ತಿಪಟೂರು: ಇಲ್ಲಿನ ಕೆ.ಆರ್. ಬಡಾವಣೆಯಲ್ಲಿರುವ ಜಯಕರ್ನಾಟಕ ವೃತ್ತದಲ್ಲಿ ತಾಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ 75 ನೇ ಸುವರ್ಣ ಮಹೋತ್ಸವ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸೈನಿಕ ಟಿ.ಎಸ್.ಷಣ್ಮುಖ, ಉಪವಿಭಾಗಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಕೆ.ಎಲ್.ಪರಮೇಶ್ವರಯ್ಯ ಮತ್ತು ನಿವೃತ್ತ ಲೀಡ್ ಬ್ಯಾಂಕ್ ಮುಖ್ಯಸ್ಥ ಜ್ಯೋತಿ ಗಣೇಶ್ ಮಾತನಾಡಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಿ.ಟಿ.ಕುಮಾರ್,ನಿವೃತ್ತ ಶಿಕ್ಷಕ ಸೋಮಶೇಖರ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಿ.ಬಿ.ಬಸವರಾಜ್, ನೌಕರರ ಘಟಕದ ಡಾ.ಮೋಹನ್ ಎಐಟಿಯುಸಿ ಸಂಚಾಲಕ ಗೋವಿಂದರಾಜ್, ಸಮಾಜ ಸೇವಕ ಬಿ.ಆರ್.ಶಶಿಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ಸಿದ್ದೇಶ್, ಕಾರ್ಯದರ್ಶಿ ಹಿಂಡಿಸ್ಕೆರೆ ರವಿ, ನಗರ ಕಾರ್ಯದರ್ಶಿ ಲೋಕೇಶ್, ಮುಖಂಡ ಕೆ.ಆರ್. ಬೋಜೇಗೌಡ, ಸಹ ಕಾರ್ಯದರ್ಶಿ ವಿಜಯಕುಮಾರ್, ಆಟೋ ಘಟಕದ ಕಾಂತರಾಜ್, ಕಲ್ಕೆಳೆ ಘಟಕದ ಗಂಗಾಧರಯ್ಯ, ಯುವ ಘಟಕದ ರೋಹನ್ ರಾಜ್, ಶ್ವೇತಕುಮಾರ್, ಕೆ.ಇ.ಬಿ. ಸೋಮಶೇಖರ್, ಮುಖಂಡರಾದ ಅಂಗಡಿ ಕಿಟ್ಟಪ್ಪ, ನಿವೃತ್ತ ನೌಕರ ಷಡಕ್ಷರಿ, ಸಂಘಟನೆಯ ರಮೇಶ್ ಮತ್ತು ಚಂದ್ರಶೇಖರ್ ಸೇರಿದಂತೆ ಸಂಘಟನೆಯ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz