nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026
    Facebook Twitter Instagram
    ಟ್ರೆಂಡಿಂಗ್
    • ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
    • ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    • ಆ.29: ಪಾವಗಡದಲ್ಲಿ ಉದ್ಯೋಗ ಮೇಳ
    • ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
    • ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
    • ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
    • ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
    • ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು
    ಜಿಲ್ಲಾ ಸುದ್ದಿ July 10, 2025

    ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು

    By adminJuly 10, 2025No Comments2 Mins Read
    guru purinima

    ಸರಗೂರು:  ಗುರು ಪೂರ್ಣಿಮಾವನ್ನು ಆಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಗುರು ಪೂರ್ಣಿಮಾವನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂದವ್ಯವನ್ನು ಗೌರವಿಸುವುದಕ್ಕಾಗಿ ಆಚರಿಸಲಾಗುವುದು ಎಂದು ಪಡವಲು ವೀರಕ್ತ ಮಠದ ಮಹದೇವಸ್ವಾಮಿಗಳು ತಿಳಿಸಿದರು.

    ಪಟ್ಟಣದ 11 ವಾರ್ಡಿನ ಬಿಡಗಲು ಗ್ರಾಮದ ವ್ಯಾಪ್ತಿಯ ಪಡವಲು ವೀರಕ್ತ ಮಠದಲ್ಲಿ ಗುರುವಾರದಂದು ಗುರು ಪೂರ್ಣಿಮೆ ಪೂಜೆ ಕಾರ್ಯಕ್ರಮ ಹಾಗೂ ಕಾಳ ಓಡಯ ಗುರುಗಳ ಗದ್ದಿಗೆ ಮತ್ತು ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ದಾಸೋಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು.

    ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಾಹಣಾಧಿಕಾರಿ ಎ ಇ ರಘು ಮಾತನಾಡಿ, ಗುರುಗಳನ್ನು ದೇವರೆಂದು ಪೂಜಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಿಡಲಾದ ದಿನವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಮಹತ್ವ ತುಂಬಾನೇ ವಿಶೇಷವಾಗಿರುತ್ತದೆ. ಗುರು ನಮಗೆ ಪ್ರತಿಯೊಂದು ಹಂತದಲ್ಲೂ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ನೀಡುವವನಾಗಿದ್ದಾನೆ. ಅವರು ನಮಗೆ ಪೋಷಕರಾಗಿದ್ದರು ಸರಿ, ಗುರುಗಳಾಗಿದ್ದರು ಸರಿ ನಾವೆಲ್ಲರೂ ಗುರು ಪೂರ್ಣಿಮೆಯಂದು ಅವರನ್ನು ಸ್ಮರಿಸುತ್ತೇವೆ ಎಂದು ತಿಳಿಸಿದರು.

    ಗುರು ಪೂರ್ಣಿಮಾ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಲ್ಲ. ಬದಲಾಗಿ, ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಗುರುವನ್ನು ಗೌರವಿಸುವ ದಿನವಾಗಿದೆ. ಅದು ನಮಗೆ ಶಾಲೆಯಲ್ಲಿ ವಿದ್ಯೆಯನ್ನು ಕಲಿಸಿದ ಗುರುಗಳೇ ಆಗಿರಬೇಕೆಂದೇನಿಲ್ಲ. ನಮಗೆ ಮೊದಲ ಮಾತನ್ನು ಕಲಿಸಿದ ನಮ್ಮ ಪೋಷಕರಿಗೆ ಆಗಿರಬಹುದು, ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನವನ್ನು ನೀಡಿದವರಿಗೆ ಆಗಿರಬಹುದು ಈ ದಿನ ಗೌರವವನ್ನು ಸೂಚಿಸಲಾಗುತ್ತದೆ ಎಂದರು.

    ಕೆ.ಆರ್.ನಗರ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ, ಕೆಲವೊಂದು ಕಡೆಗಳಲ್ಲಿ ಈ ದಿನ ಜನರು ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಿ ಗುರುವನ್ನು ಸ್ಮರಿಸಿ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ದಿನ ಗುರುಗಳಿಗೆ ಉಡುಗೊರೆಯನ್ನು ನೀಡುತ್ತಾರೆ. ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಗುರುವಿಗೆ ಸಂಬಂಧಿಸಿದ ಕಥೆಗಳನ್ನು, ಭಜನೆಗಳನ್ನು ಮತ್ತು ಮಂತ್ರಗಳನ್ನು ಈ ದಿನ ಪಠಿಸಲಾಗುತ್ತದೆ ಎಂದು ತಿಳಿಸಿದರು.

    ಈ ಗುರು ಪೂರ್ಣಿಮೆ  ದಿನದಂದು ಮಠದಲ್ಲಿ ದಾಸೋಹ ನಡೆಸಲಾಯಿತು.  ಈ ಸಂದರ್ಭದಲ್ಲಿ ಪೂಜೆ ಮತ್ತು ದಾಸೋಹ ಸೇವಾರ್ಥದಾರು ಸುಲೋಚನಾ ಕುಟುಂಬದವರು, ವೆಂಕಟಯ್ಯಛತ್ರ ಮೈಸೂರು ಪರಮೇಶ್ ಕುಟುಂಬದವರು, ಕೋತ್ತೇಗಾಲ ಸುನೀತಾ ರಾಜೇಂದ್ರ ಕುಮಾರ್, ಮುಳ್ಳೂರು ಮಹಾದೇವಮ್ಮ ಶ್ರೀಕಂಠ ಇನ್ನೂ ಮುಖಂಡರು ಸೇರಿದಂತೆ ಪಟ್ಟಣ ಹಾಗೂ ಅಕ್ಕಪಕ್ಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ

    August 13, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ಮಧುಗಿರಿ: ತಾಲೂಕಿನ ರೈತರು, ಕೂಲಿ ಕಾರ್ಮಿಕರು ಬರಗಾಲ ಬರುತ್ತದೆ ಎಂದು ಭಯ ಪಡುವ ಅಗತ್ಯವಿಲ್ಲ, ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ…

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026

    ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

    August 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.