ಗದಗ: ನಟ ದರ್ಶನ್ ಅಭಿಮಾನಿಗಳಿಂದ ಶ್ರವಣ ಶಕ್ತಿಯನ್ನೇ ಕಳೆದುಕೊಂಡೆ ಎಂದು ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಹೇಳಿಕೊಂಡಿದ್ದಾರೆ.
ಗದಗನ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಗಾದ ಭೀಕರ ಅನುಭವವನ್ನು ಹೇಳಿಕೊಂಡಿದ್ದಾರೆ.
ಇಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಚಲಿತದಲ್ಲಿರುವ ಪುಣ್ಯಾತ್ಮ ದರ್ಶನ್ ಜನ್ಮದಿನ ಸಂದರ್ಭ, ಈ ವೇಳೆ ಬೆಂಗಳೂರಿನ ನನ್ನ ನಿವಾಸದ ಪಕ್ಕ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದರು. ನಟ ದರ್ಶನ್ ಜನ್ಮದಿನ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಹಾರಿಸಿದ್ದರು. ಆದರೆ ಭಾರೀ ಸಿಡಿಮದ್ದಿನಿಂದ ನಾನು ನನ್ನ ಶ್ರವಣ ಶಕ್ತಿ ಕಳೆದುಕೊಳ್ಳಬೇಕಾಯಿತು ಎಂದು ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಬೇಸರ ಹೊರ ಹಾಕಿದ್ದಾರೆ.
97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ನಾನು ಮಾತನಾಡಬಲ್ಲೆ, ನಡೆದಾಡಬಲ್ಲೆ ಆದರೆ ತಾವೆಲ್ಲರೂ ಮಾತನಾಡುವ ಪದಗಳನ್ನ ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷ ಅನುಭವಿಸುತ್ತಿದ್ದೇನೆ ಎಂದು ಗೊರೂರು ಚೆನ್ನಬಸಪ್ಪ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296