ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಸಂಶಯ ಹೊಂದಿದ್ದ ಪತಿ ಡ್ರೋನ್ ಕ್ಯಾಮೆರಾ ಬಳಸಿ ಆಕೆಯ ಕಳ್ಳಾಟವನ್ನು ಪತ್ತೆ ಹಚ್ಚಿದ ಘಟನೆ ನಡೆದಿದೆ. ಇದೇ ಸಾಕ್ಷ್ಯದ ಆಧಾರದ ಮೇಲೆ ಆಕೆಗೆ ಡಿವೋರ್ಸ್ ನೀಡಲು ಮುಂದಾಗಿದ್ದಾನೆ. ಈ ಘಟನೆ ಚೀನಾದ ಹುಬೈ ಪ್ರಾಂತ್ಯದ ಶಿಯಾನ್ ಎಂಬಲ್ಲಿ ನಡೆದಿದೆ.
33 ವರ್ಷದ ಜಿಂಗ್ ಕಳೆದ ವರ್ಷದಿಂದ ತನ್ನ ಪತ್ನಿಯ ವಿಚಿತ್ರ ವರ್ನೆಯಿಂದ ಕಂಗೆಟ್ಟಿದ್ದ ಹಾಗೂ ಆಕೆಯ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಆಕೆ ಪದೇ ಪದೇ ತವರು ಮನೆಗೆ ಹೋಗುವುದಾಗಿ ಹೇಳಿ ತನ್ನ ಬಾಯ್‌ಫ್ರೆಂಡ್ ಅನ್ನು ಭೇಟಿಯಾಗುತ್ತಿದ್ದಳು. ಆಕೆ ನಿಜವಾಗಿಯೂ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆಯೇ ಅಥವಾ ಇಲ್ಲವೆ ಎಂದು ತಿಳಿಯಲು ಜಿಂಗ್ ಡ್ರೋನ್ ಕ್ಯಾಮೆರಾದ ಸಹಾಯ ಪಡೆದಿದ್ದಾನೆ.
ಒಂದು ದಿನ ಪತ್ನಿ ಹೊರಗಡೆ ಹೋದಾಗ ಆಕೆಯ ಹಿಂದೆ ಅತ್ಯಾಧುನಿಕ ಡ್ರೋನ್ ಕ್ಯಾಮೆರಾದ ಮೂಲಕ ಟ್ರ್ಯಾಕ್ ಮಾಡಿದ್ದಾನೆ. ಕ್ಯಾಮೆರಾದಲ್ಲಿ ಪತ್ನಿ ಕಾರಿನಲ್ಲಿ ಬೇರೊಬ್ಬ ಗಂಡಸಿನ ಜೊತೆ ಗುಡ್ಡ ಪ್ರದೇಶಕ್ಕೆ ಹೋಗಿ, ಅಲ್ಲಿ ಕೈಕೈ ಹಿಡಿದು ಪುಟ್ಟ ಮಣ್ಣಿನ ಗುಡಿಸಲಿನ ಒಳಗೆ ಪ್ರವೇಶಿಸಿ ನಂತರ 20 ನಿಮಿಷಗಳ ನಂತರ ಗುಡಿಸಲಿನಿಂದ ಹೊರ ಬಂದು ಆ ವ್ಯಕ್ತಿಯೊಂದಿಗೆಯೇ ಕಛೇರಿಗೆ ಹೋದಂತಹ ದೃಶ್ಯವನ್ನು ಕಂಡು ಪತಿ ಶಾಕ್ ಆಗಿದ್ದಾನೆ.
ಪತ್ನಿ ಆಕೆಯ ಬಾಸ್ ಜೊತೆಗೆಯೇ ಅನೈತಿಕ ಸಂಬಂಧವನ್ನು ಹೊಂದಿದ್ದು, ಈಕೆಯ ಕಳ್ಳಾಟ ಗೊತ್ತಾಗಿ ಜಿಂಗ್ ಇದೀಗ ಈ ಸಾಕ್ಷ್ಯದ ಆಧಾರದ ಮೇಲೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA