಟ್ರೆಂಡಿಂಗ್
    • ಪಟಾಕಿ ಅನಾಹುತ: ನಾರಾಯಣ ನೇತ್ರಾಲಯದಲ್ಲಿ 20 ಪ್ರಕರಣ!
    • ಪೊಲೀಸರ ತ್ಯಾಗಗಳನ್ನು ಸ್ಮರಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
    • ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತದಿಂದ ಮಾಜಿ ಅಧ್ಯಕ್ಷ ಸಾವು
    • ಕರ್ನಾಟಕ ಸಂಪನ್ಮೂಲ ಹೈಕಮಾಂಡ್ ಗೆ ಅರ್ಪಿಸಿದ ಕೀರ್ತಿ ಬಿಜೆಪಿಯದ್ದು: ಸಚಿವ ಪ್ರಿಯಾಂಕ್ ಖರ್ಗೆ
    • ನೀರಿನ ಟಬ್ ಗೆ ಬಿದ್ದ 11 ತಿಂಗಳ ಮಗು ಸಾವು
    • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ಕಂಪೆನಿ ನಿರ್ವಾಹಕನಿಗೆ ಪಂಗನಾಮ!
    • ತಿಪಟೂರು | ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರ ಪರದಾಟ
    • ಕವನ: ದೀಪಾವಳಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೇರಳ ಶೈಲಿಯ ಶ್ರೀ ಮಹಾಲಕ್ಷ್ಮೀಮದ್ಧರಲಕ್ಕಮ್ಮ ದೇವಾಲಯಕ್ಕೆ ಶಂಕುಸ್ಥಾಪನೆ
    ಚಿಕ್ಕನಾಯಕನಹಳ್ಳಿ February 1, 2025

    ಕೇರಳ ಶೈಲಿಯ ಶ್ರೀ ಮಹಾಲಕ್ಷ್ಮೀಮದ್ಧರಲಕ್ಕಮ್ಮ ದೇವಾಲಯಕ್ಕೆ ಶಂಕುಸ್ಥಾಪನೆ

    By adminFebruary 1, 2025No Comments2 Mins Read
    chikkanayakanahalli

    ಚಿಕ್ಕನಾಯನಹಳ್ಳಿ: ಐದುನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನಮ್ಮ ದೇಶ ಹಾಗೂ ಧರ್ಮವನ್ನ ಕಾಪಾಡಿಕೊಂಡು ಬಂದಿದ್ದಾರೆ.  ಈ ನಿಟ್ಟಿನಲ್ಲಿ ನಾವುಗಳು ಕೂಡ ಅವರ ಮಾರ್ಗದರ್ಶನದ ಸಂಸ್ಕಾರ ಸಂಸ್ಕೃತಿಯಲ್ಲೇ  ನಡೆಯಬೇಕು ಎಂದು ವಿಜಯನಗರ ಮಹಾ ಸಂಸ್ಥಾನ ಅರಸರಾದ 19ನೇ  ಶ್ರೀಕೃಷ್ಣದೇವರಾಯರು ಹೇಳಿದರು.

    ಪಟ್ಟಣದಲ್ಲಿ ನೂತನವಾಗಿ ಕೇರಳ ಶೈಲಿಯಲ್ಲಿ ಶ್ರೀ ಮಹಾಲಕ್ಷ್ಮೀ ಮದ್ಧರಲಕ್ಕಮ್ಮ ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.


    Provided by
    Provided by
    Provided by

    ಪ್ರಸ್ತುತ ಜನರು ಪಾಶ್ಚಿಮಾತ್ಯ ರಾಷ್ಟ್ರಗಳ ಇಂಗ್ಲೀಷ್ ಭಾಷೆಗೆ ಮಾರುಹೊಗುವುದಲ್ಲದೆ,  ದೇಶದಲ್ಲಿ ಅವಿಭಕ್ತ ಕುಟುಂಬಗಳ ವರ್ಜನೆಯಾಗುತ್ತಿರುವುದು ವಿಷಾದ ಸಂಗತಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾವು ಅಮೆರಿಕಾದಲ್ಲಿ ಇದ್ದು, ವಾಸಿಸಿ ಬಂದಿದ್ದಾದರು ನಮ್ಮ ದೇಶದ ಧರ್ಮ ಸಂಸ್ಕತಿ ಬೇರೆ ಯಾವ ರಾಷ್ಟ್ರದಲ್ಲೂ ಸಿಗುವುದಿಲ್ಲ. ನಮ್ಮ ರಾಜ ಮನೆತನದ ಕುಟುಂಬ ಆಗಿರ ಬಹುದು ಅಥವಾ ಜನ ಸಾಮಾನ್ಯರ ಕುಟುಂಬಗಳಾಗಿರ ಬಹುದು ಎಲ್ಲಾ ಅವಿಭಕ್ತ ಕುಟುಂಬದಲ್ಲಿ ಬದುಕಿ ಬಾಳುತ್ತಿದ್ದರು. ರಾಜನಾಗಲಿ ಸಾಮಾನ್ಯ ಪ್ರಜೆಯಾಗಲಿ ಗುರುವಿನ ಅನುಗ್ರಹ ಲಭಿಸಬೇಕು, ಈ ಅನುಭವವನ್ನ ಸ್ವತಃ ತಾವೇ ಪಡೆಕೊಂಡಿರುವುದಾಗಿ ತಿಳಿಸಿದರು.

