ಸಾಗರ: ಹರ್ ಘರ್ ತಿರಂಗ ಅಭಿಯಾನಕ್ಕಾಗಿ ಸಾವಿರಕ್ಕೂ ಅಧಿಕ ರಾಷ್ಟ್ರ ಧ್ವಜ ಸಿದ್ಧವಾಗುತ್ತಿದೆ. ಇದೇ ಸಂದರ್ಬದಲ್ಲಿ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ಕಚೇರಿಗೆ ರವಾನೆಯಾದ ಧ್ವಜವೊಂದರಲ್ಲಿನ ಅಶೋಕ ಚಕ್ರದ ಸಂಕೇತ ಧ್ವಜದ ಬದಿಗೆ ಸರಿದಿದ್ದು, ಅವಮಾನಕರವಾಗಿ ಕಂದು ಬಂದಿದೆ.
ಮನೆ ಮನೆಗೆ ರಾಷ್ಟ್ರಧ್ವಜ ಹಂಚುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಚಾಲನೆ ನೀಡಿದ ಜನಪ್ರತಿನಿಧಿಗಳು ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೇಳೆ ಈ ದೋಷವನ್ನು ಗುರುತಿಸಲಾಗಿದೆ. ಧ್ವಜದ ಬಿಳಿ ಬಣ್ಣದ ಸ್ಥಳದ ಮಧ್ಯದಲ್ಲಿರಬೇಕಾದ ಅಶೋಕ ಚಕ್ರ ಪಕ್ಕದಲ್ಲಿದೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದಿವೆ.
ಈ ಬಗ್ಗೆ ಅರಳಗೋಡು ಗ್ರಾಪಂ ಅಧ್ಯಕ್ಷ ಮೇಘರಾಜ್ ಅರೋಡಿ ಮಾತನಾಡಿ, ಧ್ವಜ ಸಂಬಂಧ ನಿರ್ದಿಷ್ಟ ನಿಯಮಗಳಿರುವ ಹಿನ್ನೆಲೆಯಲ್ಲಿ ದೋಷಪೂರಿತ ಧ್ವಜಗಳ ಬಳಕೆಯಾಗದಂತೆ ಕಟ್ಟೆಚ್ಚರ ಅಗತ್ಯ. ದೋಷಗಳಿರುವ ರಾಷ್ಟ್ರಧ್ವಜ ಬಳಕೆಯಾಗದಂತೆ ನಿಗಾ ವಹಿಸಲಾಗಿದೆ. ಸಿದ್ಧಪಡಿಸಲಾದ ಬಾವುಟಗಳಲ್ಲಿ ದೋಷಗಳಿರದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ ಸಹ ಗ್ರಾಪಂ ಕಚೇರಿಯಲ್ಲಿ ಧ್ವಜಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy