nammatumakuru

    Subscribe to Updates

    Get the latest creative news from FooBar about art, design and business.

    What's Hot

    ನ.29ರಂದು ವಾಲ್ಮೀಕಿ ಜಯಂತಿ, ಸಾಧಕರ ಸನ್ಮಾನ ಸಮಾರಂಭಕ್ಕೆ ನಾಯಕ ನೌಕರರ ಸಂಘದ ಆಹ್ವಾನ

    November 27, 2026

    ಬಡತನ ಮೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ: ಡಾ. ರಾಜೇಶ್‌ಗೆ ಶಾಸಕ ಎಚ್.ವಿ. ವೆಂಕಟೇಶ್ ಮೆಚ್ಚುಗೆ

    November 27, 2026

    ‘ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು’ ಚಿತ್ರದ ಶೀರ್ಷಿಕೆ ಲೋಕಾರ್ಪಣೆ

    November 27, 2026
    Facebook Twitter Instagram
    ಟ್ರೆಂಡಿಂಗ್
    • ನ.29ರಂದು ವಾಲ್ಮೀಕಿ ಜಯಂತಿ, ಸಾಧಕರ ಸನ್ಮಾನ ಸಮಾರಂಭಕ್ಕೆ ನಾಯಕ ನೌಕರರ ಸಂಘದ ಆಹ್ವಾನ
    • ಬಡತನ ಮೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ: ಡಾ. ರಾಜೇಶ್‌ಗೆ ಶಾಸಕ ಎಚ್.ವಿ. ವೆಂಕಟೇಶ್ ಮೆಚ್ಚುಗೆ
    • ‘ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು’ ಚಿತ್ರದ ಶೀರ್ಷಿಕೆ ಲೋಕಾರ್ಪಣೆ
    • LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ
    • ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?
    • ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಎಐಡಿಎಸ್ ಓ ಬೆಂಬಲ; ತುಮಕೂರಿನಲ್ಲಿ ವಿದ್ಯಾರ್ಥಿಗಳ ಆಗ್ರಹ ದಿನ ಆಚರಣೆ
    • ಅಂಡರ್–23 ಟೆನ್‌ ಪಿನ್ ಬೌಲಿಂಗ್‌ ನಲ್ಲಿ ಎಕಲವ್ಯ ಮತ್ತು ವೈಧಿಕಾ ಚಾಂಪಿಯನ್
    • ಕಾರ್ಮಿಕರ ಕನಿಷ್ಠ ವೇತನ ₹42 ಸಾವಿರ, ಪಿಂಚಣಿ ₹21 ಸಾವಿರಕ್ಕೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನ.29ರಂದು ವಾಲ್ಮೀಕಿ ಜಯಂತಿ, ಸಾಧಕರ ಸನ್ಮಾನ ಸಮಾರಂಭಕ್ಕೆ ನಾಯಕ ನೌಕರರ ಸಂಘದ ಆಹ್ವಾನ
    ಪಾವಗಡ November 27, 2026

    ನ.29ರಂದು ವಾಲ್ಮೀಕಿ ಜಯಂತಿ, ಸಾಧಕರ ಸನ್ಮಾನ ಸಮಾರಂಭಕ್ಕೆ ನಾಯಕ ನೌಕರರ ಸಂಘದ ಆಹ್ವಾನ

    By Ganesh TumkuruNovember 27, 2026No Comments2 Mins Read
    valmiki jayanti

    ಪಾವಗಡ : ತುಮಕೂರು ಜಿಲ್ಲಾ ನಾಯಕ ನೌಕರರ ಸಂಘದ ವತಿಯಿಂದ ನವೆಂಬರ್ 29ರ ಭಾನುವಾರ ತುಮಕೂರು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾವಗಡ ತಾಲೂಕು ನಾಯಕ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮನವಿ ಮಾಡಿದರು.

    ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೌಕರ ಬಂಧುಗಳು ಹಾಗೂ ಸಮಾಜದ ಮುಖಂಡರ ಸಭೆ ನಡೆಸಿ, ಸಮಾರಂಭದ ಆಹ್ವಾನ ಪತ್ರಿಕೆಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕರೆ ನೀಡಲಾಯಿತು.

    ಸಭೆಯಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ನಾಯಕ ನೌಕರರ ಸಂಘದ ಅಧ್ಯಕ್ಷ ಜಯರಾಮ್, ತುಮಕೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಮಾಜದ ಬಂಧುಗಳು ಹಾಗೂ ನೌಕರರು ಪಾವಗಡ ತಾಲೂಕಿನಲ್ಲಿ ಇದ್ದಾರೆ. ಹೀಗಾಗಿ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಎನ್. ಅನಿಲ್ ಕುಮಾರ್ ಮಾತನಾಡಿ, ಸಮುದಾಯದ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ಆಗಿರುವ ಹಿನ್ನಡೆಯ ಕುರಿತು ಸಮಾಜದ ಮುಖಂಡರ ಮೂಲಕ ಸರ್ಕಾರದ ಗಮನ ಸೆಳೆಯುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಮುದಾಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.

    ಸಾಧಕರಿಗೆ ಸನ್ಮಾನ

    ಇದೇ ಸಂದರ್ಭದಲ್ಲಿ ಪಾವಗಡ ತಾಲೂಕು ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಚಿತ್ತಯ್ಯ ಹಾಗೂ ಕರ್ನಾಟಕ ಮೀಡಿಯಾ ಕ್ಲಬ್, ಬೆಂಗಳೂರು ವತಿಯಿಂದ ನೀಡಲಾಗುವ ‘ಕರುನಾಡ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಲೋಕೇಶ್ ಪಾಳೇಗಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಇ.ಇ.ಒ. ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗಣ್ಣ, ನಿವೃತ್ತ ಪ್ರಾಂಶುಪಾಲ ಮಾರಪ್ಪ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಮಾಂಜಿ, ಕರವೇ ಅಧ್ಯಕ್ಷ ಲಕ್ಷ್ಮೀನಾರಾಯಣ್, ಶಿಕ್ಷಕರಾದ ಆನಂದಪ್ಪ, ಮಲ್ಲಿಕಾರ್ಜುನ್, ಓಬಳೇಶ್ ಪಾಳೇಗಾರ್, ಗಂಗಾಧರ್, ಶಾಂತಕುಮಾರಿ, ಸಮುದಾಯದ ಮುಖಂಡರಾದ ಕೆ. ರಾಂಪುರ ಆನಂದ್, ಓಂಕಾರ್ ನಾಯಕ, ಪ್ರಕಾಶ್ ನಾಯಕ, ಬೇಕರಿ ನಾಗರಾಜ್, ಟೈಲರ್ ನಾರಾಯಣಪ್ಪ, ಮಂಜುನಾಥ್ ಪಾಳೇಗಾರ್, ಮಾರಣ್ಣ, ಮಲ್ಲಿಕಾರ್ಜುನ, ಆಟೋ ಸತ್ತಿ, ಬಲರಾಮ್, ಗಾದಿಗುಂಟೆ ಮಲ್ಲಿಕಾರ್ಜುನ್, ಅಶ್ವಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಬಡತನ ಮೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ: ಡಾ. ರಾಜೇಶ್‌ಗೆ ಶಾಸಕ ಎಚ್.ವಿ. ವೆಂಕಟೇಶ್ ಮೆಚ್ಚುಗೆ

    November 27, 2026

    ಪಾವಗಡ: ಅಭಿವೃದ್ಧಿ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ; ಶಾಸಕ ವೆಂಕಟೇಶ್‌ ಗೆ ತಿಮ್ಮರಾಯಪ್ಪ ಸವಾಲು!

    November 25, 2026

    ಹಣ ಪಾವತಿಸಿದರೂ ಡ್ರಿಪ್ ಪರಿಕರ ವಿತರಣೆ ಇಲ್ಲ; ರೈತೋದಯ ಹಸಿರು ಸೇನೆ ಅಧ್ಯಕ್ಷ ಕುರಿಮಲ್ಲಪ್ಪ ಆಕ್ರೋಶ

    November 24, 2026

    Leave A Reply Cancel Reply

    Our Picks

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?

    November 27, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ನ.29ರಂದು ವಾಲ್ಮೀಕಿ ಜಯಂತಿ, ಸಾಧಕರ ಸನ್ಮಾನ ಸಮಾರಂಭಕ್ಕೆ ನಾಯಕ ನೌಕರರ ಸಂಘದ ಆಹ್ವಾನ

    November 27, 2026

    ಪಾವಗಡ : ತುಮಕೂರು ಜಿಲ್ಲಾ ನಾಯಕ ನೌಕರರ ಸಂಘದ ವತಿಯಿಂದ ನವೆಂಬರ್ 29ರ ಭಾನುವಾರ ತುಮಕೂರು ನಗರದ ವಾಲ್ಮೀಕಿ ಭವನದಲ್ಲಿ…

    ಬಡತನ ಮೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ: ಡಾ. ರಾಜೇಶ್‌ಗೆ ಶಾಸಕ ಎಚ್.ವಿ. ವೆಂಕಟೇಶ್ ಮೆಚ್ಚುಗೆ

    November 27, 2026

    ‘ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು’ ಚಿತ್ರದ ಶೀರ್ಷಿಕೆ ಲೋಕಾರ್ಪಣೆ

    November 27, 2026

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.