ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಹುಳಿಯಾರು ಹೋಬಳಿ ಕೇಂದ್ರ ತಾಲೂಕು ಕೇಂದ್ರವಾಗಿ ಬೆಳೆಯುತ್ತಿದ್ದ ಇಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಶಾಲೆಯ ಆವರಣದಲ್ಲಿ ಪೂರ್ಣಗೊಂಡು ವರ್ಷಗಳೇ ಆಗಿದ್ದರೂ ಆರಂಭ ಕಾಲಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ.
ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಷ್ಟಕ್ಕೆ ಅಷ್ಟೇ ಆಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಗೆ ಹೊಸ ರೂಪ ನೀಡೋದಾಗಿ ಹೇಳಿದೆ. ಆದ್ರೇ ಕ್ಯಾಂಟೀನ್ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ.
ಇದರಲ್ಲಿ ಹುಳಿಯಾರು ಹೋಬಳಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಗೆ ವರ್ಷಗಳೇ ಕಳೆದರೂ ಆರಂಭವಾಗಬೇಕಾದ ಇಂದಿರಾ ಕ್ಯಾಂಟೀನ್ ಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಟ್ಟಡ ನಿರ್ಮಾಣವಾದರೂ ಕ್ಯಾಂಟೀನ್ ಆರಂಭವಾಗದೆ, ಪಾಳುಬಿದ್ದ ಕೊಂಪೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಮುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಮಂಜೂರು ಆಗಿ, ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು. ಇನ್ನೇನು ಲೋಕಾರ್ಪಣೆಗೊಂಡು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡಬೇಕಿದ್ದ ಕ್ಯಾಂಟೀನ್ ಇದೀಗ ಕುಡುಕರ ತಾಣವಾಗಿದೆ.
ಹುಳಿಯಾರು ಹೋಬಳಿ ಕೇಂದ್ರದ ಇಂದಿರಾ ಕ್ಯಾಂಟೀನ್ ಅಕ್ಷರಶಃ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದೆ. ಕ್ಯಾಂಟೀನ್ ಕಟ್ಟಡ ಪೋಲಿ, ಪುಂಡರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಅನೈತಿಕ ಚಟುವಟಿಕೆಗಳ ಸ್ಥಳವಾಗಿ ಗಬ್ಬೆದ್ದು ನಾರುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಉಳಿದ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿಗಾ ವಹಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ..?
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q