ITI Limited Job Recruitment 2024– ಐಟಿಐ ಲಿಮಿಟೆಡ್ ಕಂಪನಿಯು ಬೆಂಗಳೂರು ಸೇರಿದಂತೆ ವಿವಿಧೆಡೆ ಖಾಲಿ ಇರುವ ಉದ್ಯೋಗಗಳ ಭರ್ತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.
ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವವರಿಗೆ ಐಟಿಯ ಲಿಮಿಟೆಡ್ ಕಂಪನಿಯಲ್ಲಿ ವಿವಿಧ 50 ಯಂಗ್ ಪ್ರೊಫೇಷನಲ್ ಹುದ್ದೆಗಳು ಖಾಲಿ ಇವೆ. ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 28ರೊಳಗೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ.
ನೇಮಕಾತಿ ಬಗ್ಗೆ ಇಲ್ಲಿದೆ ಮಾಹಿತಿ:
ನೇಮಕಾತಿ ಸಂಸ್ಥೆ: ಐಟಿಯ ಲಿಮಿಟೆಡ್ ಕಂಪನಿ
ಹುದ್ದೆಗಳು ಹೆಸರು: ಯಂಗ್ ಪ್ರೊಫೇಷನಲ್ ಹುದ್ದೆಗಳು
ಒಟ್ಟು ಹುದ್ದೆಗಳು: 50
ವಯೋಮಿತಿ: ಗರಿಷ್ಠ 32 ವರ್ಷಗಳು
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 28
ಪೋಸ್ಟಿಂಗ್: ಬೆಂಗಳೂರು ಸೇರಿ ವಿವಿಧೆಡೆ
ಒಟ್ಟು 50 ಹುದ್ದೆಗಳ ಪೈಕಿ ಆರ್ ಅಂಡ್ ಡಿ ಹುದ್ದೆ 04, ಡಾಟಾ ಸೆಂಟರ್ 04, ಲೀಗಲ್ ಸೆಲ್ 04, ಸಿವಿಲ್ 03, ಎಚ್‌ಆರ್ 02, ಫೈನಾನ್ಸ್ 08, ಮಾರ್ಕೆಟಿಂಗ್ 07, ಪ್ರಾಜೆಕ್ಟ್ (ಎನ್‌ಎಸ್‌ಯು) 10, ಪ್ರೊಡಕ್ಷನ್ / ಮ್ಯಾನುಫ್ಯಾಕ್ಚರಿಂಗ್ 06 ಮತ್ತು ಫುಲ್ ಸ್ಟಾಕ್ ವೆಬ್ ಡೆವಲಪರ್ ಫಾರ್ ದಿ ಇನ್ಫಾರ್ಮೇಶನ್ ಆಫ್ ಸಿಸ್ಟಮ್ & ಟೆಕ್ನಾಲಜಿ ಐಎಸ್ ಅಂಡ್ ಐಟಿ 02, ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ (ಸಿವಿಲ್), ಬಿಟೆಕ್ (ಕಂಪ್ಯೂಟರ್ ಸೈನ್ಸ್/ಮೆಕಾನಿಕಲ್/ಇಸಿಇ/ಎಲ್ ಆಂಡ್ ಟಿ), ಎಂಎಸ್ ಡಬ್ಲು, ಸಿಎ, ಎಂಬಿಎ, ಸಿಎಂಎ, ಎಲ್‌ಎಲ್‌ಬಿ, ಬಿಎಲ್, ಪಿಜಿಡಿಎಂ ಇದರಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಆಯಾ ಅರ್ಹತೆಗೆ ತಕ್ಕಂತೆ ನೋಡಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಆಯ್ಕೆ ವಿಧಾನ: ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ವಯಸ್ಸಾಗಿರಬೇಕು. ಈ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿ ನಂತರ ನೇರ ಸಂದರ್ಶನ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧಡೆ ನಿಯಮಾನುಸಾರ ವೇತನ ಸಹಿತ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್: https://careers.itiltd.in/careers_yp/login_form.php?id=%20NA==
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296