ಬೆಂಗಳೂರು: ಭಗವಾನ್ ಶ್ರೀ ಮಹಾವೀರ ಸಂಘ ಕಳೆದ 14 ವರ್ಷಗಳಿಂದ ನಡೆಸುತ್ತಿರುವ ಸಮಾಜಮುಖಿ ಸೇವೆಗಳು ಪ್ರಶಂಸನಿಯ ಎಂದು ಮಾಜಿ ಸಚಿವ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸಂತಸ ವ್ಯಕ್ತಪಡಿಸಿದರು.
ಅವರಿಂದ ಬೆಂಗಳೂರಿನ ಚಿದಾನಂದ ಮೂರ್ತಿ ಸಭಾಭವನದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಸಂಘದ 14ನೇ ವಾರ್ಷಿಕೋತ್ಸವ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್ .ಎಸ್ .ಎಲ್ .ಸಿ. ಹಾಗೂ ಪಿ.ಯು.ಸಿ. ಉತ್ತೀರ್ಣರಾದ ಪ್ರತಿಭಾವಂತ ಅರ್ಹ ಬಡ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿ ಉತ್ತೇಜನ ನೀಡುತ್ತಿರುವುದು, ಆಹಾರೋತ್ಸವ ಕುಟುಂಬಗಳ ಸಮ್ಮಿಲನ ನಿಜಕ್ಕೂ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಎರಡು ಲಕ್ಷ ರೂ ಗಳ ಧನ ಸಹಾಯ ನೀಡಿದರು.
ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಮಾತನಾಡಿ, ತುಳುನಾಡಿನಲ್ಲಿ ನೆಲೆಸಿರುವ ಹಲವಾರು ಜೈನ ಅರಸರು, ಹಲವು ಶತಮಾನಗಳ ಕಾಲ ಆಳ್ವಿಕೆ ನೀಡಿದ್ದು, ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ .ಅವರದೇ ಆದ ಆಹಾರ ಸಂಪ್ರದಾಯ ನಾಗರಿಕತೆ ಹೊಂದಿದ್ದಾರೆ. ವಿಶೇಷವಾಗಿ ಜೈನ ಖಾದ್ಯಕ್ಕೆ ಹೆಸರುವಾಸಿ ಆಗಿದ್ದಾರೆ. ಜೈನ ಆಹಾರ ಸೇವನೆಗೆ ದಂಪತಿಗಳ ಸಮೇತ ಆಗಮಿಸಿರುವುದಾಗಿ ತಿಳಿಸಿ, ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ಐ.ಪಿ.ಎಸ್. ಅಧಿಕಾರಿ ಜಿನೇಂದ್ರ ಕಣಗಾವಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಉದ್ಯಮಿ ಶೀತಲ್ ಕುಮಾರ್ ಜೈನ್ ಮಾತನಾಡಿ, ಸಂಘ, ಸಮಾಜದ ಹಿತ ಹಾಗೂ ಬಡವರ ಚಿಂತನೆ ಕುರಿತು ಸಂಘ ಹಲವು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ಏಳಿಗೆಗೆ 1.10 ಲಕ್ಷ ರೂಗಳ ಧನಸಹಾಯ ನೀಡಿದರು.
ಟಿ.ವಿ. ನಿರೂಪಕಿ ನವಿತ ಜೈನ್ ಮಾತನಾಡಿ, ತಾವು ಸಂಘದ ಸಕ್ರಿಯ ಸದಸ್ಯೆ ಯಾಗಿರುವುದಕ್ಕೆ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೈಕೋರ್ಟ್ ವಕೀಲ ಬಿ.ಜಿನೇಂದ್ರ ಕುಮಾರ್ ಮಾತನಾಡಿ, ಸಮಾಜಕ್ಕೆ ಸಂಘ ಉತ್ತಮ ಕೆಲಸ ಮಾಡುತ್ತಿದ್ದು ಇಂತಹ ಕಾರಣಗಳಿಗೆ ಸದಾ ಸಹಕಾರವಿರಲಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಾಳ ಹರ್ಷೇಂದ್ರ ಕುಮಾರ್ ಜೈನ ಮಾತನಾಡಿ, ಬೆಂಗಳೂರಲ್ಲಿ ಕರಾವಳಿ ಭಾಗದ ಸಹಸ್ರರು ಕುಟುಂಬಗಳು ನೆಲೆಸಿದ್ದು, 36 ಕುಟುಂಬಗಳಿಂದ 36 ಬಗೆಯ ಆಹಾರಗಳನ್ನು ತಯಾರಿಸಲಾಗಿದೆ . 150 ಬಡ ವಿದ್ಯಾರ್ಥಿಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗಿದೆ. ಕಳೆದ 14 ವರ್ಷಗಳಿಂದ ಸಂಘ ಆಹಾರ, ಪ್ರವಾಸ, ಇನ್ನಿತರ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಭಗವಾನ್ ಶ್ರೀ ಮಹಾವೀರ ಸಂಘದ ಅಧ್ಯಕ್ಷ ಯಶೋಧರ ಅಧಿಕಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಜನೆ ಹಾಗೂ ಸಾಂಕೀಕ ಸಚಿವರ ವಿಶೇಷ ಅಧಿಕಾರಿ ಡಾ.ಅಜಿತ್ ಮುರುಗುಂಡೆ, ತುಳುಕೂಟ ದ ಮಾಜಿ ಅಧ್ಯಕ್ಷ ದಿನೇಶ್ ಹೆಗಡೆ ವಿದ್ಯಾರ್ಥಿ ವೇತನ ಸಂಚಾಲಕ ಫಣಿರಾಜ್, ಲೋಕರಾಜ್ ಜೈನ್, ಆಹಾರೋತ್ಸವ ಮುಖ್ಯಸ್ಥ ಸೂರಜ್ ಕುಮಾರ್ ದರ್ಶನ್ ಜೈನ್, ಮನೀಶ್ ಎಂಟರ್ಪ್ರೈಸಸ್ ನಿರಂಜನ್ ಜೈನ್, ಸಂಘದ ಖಜಾಂಚಿ ಮಹಾವೀರ್ ಆಳ್ವ, ಗೌರವ ಅಧ್ಯಕ್ಷ ಡಾ. ವಿದ್ಯಾಸಾಗರ್ ಜೈನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಚೈತ್ರ. ಡಿ. ಜೈನ ಮತ್ತು 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q