    ವಿಜಯನಗರ ಸಾಮ್ರಾಜ್ಯದಲ್ಲಿ ದೇವಾಲಯಗಳಿಗೆ ಮಹತ್ವವನ್ನ ನೀಡಲಾಗಿತ್ತು. ನಾವು ಕೂಡ ಪಂಪ ವಿರೂಪಾಕ್ಷನನ್ನ ಭಕ್ತಿಯಿಂದ ಪೂಜಿಸುತ್ತೇವೆ. ದೇವರಲ್ಲಿ ನಮಗೆ ಅಪಾರವಾದ ನಂಬಿಕೆ ಇದೆ. ಪಟ್ಟಣದ ಮದ್ಧರಲಕ್ಕಮ್ಮ ದೇವಾಲಯದ ನಿರ್ಮಾಣಕ್ಕೆ ನಮ್ಮ ಹಸ್ತದಿಂದ ಶಂಕುಸ್ಥಾಪನೆ ಕಾರ್ಯ ನೆರವೇರಿದ್ದು, ನಮಗೆ ಸಂತೋಷ ತಂದಿದ್ದು, ದೇವಾಲಯ ಶೀಘ್ರವಾಗಿ ಪೂರ್ಣಗೊಂಡು ಲೋಕಾರ್ಪಣೆಯಾಗಿ ಪ್ರಬುದ್ಧಮಾನಕ್ಕೆ ಬರಲಿ ಎಂದು ಆಶಯದ ನುಡಿಗಳನ್ನಾಡಿದರು.

    ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪಟ್ಟಣದಲ್ಲಿ ಧರ್ಮಾನುಸಾರˌ ಸಮುದಾಯಾನುಸಾರ ಹಾಗೂ ಪ್ರತ್ಯೇಕ ಕುಟುಂಬಗಳ ಆರಾದ್ಯ ದೇವರುಗಳ ಅನೇಕ ದೇವಾಲಯಗಳು ಸ್ಥಾಪಿತವಾಗಿದೆ. ನಾನು ಕೂಡ ಮನೆಯಿಂದ ಆಚೆ ಹೊರಡುವ ಮುನ್ನ ದೇವರ ಪೂಜೆಯನ್ನ ನೆರವೇರಿಸಿ ಮುಂದಿನ ಕೆಲಸಗಳಿಗೆ ತೊಡಗುತ್ತೇನೆ. ಮನುಷ್ಯನಿಗೆ ಶಾಂತಿ ನೆಮ್ಮದಿ ಕಾಣಲು ಭಕ್ತರು ಇಷ್ಟಾರ್ಥ ಸಿದ್ದಿಪಡೆಯಲು ವಿವಿಧ ದೇವರನ್ನ ಬೇಡುತ್ತಾರೆ. ನಂಬಿದ ಭಕ್ತರನ್ನ ದೇವರು ಎಂದಿಗೂ ಕೈಬಿಡುವುದಿಲ್ಲ. ಮನಸ್ಸು ಶುದ್ಧವಾಗಿಟ್ಟುಕೊಂಡು ಇರುವಲ್ಲೆ ಭಗವಂತನ ಸಾಕ್ಷಾತ್ಕಾರ ಪಡಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ ಎಂದ ಅವರು, ಮದ್ದರ ಲಕ್ಕಮ್ಮ ದೇವಾಲಯಕ್ಕೆ ಸ್ವಂತಿಕೆಯಿಂದ ಒಂದು ಲಕ್ಷ ಕಾಣಿಕೆಯಾಗಿ ಹಾಗೂ ಸರ್ಕಾರದಿಂದ ಅನುದಾನ ನೀಡಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

    ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ  ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ,  ವಿಜಯನಗರ ಸಾಮ್ರಾಜ್ಯದ ಕಾಲಾಘಟ್ಟದಲ್ಲಿ ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಮದ್ಧರಲಕ್ಕಮ್ಮ ದೇವಿಯ ಪ್ರತಿಷ್ಟಾಪನೆಯಾಗಿತ್ತು ಎನ್ನುವ ಇತಿಹಾಸ ನಮ್ಮ ವಂಶದ ಪೂರ್ವಿಕರಿಂದ ತಿಳಿದು ಬರುತ್ತದೆ. ನಮ್ಮ ವಂಶದವರೇ ದೇವಾಲಯದಲ್ಲಿ ಪೂಜೆಗಳನ್ನ ನಡೆಸುತ್ತಾ ಬಂದಿದ್ದರು. ಅವರ ಮಾರ್ಗದರ್ಶನದಲ್ಲೇ ನಾವುಗಳು ಕೂಡ ದೇವರನ್ನ ಪೂಜಿಸಿಕೊಂಡು ಬಂದಿದ್ದೇವೆ. ದೇವಿಯ ಮಹಿಮೆಯಿಂದ  ನಂಬಿದ ಅನೇಕ ಭಕ್ತರಿಗೆ ಒಳಿತಾಗಿದೆ. ದೇವಾಲಯ ನಿರ್ಮಾಣಕ್ಕೆ ಸ್ಥಳ ಚಿಕ್ಕದ್ದಾಗಿರುವುದರಿದ ನಮ್ಮ ಮನೆಯ ಜಾಗವನ್ನ ದೇವಾಯಕ್ಕೆ ಬಿಟ್ಟು ಕೊಡಲಾಗಿದೆ. ಅಲ್ಲದೆ ಬುಡ್ಡಯ್ಯರ ನಾಗರಾಜು ಕುಟುಂಬ ಜಾಗವನ್ನ ನೀಡಿ ದೇವಾಲಯದ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ  ಶಾಸಕರು ಸೇರಿದಂತೆ ಅನೇಕ ದಾನಿಗಳು ತನುಮನ ಧನವನ್ನ ಅರ್ಪಿಸಿದ್ದಾರೆ. ದೇವಾಲಯವು ಕೇರಳ ಶೈಲಿಯಲ್ಲಿ ನಿರ್ಮಾಣವಾಗಲಿದೆ ಎಂದರು.

    ಗೊಡೇಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ಪರದೇಶೀಕೇಂದ್ರ ಸ್ವಾಮೀಜಿˌ ಮಾದಿಹಳ್ಳಿ ಶ್ರೀಶೈಲ ಗಿರಿರಾಜ ಶಾಖಾಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿˌ ಶ್ರವಣ ಬೆಳಗೊಳದ ಶಕ್ತಿಮಠದ ಬಸವ ಚೈತನ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯದ ಧರ್ಮದರ್ಶಿ ಸಿ.ಎನ್.ರಂಗಸ್ವಾಮಿˌಮುಖ್ಯ ಆಢಳಿತಾಧಿಕಾರಿ ಸಿ.ಎರ್.ಲಕ್ಷ್ಮೀಶ್ˌ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಹೆಚ್.ಆರ್.ವೆಂಕಟೇಶ್ˌ ಕಾರ್ಯಾಧ್ಯಕ್ಷ  ಜ್ಞಾನ ನಿಧಿ ಗೋವಿಂದರಾಜುˌ ಕಾರ್ಯದರ್ಶಿ ರಂಗರಾಜು ಅರಸ್ˌ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿˌ ಪುರಸಭಾ ಮಾಜಿ ಅಧ್ಯಕ್ಷ ದೊರೆಮುದ್ದಯ್ಯ, ವಕೀಲ ಸುನಿಲ್ˌ ಮಡಿವಾಳ ಸಂಘದ ನಾಗರಾಜು ಸೇರಿದಂತೆ ಮುಂತಾದವರಿದ್ದರು.  ಹಾಲುಮತ ಕುಲ ಕಸುಬಿನ ಕಂಬಳಿಯನ್ನ  ಶ್ರೀಕೃಷ್ಣದೇವರಾಯರಿಗೆ ಹೊದಿಸಿ ಗೌರವಿಸಲಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ | 6ನೇ ದಿನವೂ ರೈತರ ಪ್ರತಿಭಟನೆ

    October 16, 2025

    ಕನ್ನಡ ಶಾಲೆಗೆ ಬೀಗ ಹಾಕಲು ಬಿಇಓ ಒತ್ತಡ!

    March 20, 2025

    RTI ಅರ್ಜಿಗೆ ಸಿಗಲಿಲ್ಲ ಉತ್ತರ: ಚಿಕ್ಕನಾಯಕನಹಳ್ಳಿ ಪುರಸಭೆ ಮುಂಭಾಗ ಸದಸ್ಯನಿಂದ ಪ್ರತಿಭಟನೆ

    March 12, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪಟಾಕಿ ಅನಾಹುತ: ನಾರಾಯಣ ನೇತ್ರಾಲಯದಲ್ಲಿ 20 ಪ್ರಕರಣ!

    October 21, 2025

    ಬೆಂಗಳೂರು: ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸಲು ಹೋಗಿ ಅನಾಹುತಕ್ಕೆ ಸಿಲುಕಿದ ಒಟ್ಟು 20 ಪ್ರಕರಣಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ನಾರಾಯಣ…

    ಪೊಲೀಸರ ತ್ಯಾಗಗಳನ್ನು ಸ್ಮರಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

    October 21, 2025

    ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತದಿಂದ ಮಾಜಿ ಅಧ್ಯಕ್ಷ ಸಾವು

    October 21, 2025

    ಕರ್ನಾಟಕ ಸಂಪನ್ಮೂಲ ಹೈಕಮಾಂಡ್ ಗೆ ಅರ್ಪಿಸಿದ ಕೀರ್ತಿ ಬಿಜೆಪಿಯದ್ದು: ಸಚಿವ ಪ್ರಿಯಾಂಕ್ ಖರ್ಗೆ

    October 21, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.