ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ ಎಂದು ಹೇಳುವ ಮೂಲಕ ದರ್ಶನ್ ಅಭಿಮಾನಿ ಹುಚ್ಚಾಟ ಮೆರೆದಿದ್ದಾನೆ. ದರ್ಶನ್ ರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಈ ಸುದ್ದಿ ಫ್ಯಾನ್ಸ್ ಗಳಿಗೆ ದೊಡ್ಡ ಶಾಕ್ ನೀಡಿದೆ. ದರ್ಶನ್ ಕೊಲೆ ಆರೋಪಿಯಾಗಿದ್ದರೂ ಕೆಲವು ಹುಚ್ಚು ಅಭಿಮಾನಿಗಳು ನಮ್ ಡಿ ಬಾಸ್ ಯಾವುದೇ ತಪ್ಪು ಮಾಡಿಲ್ಲ.
ನಮ್ಮ ಸಪೋರ್ಟ್ ಯಾವತ್ತಿದ್ರೂ ಅವರಿಗೆ ಎಂದೆಲ್ಲಾ ಹೇಳ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಅಂಧಾಭಿಮಾನಿ ಡಿ ಬಾಸ್ ಏನಾದ್ರೂ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನಾನು ಬದುಕಿರೋಲ್ಲ, ಎಲ್ಲಾದ್ರೂ ಹೋಗಿ ಸಾಯ್ತೀನಿ ಅಂತ ಹುಚ್ಚು ಮಾತುಗಳನ್ನಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ವಿಡಿಯೋವನ್ನು ʼಕರ್ನಾಟಕ ನ್ಯಾಯ ಬೆಲೆ ಅಂಗಡಿʼ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ನಟ ದರ್ಶನ್ ಬಂಧನಕ್ಕೊಳಗಾದ ಆಘಾತದಲ್ಲಿ ಅಭಿಮಾನಿಯೊಬ್ಬ ನಾನು ಇನ್ಮೇಲೆ ಬದುಕಿರೋಕೆ ಚಾನ್ಸೇ ಇಲ್ಲ. ಡಿ ಬಾಸ್ ಹೊರಗಡೆ ಬಂದಿಲ್ಲಾ ಅಂದ್ರೆ ನನ್ ಹೆಣ ಕೂಡಾ ಸಿಗೋಲ್ಲ, ಎಲ್ಲೋ ಮೂಲೆಗೆ ಹೋಗಿ ಸತ್ತೋಗ್ತೀನಿ ಎಂದು ಹೇಳುವ ದೃಶ್ಯವನ್ನು ಕಾಣಬಹುದು. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


