ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ಹನುಮ ಜಯಂತೋತ್ಸವ ಸೇವಾ ಸಮಿತಿ ವತಿಯಿಂದ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಿದರು.
ಪಟ್ಟಣದ ಕನಕ ಭವನದಿಂದ ಮೆರವಣಿಗೆಗೆ ನಂದಿ ಕಂಬಕ್ಕೆ ಬಿಜೆಪಿ ಮುಖಂಡ ಕೃಷ್ಣಸ್ವಾಮಿ ಹಾಗೂ ಅಪ್ಪಣ್ಣ, ಬಿಡಗಲು ಮಠದ ಮಹದೇವಸ್ವಾಮಿ ಸ್ವಾಮೀಜಿ ಮತ್ತು ಜಯಪ್ರಕಾಶ್ ಚಿಕ್ಕಣ್ಣ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೇ ನೀಡಿದರು
ಆನೇಕ ಜಾನಪದ ಕಲಾ ತಂಡಗಳು ತಮಟೆ ನಗಾರಿ ವೀರಗಾಸೆ,ಡೊಳ್ಳುಕುಣಿತ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಮೆರವಣಿಗೆಯು ಕನಕ ಭವನದಿಂದ ಪ್ರಾರಂಭವಾಗಿ ವರದರಾಜ ಸ್ವಾಮಿ ದೇವಾಲಯದ ಹತ್ತಿರ ಮುಕ್ತಾಯ ಗೊಂಡಿತ್ತು.
ನೂರಾರು ಹನುಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮ ಘೋಷಗಳನ್ನು ಕೂಗುತ್ತಾ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಕಾರ್ಯಕ್ರಮದಲ್ಲಿ ಮೊತ್ತ ಬಸವಾರಾಜು, ಟೀ ಅಂಗಡಿ ಮುತ್ತಣ್ಣ, ಗಿರೀಶ್, ಚಂದ್ರಮೌಳಿ, ವೆಂಕಟಸ್ವಾಮಿ, ಲಕ್ಷಣ, ಗುರುಸ್ವಾಮಿ, ಸಾವಿರಾರು ಹನುಮ ಭಕ್ತರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು,
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz