ಆರ್ ಎಸ್ ಎಸ್ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನೇ ವಿರೋಧಿಸುವ ಸಂಘಟನೆ, ಇಂತಹ ಸಂಘಟನೆಯ ಹಿನ್ನೆಲೆ ಹೊಂದಿರುವ ಬಿಜೆಪಿ ಅವರು, ಹರ್ ಘರ್ ತಿರಂಗ ಎಂಬ ನಾಟಕ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷರು ಗಾಂಧೀಜಿ ಅವರನ್ನು ದಸ್ತಗಿರಿ ಮಾಡುತ್ತಾರೆ. ಈ ಚಳವಳಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಚಳವಳಿ ಎಂದ ಅವರು, ಆರ್ ಎಸ್ ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಅವರು ಬ್ರಿಟೀಷರ ಗುಲಾಮರಗಿದ್ದವರು ಎಂದು ಟೀಕಿಸಿದರು.
ಆರ್ ಎಸ್ ಎಸ್ 1925ರಲ್ಲೇ ಇತ್ತು. ಜನಸಂಘ ಹೊಂದಿದ್ದು 1979ರಲ್ಲಿ. ಇದೇ ಜನಸಂಘದ ಗೋಲ್ ವಾರ್ ಕರ್, ರಾಷ್ಟ್ರಧ್ವಜ ವಿರೋಧಿಸಿದ್ದರು. 52ವರ್ಷ ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ.
ಆರ್ ಎಸ್ ಎಸ್ ನವರ ಬುದ್ಧಿ ನಮಗೆ ಗೊತ್ತಿದೆ. ಚಾರ್ತುವರ್ಣ್ಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ಆರ್‌ಎಸ್‌ಎಸ್‌ನವರು ಎಂದು ಹರಿಹಾಯ್ದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಬಹು ವರ್ಷಗಳಿಂದ ಇತ್ತು. ಹೆಣ್ಣು ಮಕ್ಕಳಿಗೆ. ಶೂದ್ರರಿಗೆ ವಿದ್ಯೆ ಕಲಿಯಲು ಅವಕಾಶವಿರಲಿಲ್ಲ. ಬಸವಣ್ಣನವರು ಬಂದ ನಂತರ ಅವಕಾಶ ಸಿಕ್ಕಿದ್ದು ಎಂದರು.
ರಾಷ್ಟ್ರಧ್ವಜವನ್ನು ವಿರೋಧಿಸಿದವರು ಇಂದು ಹರ್ ಘರ್ ತಿರಂಗ ನಾಟಕ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ದೇಶಭಕ್ತಿ ಇಲ್ಲ, ಇವರು ನಕಲಿ ದೇಶ ಪ್ರೇಮಿಗಳು, ದೇಶ ಭಕ್ತಿ ಇದ್ದರೆ ಅದು ಕಾಂಗ್ರೆಸ್‌ಗೆ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.
ಡಿಕೆಶಿ ಹೇಳಿಕೆ:
ಬಿಜೆಪಿ ರಾಷ್ಟ್ರಧ್ವಜವನ್ನೇ ಬದಲಿಸಲು ಹೊರಟಿದೆ. ಇದು ಸರಿಯಲ್ಲ, ಹರ್ ಘರ್ ತಿರಂಗ ಹೆಸರಿನಲ್ಲಿ ರಾಷ್ಟ್ರಧ್ವಜದ ಸಂಹಿತೆಯನ್ನೇ ಸಡಿಲಿಸಿರುವುದನ್ನು ಒಪ್ಪುವುದಿಲ್ಲ. ಸರ್ಕಾರ ಚರಿತ್ರೆ ಬದಲಿಸಲಿಕ್ಕೆ ಹೊರಟಿದೆ ಎಂದು ಟೀಕಿಸಿದರು.
ಸ್ವಾತಂತ್ರ್ಯದ ದಿನದಂದು ಕಾಂಗ್ರೆಸ್ ಪಕ್ಷ ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ. ಈ ನಡಿಗೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಅರ್ಜಿ ಹಾಕಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.
ಹರಿಪ್ರಸಾದ್ ಹೇಳಿಕೆ:
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ೯೦೦ ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಜನರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು. ಈ ಚಳವಳಿಯನ್ನು ತಡೆಗಟ್ಟಲು ಶ್ಯಾಂಪ್ರಸಾದ್ ಮುಖರ್ಜಿ ಬ್ರಿಟೀಷರಿಗೆ ಸಹಕರಿಸಿದ್ದರು. ಇಂತಹವರನ್ನು ಬಿಜೆಪಿಯವರು ದೇಶಭಕ್ತ ಎಂದು ಹೊಗಳುತ್ತಿದ್ದಾರೆ ಎಂದು ಕಿಡಿಕಾರಿದರು.
ಇದುವರೆಗೂ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿಲ್ಲ, ಭಗವಧ್ವಜ ಹಾರಿಸಿದ್ದಾರೆ. ಇಂತವರು ಹರ್ ಘರ್ ತಿರಂಗ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz