ಬೆಂಗಳೂರು: ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ನೀಡಿದೆ. ಇದರ ನಡುವೆಯೇ ಈ ಬಾರಿ ಕೆಎಸ್ ಆರ್ ಟಿಸಿ ಟಿಕೆಟ್ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರಿಗೆ ಭಾರೀ ದಂಡ ವಿಧಿಸಿದೆ.
ಟಿಕೆಟ್ ಫ್ರೀ ಎಂಬ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ಪಡೆಯದೇ ಯಾವುದೇ ಮಹಿಳೆಯರು ಪ್ರಯಾಣಿಸುವಂತಿಲ್ಲ. ಒಂದು ವೇಳೆ ಪರಿಶೀಲನೆ ನಡೆಸುವ ವೇಳೆ ಟಿಕೆಟ್ ಇಲ್ಲವಾದರೆ ಭಾರೀ ದಂಡವನ್ನೇ ಪಾವತಿಸಬೇಕಾಗುತ್ತದೆ. ಪುರುಷರು ಕೂಡ ಟಿಕೆಟ್ ಪಡೆದೇ ಕಡ್ಡಾಯವಾಗಿ ಪ್ರಯಾಣಿಸಬೇಕು.
ಈ ಬಾರಿ ಸಾರಿಗೆ ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಂದ ಕೆಎಸ್ ಆರ್ಟಿಸಿ ಭರ್ಜರಿ ದಂಡವನ್ನು ವಸೂಲಿ ಮಾಡಿದೆ. ಕೆಎಸ್ ಆರ್ ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಏಪ್ರಿಲ್ ತಿಂಗಳಲ್ಲಿ 3,780 ಟಿಕೆಟ್ ರಹಿತ ಪ್ರಯಾಣಿಕರಿಗೆ 7,32,495 ರೂಪಾಯಿಗಳ ದಂಡವನ್ನು ವಿಧಿಸಿದೆ. ಅಷ್ಟೇ ಅಲ್ಲದೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಗಳನ್ನು ಜರುಗಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————