ಒಮ್ಮೆ ರಾಜನೊಬ್ಬ ಒಂದು ಕುಸ್ತಿ ಪಂದ್ಯ ಏರ್ಪಡಿಸಿ ಯಾರು ನನ್ನನ್ನು ಕುಸ್ತಿಯಲ್ಲಿ ಸೋಲಿಸುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಡಂಗೂರ ಸಾರಿಸಿದನು. ರಾಜನನ್ನು ಸೋಲಿಸಲು ಬಹಳ ಜನ ಬಂದರು. ಕುಸ್ತಿ ಪಂದ್ಯ ಆರಂಭವಾಯಿತು ಎಲ್ಲರೂ ರಾಜನಿಂದ ಪರಾಭವಗೊಂಡು ಹೋಗುತ್ತಿದ್ದರೇ ಹೊರತು ಯಾರಿಂದಲೂ ರಾಜನನ್ನು ಸೋಲಿಸಲು ಆಗಲಿಲ್ಲ. ಜನರ ಗುಂಪಿನಲ್ಲಿ ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಭಿಕ್ಷುಕನೊಬ್ಬನಿದ್ದ ತಾನೊಂದು ಕೈ ನೋಡಿಬಿಡುವ ಎಂದುಕೊಂಡು ಕಣಕ್ಕೆ ಬಂದ ಅವನ ಅದೃಷ್ಟವೋ ಏನೋ ಎಂಬಂತೆ ಕುಸ್ತಿಯಲ್ಲಿ ರಾಜನನ್ನು ಸೋಲಿಸಿಯೇ ಬಿಟ್ಟ, ಸಂತೋಷಗೊಂಡ ರಾಜ ನೀವೇನು ಕೆಲಸ ಮಾಡುತ್ತಿರುವಿರಿ ಎಂದಾಗ ಭಿಕ್ಷುಕ ತಾನು ಭಿಕ್ಷಾಟನೆ ಮಾಡುತ್ತಿರುವುದಾಗಿ ಹೇಳಿದ ಆದರೂ ರಾಜ ಅಳುಕದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿವಾಹ ಕಾರ್ಯ ಆರಂಭಿಸಿಯೇ ಬಿಟ್ಟ.
ಭಿಕ್ಷುಕನಿಗೆ ಇದು ಸತ್ಯವೇ, ನನಗೆ ರಾಜನ ಮಗಳೊಂದಿಗೆ ವಿವಾಹವಾಗುವುದೇ? ಇದು ನನಸೇ, ಎಂದು ತನ್ನನ್ನು ತಾನೇ ನಂಬದಾದ. ಮತ್ತು ರಾಜನ ಮಗಳನ್ನು ಕೇಳಿದ ನಿಮಗೆ ನನನ್ನೊಡನೆ ವಿವಾಹ ಬೇಸರವಿಲ್ಲವೇ ಎಂದಾಗ ರಾಜನ ಮಗಳು ಖಂಡಿತ ಬೇಸರವಿಲ್ಲ ನನಗೆ ಸಂತೋಷವಿದೆ ಎಂದಾಗ ಮತ್ತಷ್ಟು ಮೂಕವಿಸ್ಮಿತನಾದ. ವಿವಾಗ ಕಾರ್ಯ ಅತ್ಯಂತ ಅದ್ದೂರಿಯಾಗಿ ನಡದೇ ಬಿಟ್ಟಿತು.
ಕೊನೆಗೆ ರಾಜ ಅಳಿಯಂದಿರೆ ನೋಡಿ ನಿಮ್ಮೊಂದಿಗೆ ವಿವಾಹ ಮಾಡಿ ನಿಮ್ಮನ್ನು ಅರಮನೆಯಲ್ಲಿ ಇಟ್ಟುಕೊಂಡರೆ ಜನ ತಪ್ಪು ತಿಳಿಯುತ್ತಾರೆ ನೀವು ನಿಮ್ಮ ಪತ್ನಿಯನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಬಹುದು ಎಂದಾಗ ರಾಜನ ಉದಾರತೆಯಿಂದ ಭಿಕ್ಷುಕ ಮತ್ತಷ್ಟು ಮೂಕವಿಸ್ಮಿತನಾದ. ಸರಿ ಎಂದು ತಲೆ ಆಡಿಸಿ ರಾಜನ ಮಗಳನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಬಂದ ನಂತರ ರಾಜನ ಮಗಳನ್ನು ಕುರಿತು ನೋಡು ಇದೇ ನಮ್ಮ ಗುಡಿಸಲು ನಿನಗೆ ಇಲ್ಲಿ ಇರಲು ಸಾಧ್ಯವೇ ಎಂದಾಗ ರಾಜನ ಮಗಳು ಇದೇಕೆ ಹೀಗೆ ಅಂದಿರಿ ಇದು ನನ್ನ ಗಂಡನ ಮನೆ ಎಂದಾಗ ಭಿಕ್ಷುಕನಿಗೆ ಮಾತೇ ಹೊರಡಲಿಲ್ಲ.
