ಸರಗೂರು: ಬಂಡಿಪುರ ರಾಷ್ಟ್ರೀಯ ಉದ್ಯಾನದ ಉದ್ಯಾನವನದ ಯಡಿಯಾಲ ಅರಣ್ಯ ವಲಯವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಹುಲಿ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ.
ಸರಗೂರು ತಾಲೂಕಿನ ಹಾದನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ನಂಜನಗೂಡು ತಾಲೂಕಿನ ಹಾದನೂರು ವಡೆಯನಪುರ ಗ್ರಾಮದ ಜಡ್ಡೇಗೌಡರ ಮಗ ಪುಟ್ಟಸ್ವಾಮೇಗೌಡ (45) ಮೃತಪಟ್ಟವರಾಗಿದ್ದಾರೆ.
ವಿವರ ಕಾಡಂಚಿನ ತಮ್ಮ ಜಮೀನಿನಲ್ಲಿ ಪುಟ್ಟಸ್ವಾಮಿ ಗೌಡ ದನಗಳನ್ನು ಮೇಯಿಸುತ್ತಿದ್ದರು ಈ ವೇಳೆ ಪೊದೆಯೊಳಗೆ ಅಡಗಿದ್ದ ಹುಲಿ, ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಘಟನೆಯಿಂದ ಬೆದರಿದ್ದ ಇತರ ಜಾನುವಾರುಗಳು ಹೋಗಿವೆ. ಈ ನಡುವೆ ಹಸುವನ್ನು ರಕ್ಷಿಸಲು ಯತ್ನಿಸಿದ ರೈತನ ಮೇಲೆ ಎರಗಿದ ಹುಲಿ ಕತ್ತಿನ ಭಾಗಕ್ಕೆ ಕಚ್ಚಿ ಎಳೆದುಕೊಂಡು ಹೋಗಿದೆ. ಈ ವೇಳೆ ಸ್ಥಳೀಯರು ಕೂಗಾಡಿದ್ದು, ಈ ವೇಳೆ ಹುಲಿ ಓಡಿಹೋಗಿದೆ ಎನ್ನಲಾಗಿದೆ.
ಈ ವೇಳೆ ಸಾರ್ವಜನಿಕರು ಮತ್ತು ರೈತರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರೈತರ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz