nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ

    October 10, 2026

    ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ

    October 10, 2026
    Facebook Twitter Instagram
    ಟ್ರೆಂಡಿಂಗ್
    • ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…
    • ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ
    • ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ
    • ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ
    • ಕೆಇಎ ಯುಜಿ ನೀಟ್ — 2026: ವೈದ್ಯಕೀಯ ಸೀಟುಗಳ ಆನ್‌ ಲೈನ್ ಸ್ಟ್ರೇ ವೇಕೆನ್ಸಿ ಸುತ್ತು ಪ್ರಕಟ; ಅಕ್ಟೋಬರ್ 13 ರಿಂದ ಹೊಸ ನೋಂದಣಿ ಆರಂಭ
    • ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ
    • SIR ಹಾಗೂ ಜ್ಞಾನೇಶ್ ಕುಮಾರ್ ಅಡಿಯಲ್ಲಿ ಮತದಾನ ಒಪ್ಪುವುದಿಲ್ಲ: AIDSO
    • ಬರಪೀಡಿತ ತುಮಕೂರು: ಸಾಲ ವಸೂಲಾತಿಯಲ್ಲಿ ಕಠಿಣ ಕ್ರಮ ಕೈಗೊಳ್ಳದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುಡಿಸಲುಗಳನ್ನು ತೆರವುಗೊಳಿಸಲು ಯತ್ನ: ಅರಣ್ಯಾಧಿಕಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಖಡಕ್ ವಾರ್ನಿಂಗ್
    ತುಮಕೂರು March 23, 2022

    ಗುಡಿಸಲುಗಳನ್ನು ತೆರವುಗೊಳಿಸಲು ಯತ್ನ: ಅರಣ್ಯಾಧಿಕಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಖಡಕ್ ವಾರ್ನಿಂಗ್

    By adminMarch 23, 2022No Comments2 Mins Read
    dc gowrishankar

    ತುಮಕೂರು ಗ್ರಾಮಾಂತರ : ಅರಣ್ಯ ಇಲಾಖೆ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಕುಂದೂರಿನಲ್ಲಿ  ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿರುವ ಶಾಸಕ ಡಿ.ಸಿ.ಗೌರಿಶಂಕರ್ ಜಂಟಿ ಸರ್ವೇ ಆಗುವವರೆಗೂ ಸ್ಥಳ ಕಾಲಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಊರ್ಡಿಗೆರೆ ಹೋಬಳಿಯ ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ವಸತಿ ರಹಿತರು ಗುಡಿಸಲು ಹಾಕಿಕೊಂಡು ವಾಸವಿದ್ದರು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ  ಈ ಸ್ಥಳಕ್ಕೆ ಅರಣ್ಯ ಇಲಾಖೆಗೆ ಸೇರಿದ್ದು, ಕೂಡಲೇ ಗುಡಿಸಲನ್ನು ತೆರವುಗೊಳಿಸಬೇಕೆಂದು ತಿಳಿಸಿ ಅವರ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವಿಚಾರವಾಗಿ ಗುಡಿಸಲು ನಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ಈ ವಿಷಯ ವ್ಯಾಪಕವಾಗಿ ಹರಡುತ್ತಿದ್ದಂತೆ ಸುದ್ದಿ ತಿಳಿದು ಖುದ್ದು ಸ್ಥಳಕ್ಕೆ ಬುಧವಾರ ಬೆಳಗಿನ ಜಾವ ಭೇಟಿ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್ ಅಲ್ಲಿಯ ಸ್ಥಳ ಪರಿಶೀಲನೆ ನಡೆಸಿ,  ಸ್ಥಳದ ದಾಖಲೆ ಪರಿಶೀಲನೆ ಮಾಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಕೆರೆ ಮಾಡಿ ಮಾತನಾಡಿ, ನಿಮ್ಮ ಅರಣ್ಯ ಇಲಾಖೆಯ ಜಾಗ ನಮಗೆ ಬೇಡ. ಸರ್ವೇ ಆಗಲಿ. ಎಲ್ಲಿ ಸರ್ವೇ ನಂಬರ್ ಜಾಗ ಬರುತ್ತದೆಯೋ ಅಲ್ಲಿಯೇ ನನ್ನ ಜನಕ್ಕೆ ಮನೆ ಕಟ್ಟಿಕೊಡುತ್ತೇನೆ. ಅಲ್ಲಿಯವರೆಗೂ ನೀವು ಜಾಗಕ್ಕೆ ಕಾಲಿಡಬೇಡಿ. ಈ ಬಗ್ಗೆ ತಹಶೀಲ್ದಾರ್ ಅವರಿಗೂ ಮಾತನಾಡುತ್ತೇನೆ, ಜಂಟಿ ಸರ್ವೆ ನಡೆಯುವವರೆಗೂ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಕಾಲಿಡಬಾರದೆಂದು ಖಡಕ್ ಸೂಚನೆ ನೀಡಿದರು. ಇನ್ನು ಇದೇ ವೇಳೆ ಗುಡಿಸಲು ನಿವಾಸಿಗಳೊಂದಿಗೆ ಮಾತನಾಡಿದ ಶಾಸಕರು ನಾನೇ ನಿಂತು ಈ ಜಾಗವನ್ನು ಮಟ್ಟ ಮಾಡಿಸಿ ಮನೆಕಟ್ಟಿಕೊಡುವವರೆಗೂ  ನಿಮ್ಮ ಜೊತೆಗಿರುತ್ತೇನೆ, ಯಾವುದೇ ಕಾರಣಕ್ಕೂ ಹೆದರುವುದು ಬೇಡ, ಸರ್ವೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡು ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇನೆ ಎಂದು  ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಹಾಲನೂರು ಅನಂತ್, ಬೆಳಗುಂಬ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಚೌಡಪ್ಪ, ಪಾಪಯ್ಯ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

    ವರದಿ: ರಾಜೇಶ್ ರಂಗನಾಥ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ

    October 10, 2026

    ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ

    October 10, 2026

    KSET ಪರೀಕ್ಷೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

    October 9, 2026

    Leave A Reply Cancel Reply

    Our Picks

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026

    ನಾನಾ ಪಾಟೇಕರ್ ಆಸ್ತಿ–ಪಾಸ್ತಿ ಎಷ್ಟು ಗೊತ್ತಾ? ಅವರ ಕುಟುಂಬದ ಬಗ್ಗೆ ಇಲ್ಲಿದೆ ರಹಸ್ಯಕರ ಮಾಹಿತಿ!

    October 9, 2026

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಓಡಾಡಲು ಹಲವರು ಹೆದರುತ್ತಾರೆ. ಅದರಲ್ಲೂ ಸ್ಮಶಾನ, ಹಳೆಯ ಕಟ್ಟಡಗಳು ಅಥವಾ ಜನರ ಓಡಾಟವಿಲ್ಲದ ಜಾಗಗಳ…

    ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ

    October 10, 2026

    ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ

    October 10, 2026

    ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ

    October 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.