ನಂತರ ಸರಿ ನಾನು ಭಿಕ್ಷಾಟನೆಗೆ ಹೋಗಿಬರುತ್ತೇನೆ ನೀನು ಮನೆಯೊಳಗೇ ಇದ್ದು ಆಯಾಸ ಪರಿಹಾರ ಮಾಡಿಕೋ, ಹಸಿವಾದರೆ ಆ ಮಡಕೆಯೊಳಗೆ ನೀರು ಇದೆ ಕುಡಿ ಎಂದಾಗ ಎಲ್ಲದಕ್ಕೂ ತಲೆ ಆಡಿಸಿದಳು. ತನಗೆ ಎಂತಹ ಪತ್ನಿ ಸಿಕ್ಕಳು ಎಂದು ಸಂತೋಷದಿಂದ ತನ್ನ ಜೋಳಿಗೆಯನ್ನು ತಗಲು ಹಾಕಿಕೊಂಡು ಭಿಕ್ಷಾಟನೆಗೆ ಹೊರಟ. ಎಷ್ಟು ಅಲೆದರೂ ಯಾರೊಬ್ಬರೂ ಅವನಿಗೆ ಭಿಕ್ಷೆಯನ್ನೇ ನೀಡಲಿಲ್ಲ ಏಕೆಂದರೆ ಅವನು ರಾಜನ ಅಳಿಯ ಅವಮಾನ ಮಾಡಿದಂತೆ ಎಂದು. ಕೊನೆಗೆ ನಡೆದೂ ನಡೆದೂ ಆಯಾಸವಾಗಿ ಒಂದು ಬೆಣಚು ಕಲ್ಲಿನ ಮೇಲೆ ಮರದ ನೆರಳಿನಲ್ಲಿ ಜೋಳಿಗೆಯನ್ನು ತಲೆ ದಿಂಬಿನಂತೆ ಇಟ್ಟುಕೊಂಡು ಹಾಗೆಯೇ ನಿದ್ರೆಗೆ ಜಾರಿದ. ಸ್ವಲ್ಪ ಸಮಯದ ನಂತರ ಕುದುರೆ ಸಪ್ಪಳ ತನ್ನ ಹತ್ತಿರ ಬಂದತೆ ಭಾಸವಾಗಿ ಕಣ್ಣು ತೆರೆದು ನೋಡಿದರೆ ಪಕ್ಕದ ರಾಜ್ಯದ ರಾಜನ ಮಗ ಖತ್ತಿ ಹಿಡಿದು ಅವನತ್ತ ಬಂದು ಎಲವೋ ಮೂರ್ಖ, ನಾನು ರಾಜನ ಮಗಳನ್ನು ಪ್ರೀತಿಸುತ್ತಿದ್ದೆ, ರಾಜನನ್ನು ಒಪ್ಪಿಸಿ ಅವಳನ್ನು ಮದುವೆಯಾಗುವವನಿದ್ದೆ, ಈಗ ನೀನು ಬಂದು ಎಲ್ಲವನ್ನು ಹಾಳು ಮಾಡಿದೆ, ಈಗ ನೋಡು ನಿನ್ನ ಕಥೆಯನ್ನು ನಾನು ಮುಗಿಸುತ್ತೇನೆ, ಎಂದು ಒಮ್ಮೆ ಕತ್ತಿಯನ್ನು ಅವನತ್ತ ಬೀಸಿದ ಅಯ್ಯೋ ಅಮ್ಮಾ ಎನ್ನುತ್ತಾ ಭಿಕ್ಷುಕ ಖತ್ತಿಯಿಂದ ತಪ್ಪಿಸಿಕೊಳ್ಳಲು ಒಮ್ಮೆ ಹಾಗೆಯೇ ಹೊರಳಿದ, ಹೊರಳಿದವನೇ ಮಂಚದಿಂದ ಕೆಳಗೆ ಬಿದ್ದ, ಈಗ ಅವನಿಗೆ ಸಂಪೂರ್ಣ ನಿದ್ರೆಯಿಂದ ಎಚ್ಚರವಾಗಿತ್ತು, ಸುತ್ತಲೂ ತನ್ನ ಗುಡಿಸಲಿನ ಗೋಡೆ, ಅಯ್ಯೋ ಇಲ್ಲಿಯವರೆಗೆ ನಾನು ನೋಡಿದ್ದು ಹಗಲು ಕನಸು, ನಮ್ಮಂತವರ ಬದುಕಲ್ಲಿ ಹೀಗೆಲ್ಲಾ ಒಳ್ಳೆಯದು ನಡೆಯುವುದೇ, ನಾವು ಬರೀ ಕನಸು ಕಾಣುತ್ತಲೇ ಜೀವನ ಸಾಗಿಸಬೇಕು ಎಂದುಕೊಳ್ಳುತ್ತಾ ಬೇಸರದಿಂದ ತನ್ನ ಜೋಳಿಗೆ ಹಿಡಿದು ಭಿಕ್ಷಾಟನೆಗೆ ಹೊರಟ.
ನೀತಿ: ದುರಾದೃಷ್ಟವಶಾತ್ ಸುಂದರ ಸ್ವಪ್ನಗಳು ಎಚ್ಚರವಾದ ನಂತರ ಮನಸ್ಸಿಗೆ ಬೇಸರ ತರುತ್ತವೆ.

ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx