ಹಾಸನ: ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬಸ್ಥರೊಂದಿಗೆ ಹಾಸನಾಂಬೆ ದರ್ಶನ ಪಡೆದರು. ಛತ್ರಿ, ಚಾಮರ, ವಾದ್ಯಗೋಷ್ಠಿಯೊಂದಿಗೆ ಜಿಲ್ಲಾಡಳಿತ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡಿತು.
ಚನ್ನಪಟ್ಟಣ ಚುನಾವಣೆ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅವರ ಪತ್ನಿ ಅನಿತಾ, ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರು. ಕುಟುಂಬಸ್ಥರೆಲ್ಲಾ ಹಾಸನಾಂಬೆ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಚಿಕ್ಕಮಕ್ಕಳಿಂದ ಹಾಸನಾಂಬೆ ಪವಾಡವನ್ನ ಗಮನಿಸಿದ್ದೇವೆ. ಒಂದೂದುವರೆ ತಿಂಗಳು ನಮ್ಮ ಚಿಕ್ಕವಯಸ್ಸಿನಲ್ಲಿ ಜಾತ್ರೆ ನಡೆಯುತ್ತಿತ್ತು. ಉತ್ತಮ ರೀತಿಯಲ್ಲಿ ರೈತ ಬಂಧುಗಳು ಬದುಕು ನಡೆಸುವಂತಾಗಲಿ. ಮಳೆ, ಬೆಳೆ ಎಲ್ಲವೂ ಚನ್ನಾಗಿ ಆಗಿ ನೆಮ್ಮದಿಯ ಬದುಕು ಅವರಿಗೆ ಸಿಗಲಿ. ನಮ್ಮ ಹಳೆಯ ಸಂಪ್ರದಾಯದಂತೆ ಬಂಧು ಬಾಂಧವರು ಉತ್ತಮ ಸಂಬಂಧ ಇಟ್ಟುಕೊಳ್ಳುವಂತಾಗಲಿ. ದೇವರ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಈಡೇರುತ್ತವೆ’ ಎಂದು ತಿಳಿದರು.
ದೇವರಲ್ಲಿ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡು ಎಂದು ಕೇಳಿದ್ದೇನೆ. ಈ ಬಾರಿ ನನ್ನ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಚುನಾವಣೆಗೆ ನಿಂತಿದ್ದಾನೆ. ಕೆಲ ಕಾರಣಗಳಿಂದ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾನೆ. ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿಕೊಂಡಿದ್ದೇನೆ. ಆಕೆಯ ಆಶೀರ್ವಾದ ನಮ್ಮ ಮೇಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q