ನವದೆಹಲಿ: ಗಣರಾಜ್ಯೋತ್ಸವ ಪರೇಡ್ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು ಎಂದು ಐಬಿ ಮಂಗಳವಾರ ಎಚ್ಚರಿಕೆ ನೀಡಿದ್ದು, ಉಗ್ರರು ಗುಂಪನ್ನು ಗುರಿಯಾಗಿಸಬಹುದು ಎಂದು ಹೇಳಿದೆ.
ಐಬಿ ನಿಷೇಧಿತ ಸಂಘಟನೆಗೆ ಖಲಿಸ್ತಾನಿ ಲಿಬರೇಶನ್ ಫೋರ್ಸ್ ಎಂದು ಹೆಸರಿಸಿದೆ ಮತ್ತು ಈ ಸಂಘಟನೆಯು ದಾಳಿ ನಡೆಸಬಹುದು ಎಂದು ಹೇಳಿದೆ.
ಗಾಜಿಪುರದಲ್ಲಿ ವಶಪಡಿಸಿಕೊಂಡಿದ್ದ ಐಎಡಿ ಬಾಂಬ್ ಗಳು ಪಾಕಿಸ್ತಾನದ ಮೂಲದವು ಎಂದು ಗುರುತಿಸಲಾಗಿದೆ. IED ಅಮೋನಿಯಂ ನೈಟ್ರೇಟ್, RDX, ಒಂಬತ್ತು-ವೋಲ್ಟ್ ಬ್ಯಾಟರಿ ಮತ್ತು ಕಬ್ಬಿಣದ ಸಣ್ಣ ತುಂಡುಗಳನ್ನು ಒಳಗೊಂಡಿರುವ ಸ್ಪೋಟಕಗಳನ್ನ ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳು ಸುಮಾರು 3 ಕೆಜಿ ಸ್ಫೋಟಕಗಳನ್ನು ನಾಶಪಡಿಸಿದವು ಮತ್ತು ಉಳಿದವುಗಳನ್ನು ತನಿಖೆಗಾಗಿ ಹರಿಯಾಣದ ಮನೇಸರ್ ನಲ್ಲಿರುವ ರಾಷ್ಟ್ರೀಯ ಬಾಂಬ್ ಡೇಟಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ದೇಶದಲ್ಲಿ ಕೋಮು ಉದ್ವಿಗ್ನತೆಯನ್ನ ಹರಡುವುದಕ್ಕಾಗಿ ಮಾದಕ ವಸ್ತುಗಳ ಹಣದದ ಮೂಲಕ ನಿರಂತರವಾಗಿ ಐಇಡಿಗಳನ್ನ ರವಾನೆ ಮಾಡುತ್ತಿದ್ದಾರೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy