ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತವು ಕೈಗೊಂಡಿದೆ.
ಈ ವರ್ಷ ಹಾಸನಾಂಬ ದೇವಿಯ ಬಾಗಿಲು 24–10–2024, ಗುರುವಾರ ಮಧ್ಯಾಹ್ನ 12.00 ಗಂಟೆಗೆ ತೆರೆಯಲಾಗುವುದು. ಭಕ್ತರು ವಿವಿಧ ದಿನಗಳಲ್ಲಿ ನಿಗದಿತ ಸಮಯದಂತೆ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ:
25–10–2024, ಶುಕ್ರವಾರ: ಬೆಳಗ್ಗೆ 4.00 ರಿಂದ ಸಂಜೆ 7.00 ತನಕ ದರ್ಶನ. ನೈವೇದ್ಯ ಸಮಯದಲ್ಲಿ (ಸಂಜೆ 7.00 ಗಂಟೆಗೆ) ದರ್ಶನ ಇರುವುದಿಲ್ಲ.
26—10–2024 ರಿಂದ 01–11–2024: ಪ್ರತಿದಿನ ಬೆಳಗ್ಗೆ 4.00 ರಿಂದ ಮಧ್ಯಾಹ್ನ 2.00 ಹಾಗೂ ಮಧ್ಯಾಹ್ನ 3.00 ರಿಂದ ಬೆಳಗಿನ ಜಾವ 3.00 ತನಕ ದರ್ಶನ.
02—11–2024 ಶನಿವಾರ: ಬೆಳಗ್ಗೆ 4.00 ರಿಂದ ಸಂಜೆ 5.00 ಮತ್ತು ರಾತ್ರಿ 11.00 ರಿಂದ ಬೆಳಗಿನ ಜಾವ 6.00. (ಸಂಜೆ 5.00 ರಿಂದ ರಾತ್ರಿ 11.00 ವರೆಗೆ ದರ್ಶನ ಇರುವುದಿಲ್ಲ)
03–11–2024 ಭಾನುವಾರ: ಈ ದಿನ ಭಕ್ತರಿಗೆ ದರ್ಶನ ಇರುವುದಿಲ್ಲ. ಮಧ್ಯಾಹ್ನ 12.00 ಗಂಟೆಗೆ ಶ್ರೀ ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಭಕ್ತಾದಿಗಳು ಈ ವೇಳಾಪಟ್ಟಿಯ ಪ್ರಕಾರ ತಮ್ಮ ದರ್ಶನಕ್ಕೆ ಸಕಾಲದಲ್ಲಿ ಆಗಮಿಸಿ ದೇವಿಯ ಕೃಪೆ ಪ್ರಾಪ್ತಿಸಿಕೊಳ್ಳಬಹುದು ಎಂದು ಹಾಸನ ಜಿಲ್ಲಾಡಳಿತವು ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q