nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    • ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?
    • ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 
    • ಕಾನ್ಸಿರಾಂ ದೇಶ ಕಂಡ ಅತ್ಯುನ್ನತ ರಾಜಕಾರಣಿ: ರಾಹುಲ್ ಖಂದಾರೆ
    • ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!
    •  CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?
    • ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಾತಿ ನಿಂದನೆಗೆ ಕಡಿವಾಣ ಹಾಕಲು  ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು:  ಸವಿತಾ ಸಮಾಜದ ಅಧ್ಯಕ್ಷ ಎನ್.ಸಂಪತ್ ಕುಮಾರ್ ಒತ್ತಾಯ
    ರಾಜ್ಯ ಸುದ್ದಿ December 21, 2021

    ಜಾತಿ ನಿಂದನೆಗೆ ಕಡಿವಾಣ ಹಾಕಲು  ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು:  ಸವಿತಾ ಸಮಾಜದ ಅಧ್ಯಕ್ಷ ಎನ್.ಸಂಪತ್ ಕುಮಾರ್ ಒತ್ತಾಯ

    By adminDecember 21, 2021No Comments2 Mins Read
    savitha samaja

    namma tumakuru

    ಬೆಂಗಳೂರು : ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಸವಿತಾ ಸಮಾಜದ ಸಮುದಾಯಕ್ಕೆ ರಾಜಕೀಯ ಮತ್ತು ಶೈಕ್ಷಣಿಕವಾಗಿ ಅಗತ್ಯ ಮೀಸಲಾತಿಗಳನ್ನು ಕೊಟ್ಟು ಸಮುದಾಯದ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂಬ ಒತ್ತಾಯವೂ ಕೇಳಿ ಬಂತು.

    ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘವು ಯಲಹಂಕದ ಹೊಯ್ಸಳ ಆಟದ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಮುದಾಯದ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಎನ್. ಸಂಪತ್ ಕುಮಾರ್ ಮಾತನಾಡಿ ಕೋವಿಡ್ ಇದ್ದುದರಿಂದ ಒಂದೂವರೆ ವರ್ಷಗಳ ಕಾಲ ನಾವು ಸರ್ವ ಸದಸ್ಯರ ಸಭೆ ನಡೆಸಲಾಗಲಿಲ್ಲ. ಈಗ ಅನುಮತಿ ಪಡೆದು ಸಭೆ ನಡೆಸುತ್ತಿದ್ದೇವೆ. ರಾಜ್ಯದ ನಾನಾ ಭಾಗಗಳಿಂದ ಸವಿತಾ ಸಮುದಾಯದ ಜನ ಆಗಮಿಸಿದ್ದಾರೆ’ ಎಂದರು.

    ನಮ್ಮ ಸಮಾಜವು ಪ್ರತಿಯೊಬ್ಬರಿಗೂ ಕ್ಷೌರ, ಹೇರ್ ಕಟ್, ಮಸಾಜ್ ಇತ್ಯಾದಿಗಳ ಮೂಲಕ ಎಲ್ಲರಿಗುಜ ಅಗತ್ಯವಾದ ಸೇವೆಯನ್ನು ಕಲ್ಪಿಸುತ್ತಿದ್ದೇವೆ. ಆದರೆ ನಮ್ಮ ಸಮುದಾಯವನ್ನು ಜಾತಿಯಿಂದ ನಿಂದನೆ ಮಾಡುತ್ತಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಸರಕಾರ ಸೂಕ್ತ ಕಾನೂನು ಮೂಲಕ ಜಾತಿ‌ ನಿಂದನೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

    ಸಂಘದ ಬೈಲಾ ತಿದ್ದುಪಡಿ ಮಾಡಲಾಗುವುದು:

    ಕರ್ನಾಟಕ ರಾಜ್ಯ ಸವಿತಾ ಸಮಾಜದ ಸಂಘಕ್ಕೆ 1947ರಲ್ಲಿ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಬೈಲಾ ರೂಪಿಸಲಾಗಿತ್ತು. ಇದೀಗ ಜನರಿಗೆ ಇದರಿಂದ ಅನುಕೂಲವಾಗುತ್ತಿಲ್ಲ. ಜತೆಗೆ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಬೈಲಾಗೆ ತಿದ್ದುಪಡಿ ತಂದು ರಾಜ್ಯದ ಎಲ್ಲಾ ಸವಿತಾ ಸಮಾಜದ ಜನರಿಗೆ ಅದರ ಪ್ರಯೋಜನ ತಲುಪುವಂತೆ ಮಾಡಲಾಗುವುದು. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾದ ಅಂಶಗಳನ್ನು ಸೇರ್ಪಡೆ ಮಾಡಿ ಸಮಾಜದ ಅಭಿವೃದ್ಧಿಗೆ ಪೂರಕಾಗಿರುವಂತೆ ಬೈಲಾವನ್ನು ತಿದ್ದುಪಡಿ ಮಾಡಲಾಗುವುದು ಎಂದರು. ಜತೆಗೆ ಸಂಘದ ಖರ್ಚು, ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲಾಗುವುದು.

    ಸಂಘದ ವತಿಯಿಂದ ಪದವಿ ಕಾಲೇಜು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಅದನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು. ಈ ಮೂಲಕ ಸಂಘವನ್ನು ಆರ್ಥಿಕವಾಗಿ ಬಲಗೊಳಿಸಲು ನಾವೆಲ್ಲರೂ ಬದ್ಧರಾಗಿರಲು ತೀರ್ಮಾನಿಸಲಾಗಿದೆ ಎಂದು ಸಂಪತ್ ಕುಮಾರ್ ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸವಿತಾ ನಿಗಮದ ಅಧ್ಯಕ್ಷ ನರೇಶ್ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇಟಗಿ, ಸಂಘದ ಕಾರ್ಯಾಧ್ಯಕ್ಷ ಎಸ್.ಕಿರಣ್ ಕುಮಾರ್ ಮತ್ತಿತರ ಪದಾಧಿಕಾರಿಗಳು ಹಾಗೂ ರಾಜ್ಯದ ನಾನಾ ಭಾಗಗಳ ಸವಿತ ಸಮುದಾಯದ‌ ಮುಖಂಡರು, ಸಂಘದ ಸದಸ್ಯರು ಪಾಲ್ಗೊಂಡಿದ್ದರು.

    ಮಧ್ಯಾಹ್ನ ವಿಶೇಷ ವಾರ್ಷಿಕ ಸಭೆ ನಡೆಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ಜಾತಿ ನಿಂದನೆಗೆ‌ ಕಾನೂನು ರೂಪಿಸುವುದು, ಸಮುದಾಯದ‌ ಜನರಿಗೆ ರಾಜಕೀಯ, ಶೈಕ್ಷಣಿಕವಾಗಿ ಅಗತ್ಯ ಮೀಸಲಾತಿಗಳನ್ನು ಒದಗಿಸುವುದು ಸೇರಿದಂತೆ ನಾನಾ ನಿರ್ಣಯಗಳನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.

    admin
    • Website

    Related Posts

    “30 ನಾಯಕರಿಗೆ ಕೋಟಿ ಕೋಟಿ ಕೊಟ್ಟಿದ್ದೇನೆ” ಎಂದ ಪ್ರದೀಪ್ ಈಶ್ವರ್! ಕಾಂಗ್ರೆಸ್‌ ನಲ್ಲಿ ಭಿನ್ನಮತ ಸ್ಫೋಟ

    October 11, 2026

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    Leave A Reply Cancel Reply

    Our Picks

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ದಸರಾ ಮಹೋತ್ಸವ–2026ರ ಅಂಗವಾಗಿ ಕರ್ನಾಟಕ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳು ಕಂದಾಯ, ಯುವಜನ…

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026

    ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.