ತುಮಕೂರು: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ(AVSS) ತುಮಕೂರು ಜಿಲ್ಲಾ ಶಾಖೆ ಸದಾಶಿವನಗರದ ಕಚೇರಿ ಉದ್ಘಾಟನೆ ಕಾರ್ಯಕ್ರಮ ಗುರುವಾರ ನಡೆಯಿತು.
ಮೈಸೂರು ಉರಿಲಿಂಗಿ ಪೆದ್ದಿಮಠದ ಗೌರವಾಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ, ಅಧ್ಯಕ್ಷರು ತುಂಬಲ ರಂಮಣ್ಣ, ಮೈಸೂರು, AVSS ಉಸ್ತುವಾರಿ ರಾಮಾಂಜಿನಪ್ಪ, ಭಾನುಪ್ರಕಾಶ್, ನಿವೃತ್ತ ಶಿಕ್ಷಕರು, ಗುಬ್ಬಿ ಮುಖಂಡರು ಶಿವಲಿಂಗಯ್ಯ ಎಂ.ಎಸ್., ಗುಬ್ಬಿ AVSS ಉಸ್ತುವಾರಿ ಶಿವಲಿಂಗಯ್ಯ ಮೇಳೇಕಲ್ಲಹಳ್ಳಿ, ದಿಬ್ಬೂರು ಸದಸ್ಯರು ಇಂದ್ರಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿವಲಿಂಗಯ್ಯ ಎಂ ಎಸ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜ್ಞಾಪಕಾರ್ಥವಾಗಿ ಇಡೀ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಲು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆ ಮಾಡಿದ್ದೇವೆ ಎಂದರು.
AVSS ಉಸ್ತುವಾರಿಗಳು ರಾಮಂಜಿನಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ತಳಮಟ್ಟದಲ್ಲಿ ಆರ್ಥಿಕ ಸಹಕಾರ ನೀಡಬೇಕು ಎನ್ನುವ ಉದ್ದೇಶದಿಂದ ಈ ಸಹಕಾರ ಸಂಘ ಸ್ಥಾಪನೆಯಾಗಿದೆ ಎಂದು ಅವರು ತಿಳಿಸಿದರು.
ದಿಬ್ಬೂರು ಸದಸ್ಯರಾದ ಇಂದ್ರ ಕುಮಾರ್ ಮಾತನಾಡಿ, ಈ ಸಹಕಾರ ಸಂಘ ನಾವು ಬಹಳ ತಡವಾಗಿ ಸ್ಥಾಪನೆ ಮಾಡಿದೆವು ಎಂದು ಭಾವಿಸುತ್ತೇನೆ, ಸಹಕಾರ ಸಂಘಗಳನ್ನು ಮಾಡುವುದು, ಬ್ಯಾಂಕ್ ಗಳನ್ನು ಮಾಡುವ ವಿಚಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೆಯೇ ಯೋಚಿಸಿದ್ದರು ಎಂದು ತಿಳಿಸಿದರು.