ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ವಿವಾಹವೊಂದು ದಿಢೀರ್ ಆಗಿ ಸ್ಥಗಿತಗೊಂಡಿರುವ ಘಟನೆ ನಡೆದಿದ್ದು, ತಾಳಿ ಕಟ್ಟುವ ವೇಳೆ ವಧುವೇ ವಿವಾಹವನ್ನು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ.
ಮದುವೆ ಮನೆಗೆ ಮದುಮಗ ಕಂಠಪೂರ್ತಿ ಕುಡಿದು ಬಂದಿದ್ದು, ಆರತಿ ತಟ್ಟೆಯನ್ನು ಎಸೆದು ರಂಪಾಟ ಮಾಡಿದ್ದ. ತನ್ನ ಸ್ನೇಹಿತರೊಂದಿಗೆ ಜಗಳವಾಡಿ ರಂಪಾಟ ಮಾಡಿದ್ದ. ಈತನ ಜೊತೆಗೆ ಜೀವನ ಪೂರ್ತಿ ಬದುಕಬೇಕೇ? ಎನ್ನುವ ಪ್ರಶ್ನೆ ಎದ್ದಾಗಲೇ, ವಧು ತನ್ನ ಮದುವೆಯ ನಿರ್ಧಾರವನ್ನು ಬದಲಿಸಿಕೊಂಡಳು, ಮದುವೆಯನ್ನೇ ರದ್ದು ಮಾಡಿದ್ದಾಳೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮದುವೆಗೆ ನಿರಾಕರಿಸಿದ ವಧು ಬಂಧುಮಿತ್ರರಲ್ಲಿ ನನ್ನನ್ನು ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾಳೆ.
ವರನ ಕಡೆಯವರು ಕ್ಷಮೆ ಕೇಳಿ ಸಂಧಾನಕ್ಕೆ ಯತ್ನಿಸಿದರು. ಆದರೆ ತನ್ನ ಭವಿಷ್ಯದ ದೃಷ್ಟಿಯಿಂದ ವಧು ಗಟ್ಟಿ ನಿರ್ಧಾರ ತೆಗೆದುಕೊಂಡಳು. ಆಕೆಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx