ಬಂಡೀಪುರ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ರೆ ವಲಯದಲ್ಲಿ ಉದ್ದ ಕೊಂಬಿನ ಆನೆಯೊಂದು ಮೃತಪಟ್ಟಿದ್ದು, ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಎಲ್ಲರ ಆಕರ್ಷಣೆಯಾಗಿದ್ದ ಭೋಗೇಶ್ವರ ಆನೆಯೇ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಎರಡು ಮೂರು ದಿನಗಳ ಹಿಂದೆ ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಆನೆಯ ಸಹಜವಾಗಿ ಮೃತಪಟ್ಟಿದ್ದು, ಈ ಆನೆ ಉದ್ದವಾದ ದಂತಗಳನ್ನು ಹೊಂದಿದೆ. ಬಲಕೊಂಬಿನ ಮೇಲೆ ಎಡಕೊಂಬು ಬಂದ್ದಿದು, ಆನೆಗೆ 55 ರಿಂದ 60 ವರ್ಷಗಳಾಗಿರಬಹುದು ಎಂದು ತಿಳಿದು ಬಂದಿದೆ. ಕಬಿನಿ ಹಿನ್ನೀರು ಭಾಗದಲ್ಲಿ ವಲಸ್ಸಾದ ಮೂರ್ನಾಲ್ಕು ಆನೆಗಳು ಇರುವದರಿಂದ ಇದು ಮಿಸ್ಟರ್ ಕಬಿನಿ ಭೋಗೇಶ್ವರ ಆನೆಯೇ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತ ಪಡಿಸಿಲ್ಲ. ಇತ್ತೀಚಿನ ಆದೇಶದಂತೆ ಆನೆಯ ಕಳೇಬರವನ್ನು ಸಂಸ್ಕಾರ ಮಾಡದೆ ಹಾಗೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
“ಗಜ” ಗಾಂಭೀರ್ಯ ಭಿನ್ನ ಹಾವಬಾವ” : ಕಬಿನಿ ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿರುವ ಬರುವ ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಮತ್ತು ಡಿ ಬಿ ಕುಪ್ಪೆವಲಯ ವ್ಯಾಪ್ತಿಯಲ್ಲಿ ಗಜ ಗಾಂಭೀರ್ಯದಿಂದ ರಾಜನಂತೆ ತಿರುಗಾಡುತ್ತಿತ್ತು.
ಹಿನ್ನೀರಿನಲ್ಲಿ ಈಜಿಕೊಂಡು ಎರಡೂ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆನೆಗಳ ಹಿಂಡಿನಲ್ಲಿ ತನ್ನ ನಡಿಗೆ ಶೈಲಿಯ ಮೂಲಕವೇ ಇತರ ಆನೆಗಳಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿತ್ತು. 7 ರಿಂದ 8 ಅಡಿಗಿಂತಲೂ ಹೆಚ್ಚು ಉದ್ದವಿರುವ ದಂತಗಳು ನಡೆದಾಡುವಾಗ ನೆಲಕ್ಕೆ ತಾಕುತ್ತಿತ್ತು. ಎರಡೂ ಕೊಂಬುಗಳು ಒಂದುಕ್ಕೊಂದು ಕೂಡಿಕೊಂಡಿದ್ದು ಆನೆಯ ಹಿರಿತನಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಕಾಡಿನ ಭಾಗದಲ್ಲಿರುವ ದೇವರ ಹೇಸರಾದ ಭೋಗೇಶ್ವರ ಎಂಬ ಹೆಸರನ್ನು ಇಟ್ಟಿದ್ದರು.
ಸಫಾರಿಗೆ ಹೋದವರೆಲ್ಲ ಇದನ್ನು ನೋಡಿ ಸಂತೋಷ ಪಟ್ಟು ವನ್ಯಜೀವಿ ಪ್ರೇಮಿಗಳೆಲ್ಲ ಮಿಸ್ಟರ್ ಕಬಿನಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಗಜ ಗಾಂಭೀರ್ಯ ದ ಪೋಟೋಗಳನ್ನು ವಿಡಿಯೋ ಗಳು ಹೆಚ್ಚು ಸಂಖ್ಯೆಯಲ್ಲಿ ಶೇರ್ ಅಗಿದ್ದು.ಕೋಟ್ಯಂತರ ವೀಕ್ಷಕರು ವೀಕ್ಷಿಸಿದ್ದಾರೆ.
” ಅರಣ್ಯ ಇಲಾಖೆಯಲ್ಲಿ ಯಾವುದೇ ಪ್ರಾಣಿಗೆ ಹೆಸರಿಡುವ ವ್ಯವಸ್ಥೆ ಇಲ್ಲ. ಅದು ವನ್ಯಜೀವಿ ಛಾಯಾಗ್ರಾಹಕರು ಪ್ರೀತಿಯಿಂದ ಇಟ್ಟಿರುವ ಹೆಸರು. ಮೃತಪಟ್ಟಿರುವ ಆನೆಯು ಹಿರಿಯಾದಾಗಿದ್ದು.ಕಬಿನಿ ಹಿನ್ನೀರು ಪ್ರದೇಶದಲ್ಲಿ ವಯಸ್ಸಾದ ಮೂರ್ನಾಲ್ಕು ಆನೆಗಳಿರುವುದರಿಂದ ಆ ಆನೆಯೇ ಎಂದು ಹೇಳಲಾಗುವುದಿಲ್ಲ ಎಂದು ನವೀನ್ ಎಸಿಎಫ್ ಹೇಡಿಯಾಲ ವಲಯ ಇವರು ತಿಳಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


