DLF ನಂತರ ಇಷ್ಟು ವರ್ಷಗಳ ಕಾಲ ನಡೆದ IPL ಪಂದ್ಯವಳಿಯ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಸಂಸ್ಥೆ ವಿವೋ ಹಿಂದೆ ಸರಿದಿದೆ.
ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ’ರವರ ಒಡೆತನದ ” ಟಾಟಾ ” ಗ್ರೂಪ್’ಗೆ IPL ಟೈಟಲ್ ಪ್ರಾಯೋಜಕತ್ವ ದೊರೆತಿದೆ.
ವಿವೋ IPL ಟೈಟಲ್ ಪ್ರಾಯೋಜಕತ್ವವನ್ನು ” TATA “ಗೆ ವರ್ಗಾಯಿಸಲು ಸಲ್ಲಿಸಿದ ಅರ್ಜಿಗೆ BCCI ಸಮ್ಮತಿಸಿದೆ. ಈ ಬಗ್ಗೆ ಇಂದು ಬೆಳಗ್ಗೆ IPL ಚೇರ್ಮನ್ ಆದಂತಹ ಬೃಜೇಶ್ ಪಟೇಲ್’ರವರು ಸ್ಪಷ್ಟ ಪಡಿಸಿದ್ದಾರೆ.
ಏನೇ ಆಗಲಿ IPLನ ಟೈಟಲ್ ಪ್ರಾಯೋಜಕತ್ವ ನಮ್ಮ ದೇಶದ ಸಹೃದಯಿ, ಸರಳ ಮತ್ತು ಸಮಾಜ ಸೇವಕ ” ಟಾಟಾ ” ಗ್ರೂಪ್’ಗೆ ದೊರೆತಿರುವುದು ದೇಶದ ಕೋಟ್ಯಾಂತರ ಜನರಿಗೆ ಖುಷಿ ತಂದಿದೆ. ಇನ್ನು ಮುಂದೆ Vivo IPL ಇರುವುದಿಲ್ಲ, TATA IPL ಮಾತ್ರ ಇರುತ್ತದೆ.
ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy