ಬೆಂಗಳೂರು: ಭಾರತೀಯ ಜೈನ್ ಮಿಲನ್ ವಲಯ–8 ರ ಜಿನ ಭಜನಾ ಕಾರ್ಯಕ್ರಮದ ಸೆಮಿ ಫೈನಲ್ ಗೆ ಇಂದು ಸ್ವಯಂ ಭೂ ಸ್ತೋತ್ರದ ನಾಟಕ ಪ್ರದರ್ಶನದ ಮೂಲಕ ಚಾಲನೆ ನೀಡಲಾಯಿತು.
ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಹಾಗೂ ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಹಾಗೂ ಶ್ರದ್ಧಾ ಅಮಿತ್ ರವರ ನೇತೃತ್ವದಲ್ಲಿ ಸೆಮಿ ಫೈನಲ್ ಗೆ ಚಾಲನೆ ನೀಡಲಾಯಿತು.
ಜೀವಿಯ ಪರಿಪೂರ್ಣತೆ ಮತ್ತು ಶುದ್ದಿ ,ಕಾಂಚಿಪುರಂ ಜಿನ ಕಂಚಿ ಯಾದ ಬಗ್ಗೆ ಈ ಪ್ರದರ್ಶನದಲ್ಲಿ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಅನಂತಕುಮಾರಿ ಅವರು ಬರೆದ 51 ಜಿನ ಭಜನೆಗಳಿರುವ ಪುಸ್ತಕವನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಅವರು ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಡಾ. ಪ್ರೇಮಕುಮಾರಿ ತಿಮ್ಮಪ್ಪ, ಭಾರತೀಯ ಜೈನ್ ಮಿಲನ್ ನ ಬೆಂಗಳೂರು ವಿಭಾಗದ ವಿಲಾಸ್ ಪಾಸಣ್ಣನವರ್ ,ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್. ನಾಗರಾಜು ,ಕಾರ್ಯದರ್ಶಿ ರತ್ನ ರಾಜು, ಉಡುಪಿಯ ಪ್ರಸನ್ನ ಕುಮಾರ್ ,ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ,ಚಿತ್ರ ಕಲಾವಿದ ಎಂ.ಎಂ ಜಿನೇಂದ್ರ, ಮಂಚೇನಹಳ್ಳಿ ರಾಜೇಶ್ ,ಪ್ರೇಮಾಸುಖಾನoದ, ಬ್ರಾಹ್ಮಿಲಾ ಮದನ್,ಅಜಿತ್ ಕುಮಾರ್, ಮಂಗಳೂರಿನ ಸೋಮಶೇಖರ್ ಶೆಟ್ಟಿ ಸೇರಿದಂತೆ ಕರ್ನಾಟಕದ ವಿವಿಧ ಜಿನ ಭಜನಾ ತಂಡಗಳು ವಿವಿಧ ಜೈನ ಸಂಘಟನೆಗಳು , ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳು,ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತೀರ್ಪುಗಾರರಾದ ಕು.ಮೇಘನಾ ಹಳಿಯಾಳ, ಶ್ರೇಯ ಪಿ .ಜೈನ್ , ನಿಶ್ಚಿತ್ ವಿಶ್ವಸೇನಾ ರವರನ್ನು ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಹಾಗೂ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಸನ್ಮಾನಿಸಿದರು. ಕೇರಳದ ವೈನಾಡಿನ ಭಕ್ತಿ ಶ್ರೀ ಜಿನಭಜನ ತಂಡದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx