nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ ಉತ್ಸವ-2026: ಪಂಜಿನ ಕವಾಯತು ತಾಲೀಮು ವೀಕ್ಷಣೆ

    October 13, 2026

    ತುಮಕೂರು ದಸರಾ ಉತ್ಸವ–2026ರ ಅಂಗವಾಗಿ ಮಹಿಳಾ ಕೌಶಲ್ಯ ಮೇಳ ಉದ್ಘಾಟನೆ

    October 13, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ ಉತ್ಸವ-2026: ಪಂಜಿನ ಕವಾಯತು ತಾಲೀಮು ವೀಕ್ಷಣೆ
    • ತುಮಕೂರು ದಸರಾ ಉತ್ಸವ–2026ರ ಅಂಗವಾಗಿ ಮಹಿಳಾ ಕೌಶಲ್ಯ ಮೇಳ ಉದ್ಘಾಟನೆ
    • ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್
    • ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ
    • ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ
    • ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
    •  ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ?  ಹವಾಮಾನ ವರದಿ ಏನು ಹೇಳುತ್ತದೆ; ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಾ?
    • iPhone ಹೆಸರಿನಲ್ಲಿರುವ ‘i’ ಅಂದ್ರೆ ಏನು ?ಸ್ಟೀವ್ ಜಾಬ್ಸ್ ನೀಡಿದ್ದ 5 ಅರ್ಥಗಳೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇನ್ಸ್ ಸ್ಟಾಗ್ರಾಂ ಲವರ್,  ತಮ್ಮನಿಗೆ ಸುಫಾರಿ ನೀಡಿ ಪತಿಯನ್ನೇ ಮುಗಿಸಿದ ಪತ್ನಿ!
    Uncategorized July 30, 2024

    ಇನ್ಸ್ ಸ್ಟಾಗ್ರಾಂ ಲವರ್,  ತಮ್ಮನಿಗೆ ಸುಫಾರಿ ನೀಡಿ ಪತಿಯನ್ನೇ ಮುಗಿಸಿದ ಪತ್ನಿ!

    By adminJuly 30, 2024No Comments2 Mins Read
    koratagere

    ಕೊರಟಗೆರೆ: ಗಂಡನ ಮುಗಿಸಲು ಮಾಜಿ ಇನ್ಸ್ ಸ್ಟಾಗ್ರಾಂ ಲವರ್ ಮತ್ತು ತಮ್ಮನಿಗೆ ಪತ್ನಿ ಸುಫಾರಿ ನೀಡಿರುವ ಘಟನೆ ನಡೆದಿದ್ದು, ಮಾಜಿ ಲವರ್ ಜೊತೆಗೆ ಸೇರಲು ಅಡ್ಡಿಯಾಗಿದ್ದ ಗಂಡ ಪ್ರಕಾಶ್ ನನ್ನು ಪತ್ನಿ ಹರ್ಷಿತಾ ಬರ್ಬರವಾಗಿ ಹತ್ಯೆ ಮಾಡಿಸಿದ್ದಾಳೆ.

    ಕೊರಟಗೆರೆ ತಾಲೂಕು ತುಂಬಾಡಿ ಮತ್ತು ಸಿದ್ದರಬೆಟ್ಟ ಸಂಪರ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಗುಲ್ಬರ್ಗಾ ಜಿಲ್ಲೆಯ ಚಿಂಚುಳ್ಳಿ ಗ್ರಾಮದ ಪ್ರಕಾಶ(32) ಕೊಲೆಯಾದ ದುರ್ದೈವಿಯಾಗಿದ್ದಾನೆ.

    3 ತಿಂಗಳ ಹಿಂದೆಯಷ್ಟೇ ಗಂಡ ಮತ್ತು ಮಗು ಬಿಟ್ಟು ಗುಂಡ ಎಂಬುವನ ಹಿಂದೆ ಹರ್ಷಿತಾ ಹೋಗಿದ್ದಳು. ಈ ವೇಳೆ ಪ್ರಕಾಶ್  ಪೊಲೀಸ್ ಠಾಣೆಗೆ ದೂರು ನೀಡಿ ಹರ್ಷಿತಾಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ.

    ಮೃತ ದುರ್ದೈವಿ ಪ್ರಕಾಶ್

    ಕೊರಟಗೆರೆಯಿಂದ ಮಡದಿಯ ಜೊತೆ ಮಲ್ಲೇಕಾವುಗೆ ಪ್ರಕಾಶ್ ತೆರಳುತ್ತಿದ್ದ ವೇಳೆ ಪ್ರಕಾಶನ ಹೆಂಡತಿ ಹರ್ಷಿತಾ ತಮ್ಮ ಸೋಮ ಕರೆ ಮಾಡಿ, ಕುಡಿದು ಟೈಟ್ ಆಗಿದ್ದೀನಿ ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದು, ಹತ್ತಾರು ಬಾರಿ ಮತ್ತೆ ಮತ್ತೆ ಕರೆ ಮಾಡಿದ್ದ. ಹೀಗಾಗಿ  ಮಡದಿಯನ್ನ ಮನೆಗೆ ಬಿಟ್ಟು ಸೋಮನನ್ನು ಕರೆತರಲು ಪ್ರಕಾಶ್ ಬರುತ್ತಿದ್ದ. ತುಂಬಾಡಿಗೆ ತಲುಪಿದ ವೇಳೆ ಕೆಪಿಟಿಸಿಎಲ್ ವಿದ್ಯುತ್ ಉಪ ಸ್ಥಾವರದ ಹತ್ತಿರ ವಾಹನ ಅಡ್ಡಗಟ್ಟಿದ 3 ಜನರ ಗ್ಯಾಂಗ್ ಪ್ರಕಾಶನ ಹೆಡೆಗೆ, ಹೊಟ್ಟೆಗೆ ಚಾಕು ಹಾಕಿ ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿತ್ತು.

    ದುಷ್ಕರ್ಮಿಗಳಿಂದ ದಾಳಿಗೊಳಗಾದ ಪ್ರಕಾಶ  ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಬಿದ್ದು ಒದ್ದಾಡುವ ಶಬ್ದ ಕೇಳಿ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಲು ಯತ್ನಿಸಿದ್ದಾರೆ. ಆದರೆ ಆತ ಸಾವಿಗೀಡಾಗಿದ್ದಾನೆ.

    ಸದ್ಯ ಘಟನೆಗೆ ಸಂಬಂಧಿಸಿದಂತೆ  ಬೆಂಗಳೂರಿನ ರಂಗಶಾಮಯ್ಯ(43), ಮಲ್ಲೇಕಾವಿನ ಸೋಮ(27) ಮತ್ತು ಹರ್ಷಿತಾ(28) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಹರ್ಷಿತಾಳ ಇನ್ಸ್ ಸ್ಟಾಗ್ರಾಂ ಲವರ್ ಬೆಂಗಳೂರಿನ ಗುಂಡಾನಿಗಾಗಿ ಕೊರಟಗೆರೆ ಪೊಲೀಸರಿಂದ ತೀವ್ರ ಹುಡುಕಾಟ ನಡೆಯುತ್ತಿದೆ.  ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ಕುಮಾರ್ ತೀವ್ರ ತನಿಖೆ ನಡೆಸುತ್ತಿದ್ದಾರೆ.

    ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    ಬರಪೀಡಿತ ತುಮಕೂರು: ಸಾಲ ವಸೂಲಾತಿಯಲ್ಲಿ ಕಠಿಣ ಕ್ರಮ ಕೈಗೊಳ್ಳದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

    October 9, 2026

    ಹಳೆಯ ಆತ್ಮವೇ? ಹೊಸ ಆತ್ಮವೇ? ವ್ಯಕ್ತಿಯ ಗುಣಗಳಿಂದ ಆತ್ಮದ ಪಯಣ ಗುರುತಿಸಬಹುದೇ?

    October 8, 2026

    Comments are closed.

    Our Picks

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ತುಮಕೂರು ದಸರಾ ಉತ್ಸವ-2026: ಪಂಜಿನ ಕವಾಯತು ತಾಲೀಮು ವೀಕ್ಷಣೆ

    October 13, 2026

    ತುಮಕೂರು: ತುಮಕೂರು ದಸರಾ ಉತ್ಸವ-2026ರ ಅಂಗವಾಗಿ ಅಕ್ಟೋಬರ್ 12ರಂದು ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂಜಿನ ಕವಾಯತಿನ…

    ತುಮಕೂರು ದಸರಾ ಉತ್ಸವ–2026ರ ಅಂಗವಾಗಿ ಮಹಿಳಾ ಕೌಶಲ್ಯ ಮೇಳ ಉದ್ಘಾಟನೆ

    October 13, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ

    October 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.