ಹಿರಿಯೂರು: ಜುಲೈ 22ರಿಂದ 24ರವರೆಗೆ ಹಿರಿಯೂರಿನ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಖೋಖೋ ಪಂದ್ಯಾಟ ದೀಪಾಲಂಕೃತ ಖೋಖೋ ಅಸೋಸಿಯೇಷನ್ ಕಪ್-2022ಗೆ ಕ್ರೀಡಾ ಪ್ರಿಯರಿಂದ ಭರ್ಜರಿ ಸ್ವಾಗತ ದೊರೆತಿದೆ
ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಕುಳಿತುಕೊಂಡು ಕ್ರೀಡೆಯನ್ನು ವೀಕ್ಷಿಸುವ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾ ಅಭಿಮಾನಿಗಳು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಮೈದಾನ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ವಿಧಿಸಲಾಗಿಲ್ಲ ಎಂದು ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಆಪ್ತಸಹಾಯಕರಾಗಿರುವ ನಿರಂಜನಮೂರ್ತಿ ತಿಳಿಸಿದರು.
ಖೋ ಖೋ ಪಂದ್ಯಾವಳಿಯ ಕರ್ನಾಟಕ ಸ್ಟೇಟ್ ಜಾಯಿಂಟ್ ಸೆಕ್ರೆಟರಿ ಮಾತನಾಡಿ, ಈ ಕ್ರೀಡೆಗೆ ನಮಗೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಯನ್ನು ಹಿರಿಯೂರು ತಾಲ್ಲೂಕಿನ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ಅವರು ಒದಗಿಸಿದ್ದು, ಹಾಗೂ ರಾಜ್ಯ ಪ್ರವರ್ಗ -1 ರ ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಅವರಿಗೂ ಇದೇ ವೇಳೆ ಅಭಿನಂದನೆ ಸಲ್ಲಿಸಿದರು.
ಶಿವಪ್ರಸಾದ್, ವೆಂಕಟೇಶ್ ಸೇರಿದಂತೆ ಇತರರು ಸಹ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, . ಸ್ಥಳೀಯ ಶಾಸಕರು ಹಾಗೂ ಡಿ.ಟಿ. ಶ್ರೀನಿವಾಸ್ ಅವರು, ರಾಜ್ಯ ಮಟ್ಟದ ಖೋ ಖೋ ಚಾಂಪಿಯನ್ ಶಿಪ್ ಗೆ ಕ್ರೀಡಾ ಪೋಷಕರಾಗಿ ಪ್ರೋತ್ಸಾಹ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಕ್ರೀಡಾಪಟುಗಳು ಸಹ ಮಾತನಾಡಿ, ಸ್ಥಳೀಯ ಶಾಸಕರು ನಾನಾ ಜಿಲ್ಲೆಗಳಿಂದ ಬಂದಂತಹ ಕ್ರೀಡಾ ಪಟುಗಳಿಗೆ ಯಾವ ಕುಂದುಕೊರತೆಗಳು ಸಹ ಇಲ್ಲದಂತಹ ರೀತಿಯಲ್ಲಿ ನಮಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರೀಡಾ ಪಟುಗಳಿಗೆ ಶುಭ ಕೋರಿದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz