ಕೊಪ್ಪಳ: ಗಂಗಾವತಿ ತಾಲೂಕಿನ ಮಾಜಿ ಎಂಎಲ್ ಸಿ ಹೆಚ್.ಆರ್ ಶ್ರೀನಾಥ್ ಜೆಡಿಎಸ್ ಪಕ್ಷದಿಂದ ಹೊರನಡೆದಿದ್ದು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಮಾಜಿ ಸಂಸದ ಹೆಚ್.ಜಿ ರಾಮುಲು ಅವರ ಪುತ್ರ ಹೆಚ್ ಆರ್ ಶ್ರೀನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ರನ್ನು ಭೇಟಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್ ಪಕ್ಷ ಸೇರಿದ್ದ ಶ್ರೀನಾಥ್ ಇದೀಗ ಮರಳಿ ಗೂಡಿಗೆ ಕಾಲಿಟ್ಟಿದ್ದಾರೆ.
ಗಂಗಾವತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಆಗಿರುವ ಶ್ರೀನಾಥ್ ಶೀಘ್ರವೇ ಕಾಂಗ್ರೆಸ್ ಮರು ಸೇರ್ಪಡೆಗೊಳ್ಳಲಿದ್ದಾರೆ. ಇನ್ನು ಶ್ರೀನಾಥ್ ಸೇರ್ಪಡೆಗೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಡಿಕೆಶಿಯನ್ನು ಶ್ರೀನಾಥ್ ಭೇಟಿ ಮಾಡಿದ ಬಳಿಕ ಅನ್ಸಾರಿಯವರಿಗೂ ಟೆನ್ಶನ್ ಶುರುವಾಗಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿಯನ್ನು ವಿರೋಧಿಸಿ ಶ್ರೀನಾಥ್ ಜೆಡಿಎಸ್ ಪಕ್ಷಕ್ಕೆ ಸೇರಿದ್ದರು. ಇನ್ನು ಕಳೆದ ಕೆಲ ದಿನಗಳ ಹಿಂದೆ ಬಿಕೆ ಹರಿಪ್ರಸಾದ್ ಗಂಗಾವತಿಗೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಈ ಬಾರಿ ಹಿಂದೂಗಳಿಗೆ ಚುನಾವಣಾ ಟಿಕೆಟ್ ನೀಡೋದಾಗಿ ಘೋಷಣೆ ಮಾಡಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


