ಒಂದು ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗಾಗಲೇ 55 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿರುವ ವಿಡಿಯೊದಲ್ಲಿ ಅಂಥದ್ದೇನಿದೆ? ಪ್ರಶ್ನೆ ಮತ್ತು ಅದಕ್ಕೊಂದು ಫನ್ನಿ ಉತ್ತರ ಇರುವ ಪೋಸ್ಟ್ ಗಳು. ಇವರೊಬ್ಬ ಕಂಟೆಂಟ್ ಕ್ರಿಯೇಟರ್ ..ಅವರೇ ಹೀಗೆ ಪರೀಕ್ಷೆಯ ಪ್ರಶ್ನೋತ್ತರ ಪರಿಕಲ್ಪನೆಯಲ್ಲಿ ಪೋಸ್ಟ್ ಗಳನ್ನು ಮಾಡುತ್ತಾರೆ ಎಂದೂ ಹೇಳಲಾಗಿದೆ.
@rohit_hand_writing ಎಂಬ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಅದೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ. ಅದರಲ್ಲಿ ʼಗಾಂಧೀಜಿ ಯಾಕೆ ಎಲ್ಲ ನೋಟುಗಳ ಮೇಲೆ ನಗುತ್ತಿದ್ದಾರೆ.?ʼ ಎಂಬುದು ಪ್ರಶ್ನೆ. ಅದಕ್ಕೆ ವಿದ್ಯಾರ್ಥಿಯು ಕೊಟ್ಟ ಉತ್ತರ ಸಖತ್ ರಾಕಿಂಗ್ ಆಗಿದೆ..ʼತಾನು ಅತ್ತರೆ ಕಣ್ಣೀರಿನಿಂದ ನೋಟು ಒದ್ದೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಎಲ್ಲ ನೋಟ್ ಗಳ ಮೇಲೆಯೂ ನಗುತ್ತಿದ್ದಾರೆʼ ಎಂದು ಉತ್ತರ ಬರೆಯಲಾಗಿದೆ. ಈ ಉತ್ತರಕ್ಕೆ ಟೀಚರ್ ಪೂರ್ತಿಯಾಗಿ 10 ಅಂಕ ಕೊಟ್ಟಿದ್ದಲ್ಲದೆ, ವೆರಿ ಗುಡ್ ಎಂದೂ ಬರೆದು ಸಹಿ ಹಾಕಿದ್ದಾರೆ. ಒಂದು ಫನ್ನಿ ಪ್ರಶ್ನೆಗೆ ಅಷ್ಟೇ ಫನ್ನಿಯಾಗಿ, ಸಖತ್ ಲೈವ್ಲಿಯಾಗಿ ಕೊಡಲಾದ ಉತ್ತರ ನೆಟ್ಟಿಗರ ಗಮನ ಸೆಳೆದಿದೆ..!
ಪ್ರಶ್ನೆ ಮತ್ತು ಉತ್ತರವನ್ನ ನೋಡಿದ ನೆಟ್ಟಿಗರು ತಮಗೆ ನಗು ತಡೆಯಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಒಬ್ಬರು ಕಮೆಂಟ್ ಮಾಡಿ, ವಿದ್ಯಾರ್ಥಿಗೆ ಮತ್ತು ಟೀಚರ್ ಗೆ ವ್ಯತ್ಯಾಸವೇ ಇಲ್ಲ. ಪ್ರಶ್ನೆಗೆ ಸರಿಯಾದ ಉತ್ತರ ಎಂದಿದ್ದಾರೆ. ಇನ್ನೊಬ್ಬರು ʼಆ ವಿದ್ಯಾರ್ಥಿ ಯಾರೆಂದು ಗೊತ್ತಿಲ್ಲ, ಆದರೆ ಸರಿಯಾದ ಉತ್ತರನ್ನೇ ಕೊಟ್ಟಿದ್ದಾನೆʼ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296