nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಗ್ ಬಾಸ್ ವಿನ್ನರ್ ‘ಗಿಲ್ಲಿ’ ಅಲ್ಲ, ನಿರ್ಮಲಾ ಸೀತಾರಾಮನ್! ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    ಬಿ.ಮಟಕೆರೆ ಪಬ್ಲಿಕ್ ಶಾಲೆ ಸಿಡಿಸಿ ಅಧ್ಯಕ್ಷರ ಆಯ್ಕೆ ವಿವಾದ: ಶಾಸಕರ ವಿರುದ್ಧ ಪೋಷಕರ ಆಕ್ರೋಶ

    January 28, 2026
    Facebook Twitter Instagram
    ಟ್ರೆಂಡಿಂಗ್
    • ಬಿಗ್ ಬಾಸ್ ವಿನ್ನರ್ ‘ಗಿಲ್ಲಿ’ ಅಲ್ಲ, ನಿರ್ಮಲಾ ಸೀತಾರಾಮನ್! ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ
    • ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ
    • ಬಿ.ಮಟಕೆರೆ ಪಬ್ಲಿಕ್ ಶಾಲೆ ಸಿಡಿಸಿ ಅಧ್ಯಕ್ಷರ ಆಯ್ಕೆ ವಿವಾದ: ಶಾಸಕರ ವಿರುದ್ಧ ಪೋಷಕರ ಆಕ್ರೋಶ
    • ಪಾವಗಡ: 1,750 ಅಡಿಗಳ ಉದ್ದದ  ಬೃಹತ್ ತಿರಂಗಾ ಯಾತ್ರೆ
    • ಮೌಲ್ಯಯುತ ಮತವನ್ನು ಮಾರಿಕೊಳ್ಳಬೇಡಿ: ಪ್ರೊ.ರವಿವರ್ಮ ಕುಮಾರ್ ಕರೆ
    • ಜಗತ್ತಿನಲ್ಲಿಯೇ  ಭಾರತೀಯ ಸಂವಿಧಾನ ಶ್ರೇಷ್ಠವಾದುದು: ಪ್ರದೀಪ್ ಕುಮಾರ್
    • ಬೀದರ್: ಹಂದಿಕೇರಾ ಸರ್ಕಾರಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆ
    • ಕೋಲಾರ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ರೈತ ಸಂಘದ ಜಿಲ್ಲಾಧ್ಯಕ್ಷನ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಲ್ಲ ನಿಜವಾಗುವಂತಿದ್ದರೆ….
    Uncategorized January 20, 2025

    ಎಲ್ಲ ನಿಜವಾಗುವಂತಿದ್ದರೆ….

    By adminJanuary 20, 2025No Comments2 Mins Read
    princess who married a beggar

    ಒಮ್ಮೆ ರಾಜನೊಬ್ಬ ಒಂದು ಕುಸ್ತಿ ಪಂದ್ಯ ಏರ್ಪಡಿಸಿ ಯಾರು ನನ್ನನ್ನು ಕುಸ್ತಿಯಲ್ಲಿ ಸೋಲಿಸುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಡಂಗೂರ ಸಾರಿಸಿದನು. ರಾಜನನ್ನು ಸೋಲಿಸಲು ಬಹಳ ಜನ ಬಂದರು. ಕುಸ್ತಿ ಪಂದ್ಯ ಆರಂಭವಾಯಿತು ಎಲ್ಲರೂ ರಾಜನಿಂದ ಪರಾಭವಗೊಂಡು ಹೋಗುತ್ತಿದ್ದರೇ ಹೊರತು ಯಾರಿಂದಲೂ ರಾಜನನ್ನು ಸೋಲಿಸಲು ಆಗಲಿಲ್ಲ. ಜನರ ಗುಂಪಿನಲ್ಲಿ ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಭಿಕ್ಷುಕನೊಬ್ಬನಿದ್ದ ತಾನೊಂದು ಕೈ ನೋಡಿಬಿಡುವ ಎಂದುಕೊಂಡು ಕಣಕ್ಕೆ ಬಂದ ಅವನ ಅದೃಷ್ಟವೋ ಏನೋ ಎಂಬಂತೆ ಕುಸ್ತಿಯಲ್ಲಿ ರಾಜನನ್ನು ಸೋಲಿಸಿಯೇ ಬಿಟ್ಟ, ಸಂತೋಷಗೊಂಡ ರಾಜ ನೀವೇನು ಕೆಲಸ ಮಾಡುತ್ತಿರುವಿರಿ ಎಂದಾಗ ಭಿಕ್ಷುಕ ತಾನು ಭಿಕ್ಷಾಟನೆ ಮಾಡುತ್ತಿರುವುದಾಗಿ ಹೇಳಿದ ಆದರೂ ರಾಜ ಅಳುಕದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿವಾಹ ಕಾರ್ಯ ಆರಂಭಿಸಿಯೇ ಬಿಟ್ಟ.

    ಭಿಕ್ಷುಕನಿಗೆ ಇದು ಸತ್ಯವೇ, ನನಗೆ ರಾಜನ ಮಗಳೊಂದಿಗೆ ವಿವಾಹವಾಗುವುದೇ? ಇದು ನನಸೇ, ಎಂದು ತನ್ನನ್ನು ತಾನೇ ನಂಬದಾದ. ಮತ್ತು ರಾಜನ ಮಗಳನ್ನು ಕೇಳಿದ ನಿಮಗೆ ನನನ್ನೊಡನೆ ವಿವಾಹ ಬೇಸರವಿಲ್ಲವೇ ಎಂದಾಗ ರಾಜನ ಮಗಳು ಖಂಡಿತ ಬೇಸರವಿಲ್ಲ ನನಗೆ ಸಂತೋಷವಿದೆ ಎಂದಾಗ ಮತ್ತಷ್ಟು ಮೂಕವಿಸ್ಮಿತನಾದ. ವಿವಾಗ ಕಾರ್ಯ ಅತ್ಯಂತ ಅದ್ದೂರಿಯಾಗಿ ನಡದೇ ಬಿಟ್ಟಿತು.


    Provided by
    Provided by

    ಕೊನೆಗೆ ರಾಜ ಅಳಿಯಂದಿರೆ ನೋಡಿ ನಿಮ್ಮೊಂದಿಗೆ ವಿವಾಹ ಮಾಡಿ ನಿಮ್ಮನ್ನು ಅರಮನೆಯಲ್ಲಿ ಇಟ್ಟುಕೊಂಡರೆ ಜನ ತಪ್ಪು ತಿಳಿಯುತ್ತಾರೆ ನೀವು ನಿಮ್ಮ ಪತ್ನಿಯನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಬಹುದು ಎಂದಾಗ ರಾಜನ ಉದಾರತೆಯಿಂದ ಭಿಕ್ಷುಕ ಮತ್ತಷ್ಟು ಮೂಕವಿಸ್ಮಿತನಾದ. ಸರಿ ಎಂದು ತಲೆ ಆಡಿಸಿ ರಾಜನ ಮಗಳನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಬಂದ ನಂತರ ರಾಜನ ಮಗಳನ್ನು ಕುರಿತು ನೋಡು ಇದೇ ನಮ್ಮ ಗುಡಿಸಲು ನಿನಗೆ ಇಲ್ಲಿ ಇರಲು ಸಾಧ್ಯವೇ ಎಂದಾಗ ರಾಜನ ಮಗಳು ಇದೇಕೆ ಹೀಗೆ ಅಂದಿರಿ ಇದು ನನ್ನ ಗಂಡನ ಮನೆ ಎಂದಾಗ ಭಿಕ್ಷುಕನಿಗೆ ಮಾತೇ ಹೊರಡಲಿಲ್ಲ.

    ನಂತರ ಸರಿ ನಾನು ಭಿಕ್ಷಾಟನೆಗೆ ಹೋಗಿಬರುತ್ತೇನೆ ನೀನು ಮನೆಯೊಳಗೇ ಇದ್ದು ಆಯಾಸ ಪರಿಹಾರ ಮಾಡಿಕೋ, ಹಸಿವಾದರೆ ಆ ಮಡಕೆಯೊಳಗೆ ನೀರು ಇದೆ ಕುಡಿ ಎಂದಾಗ ಎಲ್ಲದಕ್ಕೂ ತಲೆ ಆಡಿಸಿದಳು. ತನಗೆ ಎಂತಹ ಪತ್ನಿ ಸಿಕ್ಕಳು ಎಂದು ಸಂತೋಷದಿಂದ ತನ್ನ ಜೋಳಿಗೆಯನ್ನು ತಗಲು ಹಾಕಿಕೊಂಡು ಭಿಕ್ಷಾಟನೆಗೆ ಹೊರಟ. ಎಷ್ಟು ಅಲೆದರೂ ಯಾರೊಬ್ಬರೂ ಅವನಿಗೆ ಭಿಕ್ಷೆಯನ್ನೇ ನೀಡಲಿಲ್ಲ ಏಕೆಂದರೆ ಅವನು ರಾಜನ ಅಳಿಯ ಅವಮಾನ ಮಾಡಿದಂತೆ ಎಂದು. ಕೊನೆಗೆ ನಡೆದೂ ನಡೆದೂ ಆಯಾಸವಾಗಿ ಒಂದು ಬೆಣಚು ಕಲ್ಲಿನ ಮೇಲೆ ಮರದ ನೆರಳಿನಲ್ಲಿ ಜೋಳಿಗೆಯನ್ನು ತಲೆ ದಿಂಬಿನಂತೆ ಇಟ್ಟುಕೊಂಡು ಹಾಗೆಯೇ ನಿದ್ರೆಗೆ ಜಾರಿದ. ಸ್ವಲ್ಪ ಸಮಯದ ನಂತರ ಕುದುರೆ ಸಪ್ಪಳ ತನ್ನ ಹತ್ತಿರ ಬಂದತೆ ಭಾಸವಾಗಿ ಕಣ್ಣು ತೆರೆದು ನೋಡಿದರೆ ಪಕ್ಕದ ರಾಜ್ಯದ ರಾಜನ ಮಗ ಖತ್ತಿ ಹಿಡಿದು ಅವನತ್ತ ಬಂದು ಎಲವೋ ಮೂರ್ಖ, ನಾನು ರಾಜನ ಮಗಳನ್ನು ಪ್ರೀತಿಸುತ್ತಿದ್ದೆ, ರಾಜನನ್ನು ಒಪ್ಪಿಸಿ ಅವಳನ್ನು ಮದುವೆಯಾಗುವವನಿದ್ದೆ, ಈಗ ನೀನು ಬಂದು ಎಲ್ಲವನ್ನು ಹಾಳು ಮಾಡಿದೆ, ಈಗ ನೋಡು ನಿನ್ನ ಕಥೆಯನ್ನು ನಾನು ಮುಗಿಸುತ್ತೇನೆ, ಎಂದು ಒಮ್ಮೆ ಕತ್ತಿಯನ್ನು ಅವನತ್ತ ಬೀಸಿದ ಅಯ್ಯೋ ಅಮ್ಮಾ ಎನ್ನುತ್ತಾ ಭಿಕ್ಷುಕ ಖತ್ತಿಯಿಂದ ತಪ್ಪಿಸಿಕೊಳ್ಳಲು ಒಮ್ಮೆ ಹಾಗೆಯೇ ಹೊರಳಿದ, ಹೊರಳಿದವನೇ ಮಂಚದಿಂದ ಕೆಳಗೆ ಬಿದ್ದ, ಈಗ ಅವನಿಗೆ ಸಂಪೂರ್ಣ ನಿದ್ರೆಯಿಂದ ಎಚ್ಚರವಾಗಿತ್ತು, ಸುತ್ತಲೂ ತನ್ನ ಗುಡಿಸಲಿನ ಗೋಡೆ,  ಅಯ್ಯೋ ಇಲ್ಲಿಯವರೆಗೆ ನಾನು ನೋಡಿದ್ದು ಹಗಲು ಕನಸು, ನಮ್ಮಂತವರ ಬದುಕಲ್ಲಿ ಹೀಗೆಲ್ಲಾ ಒಳ್ಳೆಯದು ನಡೆಯುವುದೇ, ನಾವು ಬರೀ ಕನಸು ಕಾಣುತ್ತಲೇ ಜೀವನ ಸಾಗಿಸಬೇಕು ಎಂದುಕೊಳ್ಳುತ್ತಾ ಬೇಸರದಿಂದ ತನ್ನ ಜೋಳಿಗೆ ಹಿಡಿದು ಭಿಕ್ಷಾಟನೆಗೆ ಹೊರಟ.

    ನೀತಿ: ದುರಾದೃಷ್ಟವಶಾತ್ ಸುಂದರ ಸ್ವಪ್ನಗಳು ಎಚ್ಚರವಾದ ನಂತರ ಮನಸ್ಸಿಗೆ ಬೇಸರ ತರುತ್ತವೆ.

    ವೇಣುಗೋಪಾಲ್

     


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಡ್ರಾಪ್ ಕೊಡುವ ನೆಪದಲ್ಲಿ ಚಿನ್ನದ ಆಭರಣ ದೋಚುತ್ತಿದ್ದ ಕಳ್ಳನ ಬಂಧನ

    January 1, 2026

    ಕೊರಟಗೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ

    December 21, 2025

    ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ

    December 12, 2025

    Comments are closed.

    Our Picks

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026

    EPF ರಿಟರ್ನ್ ಸಲ್ಲಿಕೆಗೆ ಜನವರಿ 20ರವರೆಗೆ ಅವಧಿ ವಿಸ್ತರಣೆ

    January 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಗ್ ಬಾಸ್ ವಿನ್ನರ್ ‘ಗಿಲ್ಲಿ’ ಅಲ್ಲ, ನಿರ್ಮಲಾ ಸೀತಾರಾಮನ್! ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

    January 28, 2026

    ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಪಟ್ಟ ಗಿಲ್ಲಿ ನಟ ಪಾಲಾಗಿದ್ದರೂ, ವಿಧಾನಸಭೆಯಲ್ಲಿ ಈ ವಿಷಯವು ಒಂದು…

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    ಬಿ.ಮಟಕೆರೆ ಪಬ್ಲಿಕ್ ಶಾಲೆ ಸಿಡಿಸಿ ಅಧ್ಯಕ್ಷರ ಆಯ್ಕೆ ವಿವಾದ: ಶಾಸಕರ ವಿರುದ್ಧ ಪೋಷಕರ ಆಕ್ರೋಶ

    January 28, 2026

    ಪಾವಗಡ: 1,750 ಅಡಿಗಳ ಉದ್ದದ  ಬೃಹತ್ ತಿರಂಗಾ ಯಾತ್ರೆ

    January 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.