ತುಮಕೂರು: ಹಾಲು ಹಾಗೂ ಮೊಸರಿನ ಮೇಲೆ ಹಾಕಲಾಗಿರುವ ಜಿಎಸ್ ಟಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಹೇಳಿಕೆ ನೀಡಿದ್ದಾರೆ.
ದಿನ ಬಳಕೆ ವಸ್ತುಗಳ ಮೇಲೆ ಜಿಎಸ್ ಟಿ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಈ ಬಗ್ಗೆ ಕಾಮೆಂಟ್ ಮಾಡಿದ್ರೆ ಒಂದು ಪಕ್ಷದ ಎಂಎಲ್ ಎ ಎಂಬ ಭಾವನೆ ಬರುತ್ತದೆ. ಮುಂದಿನ ಚುನಾವಣೆಯಲ್ಲಿ 100 ಪರ್ಸೆಂಟ್ ಮನೆಗೆ ಕಳುಸುತ್ತಾರೆ ಎಂದರು.
ಹಾಲು, ಮೊಸರಿನ ಮೇಲೆ ಜಿಎಸ್ಟಿ ಹಾಕುವುದು ಅವಮಾನ ಅಲ್ವಾ? ಮಕ್ಕಳು ಕುಡಿಯುವ ಹಾಲಿಗೂ ಜಿಎಸ್ ಟಿ ಹಾಕ್ತಾರೆ ಅಂದ್ರೆ ಏನ್ ಹೇಳೋದು? ರೈತರಿಗೆ ಪ್ರೋತ್ಸಾಹ ಧನ ಕೊಡಿ, ಆಮೇಲೆ ಜಿಎಸ್ ಟಿ ಹಾಕಿ ಎಂದು ಅವರು ಒತ್ತಾಯಿಸಿದರು.
ಹಾಲು ಮೊಸರಿನ ಮೇಲೆ ಜಿಎಸ್ಟಿ ಹಾಕುವುದು ಸೂಕ್ತ ಅಲ್ಲ. ಇದು ತಪ್ಪು ನಿರ್ಧಾರ, ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು. ಜಿಎಸ್ ಟಿ ಬಗ್ಗೆ ಕುಮಾರಸ್ವಾಮಿಯವರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಶೀಘ್ರದಲ್ಲಿ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಲಿದೆ. ಜಿಎಸ್ಟಿ ಹೊರೆಯನ್ನು ತೆಗೆದುಹಾಕಬೇಕೆಂದು ಒತ್ತಾಯ ಮಾಡ್ತೇವೆ ಎಂದು ಅವರು ಹೇಳಿದರು.
ಬಿಜೆಪಿ 25 ಎಂಪಿಗಳಿಗೆ ತಾಕತ್ ಇಲ್ಲ. ನಾವು ಹೋರಾಟ ಮಾಡಲು ಹೋದ್ರೆ ಭ್ರಷ್ಟಚಾರಿ ಹಾಗೂ ದೇಶದ್ರೋಹಿಗಳು ಅಂತ ಪಟ್ಟ ಕಟ್ಟುತ್ತಾರೆ. ಆನೆ ಹೋದಿದ್ದೆ ದಾರಿ ಅನ್ನುವಂತಾಗಿದೆ ಬಿಜೆಪಿಯವರ ಕಥೆ. 2023ರ ಚುನಾವಣೆಯಲ್ಲಿ ಜನರು ಉತ್ತರ ಕೊಡ್ತಾರೆ. ದೊಡ್ಡ ವಿರೋಧ ಪಕ್ಷ ಕಾಂಗ್ರೆಸ್ ಅವ್ರೇ ಮಾತನಾಡುತ್ತಿಲ್ಲ. ಅವರೇ ಶಕ್ತಿ ಇಲ್ಲದಂತೆ ಕುಳಿತ್ತಿದ್ದಾರೆ. ಕಾಂಗ್ರೆಸ್ ನವರು ಆರು ಕೊಟ್ಟರೆ ಅತ್ತೆ ಕಡೆಗೆ, ಮೂರು ಕಡೆ ಸೊಸೆ ಕಡೆಗೆ ಅಂತಾರೆ. ಸಿಎಂ ಆಗ್ಬೇಕು ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಜಗಳ ಮಾಡ್ತಿದ್ದಾರೆ ಎಂದು ಟೀಕಿಸಿದರು.
ವರದಿ : ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy