ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿರುವ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಬೆಂಗಳೂರು ಪೂರ್ವ ನಗರ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುವ ಹಾಗೂ ಮಲಗುವ ಜಾನುವಾರುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲು ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆ ಹೊಂದಿರುವ ವಿಶೇಷ ಟ್ರಕ್ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.
ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೋಮವಾರ ಈ ವಿಶೇಷ ವಾಹನಕ್ಕೆ ಚಾಲನೆ ನೀಡಿದರು.
ರಸ್ತೆಗಳಲ್ಲಿ ಬಿಡಾಡಿ ದನಗಳು ನಿಂತಿರುವುದರಿಂದ ಅಥವಾ ಗುದ್ದಾಡುವುದರಿಂದ ಸಂಭವಿಸುವ ಅಪಘಾತಗಳನ್ನು ತಡೆಯುವುದು ಹಾಗೂ ನಗರದ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಈ ವಾಹನದ ಮೂಲಕ ದನ, ಕುರಿ, ಕುದುರೆ, ಹಂದಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸುರಕ್ಷಿತವಾಗಿ ಹಿಡಿದು ಆಶ್ರಯ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗುತ್ತದೆ.
ದನಗಳ ಬಿಡುಗಡೆಗೆ ದಂಡ ಶುಲ್ಕ:
- ಹಸು/ದನ: 3 ದಿನಗಳ ಒಳಗೆ ಮಾಲೀಕರು ಬಿಡಿಸಿಕೊಂಡು ಹೋದರೆ ₹600 ದಂಡ. ನಂತರದ ಪ್ರತಿದಿನಕ್ಕೆ ₹300 ಹೆಚ್ಚುವರಿ ದಂಡ.
- ಕರು: 3 ದಿನಕ್ಕೆ ₹300 ಹಾಗೂ ನಂತರದ ಪ್ರತಿ ದಿನಕ್ಕೆ ₹200 ದಂಡ.
- ಕುದುರೆ ಹಾಗೂ ಮರಿ: ಕ್ರಮವಾಗಿ ₹100 ಮತ್ತು ₹50.
- ಕತ್ತೆ, ಹಂದಿ ಹಾಗೂ ಮರಿಗಳು: ಕ್ರಮವಾಗಿ ₹50 ಮತ್ತು ₹25.
- ಕುರಿ, ಮೇಕೆ ಹಾಗೂ ಮರಿಗಳು: ಕ್ರಮವಾಗಿ ₹25.
ಬಿಡಾಡಿ ಜಾನುವಾರುಗಳ ನಿಯಂತ್ರಣ ಕಾರ್ಯಾಚರಣೆಯು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ ಎಂದು ಪಾಲಿಕೆ ತಿಳಿಸಿದೆ. ರಸ್ತೆಗೆ ಜಾನುವಾರುಗಳನ್ನು ಬಿಡುವ ಮಾಲೀಕರಿಗೆ ಇನ್ನು ಮುಂದೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
