nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ

    November 2, 2025

    ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ

    November 2, 2025

    ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ

    November 2, 2025
    Facebook Twitter Instagram
    ಟ್ರೆಂಡಿಂಗ್
    • ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ
    • ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ
    • ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ
    • ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !
    • ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಲ್ಲಿ ಶ್ರೀಮಂತ: ತಹಶೀಲ್ದಾರ್ ಮಂಜುನಾಥ್ ಕೆ.
    • ‘ಯುವ ಶಕ್ತಿ’ ರಾಷ್ಟ್ರದ ಬೆನ್ನೆಲುಬು, ಯುವ ಜನತೆ ತಮ್ಮ ಒಳಗಿನ ಶಕ್ತಿಯನ್ನು ಗುರುತಿಸಿಕೊಳ್ಳಿ: ಕುಂಚಶ್ರೀ
    • ಕೊರಟಗೆರೆ: ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ: ಅಧ್ಯಕ್ಷರಾಗಿ ಈಶ್ವರಯ್ಯ,  ಉಪಾಧ್ಯಕ್ಷರಾಗಿ ಭಾಗ್ಯಮ್ಮ ಆಯ್ಕೆ
    • “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ–2025” ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಶಿಸುತ್ತಿರುವ ಕಲೆಗಳ ಉಳಿವಿಕೆಗೆ ಕರೆ ನೀಡಿದ: ಆದಾಯ ತೆರಿಗೆ ಆಯುಕ್ತರಾದ ಜಯರಾಮ್ ರಾಯಪುರ
    Uncategorized December 20, 2021

    ನಶಿಸುತ್ತಿರುವ ಕಲೆಗಳ ಉಳಿವಿಕೆಗೆ ಕರೆ ನೀಡಿದ: ಆದಾಯ ತೆರಿಗೆ ಆಯುಕ್ತರಾದ ಜಯರಾಮ್ ರಾಯಪುರ

    By adminDecember 20, 2021No Comments2 Mins Read
    madhugiri

    ಮಧುಗಿರಿ: ಜಾನಪದ ಕಲೆಯ ತಾಯಿಬೇರುಗಳಾದ ಯಕ್ಷಗಾನ, ಮೂಡಲಪಾಯ, ಬಯಲಾಟ ಕಲೆಗಳನ್ನು ಸಂರಕ್ಷಿಸಿದರೆ ಜಾನಪದದ ಅಸ್ವಿತ್ವಕ್ಕೆ ಧಕ್ಕೆ ಬಾರದು ಎಂದು ಆದಾಯ ತೆರಿಗೆ ಆಯುಕ್ತರಾದ ಜಯರಾಮ್ ರಾಯಪುರ ಪ್ರತಿಪಾದಿಸಿದರು.

    ಬಯಲುಸೀಮೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದಲೂ ನೆಲೆಗೊಂಡಿರುವ ಮೂಡಲಪಾಯ ಬಯಲಾಟ ಕಲೆ ಉಳಿವಿಗಾಗಿ ಭಾಗವತರನ್ನು ಒಂದುಗೂಡಿಸಲು ಜಾನಪದ ಒಡನಾಡಿಗಳೊಂದಿಗೆ ಕ್ಷೇತ್ರ ಪರ್ಯಟನೆ ಕೈಗೊಂಡಿರುವ ಅವರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ನಂತರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.


    Provided by
    Provided by

    ಹುಲಿಗಳನ್ನು ಸಂರಕ್ಷಿಸುವ ಟೈಗರ್ ಪ್ರಾಜೆಕ್ಟ್ ಯೋಜನೆಯಿದೆ. ಹುಲಿಗಳ ಉಳಿಸಬೇಕು ಎಂದರೆ ಮೊದಲು ಬೇಟೆ ಪ್ರಾಣಿಗಳನ್ನು ಉಳಿಸಿ ಜೀವಿ ಸಮತೋಲನ ಕಾಯ್ದು ಕೊಳ್ಳಬೇಕು. ಆಗೆಯೇ ಜಾನಪದ ಕಲೆ ಉಳಿಸಬೇಕೆಂದರೆ ಯಕ್ಷಗಾನ, ಬಯಲಾಟ ಸೇರಿದಂತೆ ಜಾನಪದರ ಬಾಯಲ್ಲಿರುವ ಕಲೆಗಳನ್ನು ಉಳಿಸುವುದು ಅನಿವಾರ್ಯ ಎಂದರು.

    ನಾನು ಅಧಿಕಾರಿಯಾಗಿ ಅಕ್ಷರ ತಿಳಿದವನಾಗಿ ನಮ್ಮ ಕಣ್ಣಮುಂದೆಯೇ ನಶಿಸುತ್ತಿರುವ ಕಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಕೈಜೋಡಿಸದಿದ್ದರೆ ಆತ್ಮ ವಂಚನೆ ಮಾಡಿಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ಜಾನಪದ ವಿದ್ವಾಂಸರೊಂದಿಗೆ ಸೇರಿ ಭಾಗವತರನ್ನು ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಫೆಬ್ರವರಿ ತಿಂಗಳಲ್ಲಿ ಚಿಕ್ಕಬಳ್ಳಾಪುರ ದಲ್ಲಿ ಎರಡು ದಿನಗಳ ಮೂಡಲಪಾಯ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದರು.

    ಇಂದಿನ ಅಧುನಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದೆ. ಅದಕ್ಕೆ ತಕ್ಕನಾಗಿ ಜಾನಪದ ಕಲೆಗಳಲ್ಲೂ ಸುಧಾರಣೆ, ರೂಪಾಂತರ ತಂದರೆ ಪ್ರೇಕ್ಷಕರಿಗೆ ಆಕರ್ಷಣೆಯಾಗಿ ಉಳಿಯಲಿದೆ. ಬಯಲಾಟ, ಯಕ್ಷಗಾನದ ಪ್ರಸಂಗದಿಂದ ಪ್ರಸಂಗದ ಮಧ್ಯದ ವಿಳಂಬ ತಪ್ಪಿಸುವುದು. ನೋಡುಗರ ಚಿತ್ತ ಅನ್ಯಯೋಚನೆಗಳತ್ತ, ಮೊಬೈಲ್ ನತ್ತ ತೆರಳದಂತೆ ನಿರಂತರ ಗಮನ ಹಿಡಿದಿಟ್ಟುಕೊಳ್ಳುವ ಶೈಲಿ ಅಳವಡಿಕೆಯ ಸವಾಲುಗಳು ಈ ಕಲೆಗಳ ಮುಂದಿವೆ. ಹೊಸ ಕಲಾವಿದರನ್ನು ಸೃಷ್ಟಿಸುವುದು, ತರಬೇತಿ ನೀಡುವುದು. ಇರುವ ಭಾಗವತರ ಬಳಿಯ ಕಲೆಯನ್ನು ನವಪೀಳಿಗೆ ವರ್ಗಾಯಿಸುವುದು ಇಂದಿನ ತುರ್ತು ಎಂದು ಅಭಿಪ್ರಾಯ ಪಟ್ಟರು.

    ಮಧುಗಿರಿ ತಾಲೂಕು ಬಯಲಾಟದ ಕಲೆಯ ತವರೂರು. ಇಲ್ಲಿನ ಕಲಾವಿದರು ತಮ್ಮ ತಮ್ಮ ಊರಲ್ಲೇ ರಂಗಪ್ರಯೋಗ ಮಾಡುತ್ತಿರುತ್ತಾರೆ. ಇವರನ್ನು ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಕ್ಕೆ ಕರೆಸಿ ಪ್ರದರ್ಶನ ಕೊಡಿಸಿ ಪ್ರೋತ್ಸಾಹ, ಪ್ರೇರಣೆ ನೀಡಿದರೆ ಅವರಲ್ಲೂ ತಮ್ಮಲ್ಲಿರುವ ಕಲೆಯ ಮಹತ್ವದ ಅರಿವಾಗಿ ಮತ್ತಷ್ಡು ಉತ್ಸಾಹದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಗಿದೆ. ಸಾಹಿತ್ಯ, ಕಲೆ, ಸಂಗೀತ ಇವೆಲ್ಲಾ ಶ್ರೋತೃ, ಪ್ರೇಕ್ಷಕರಿಗೆ ಜ್ಞಾನ, ಮನರಂಜನೆ, ದೇಸಿ ಚಿಂತನೆ ನೀಡುವುದಲ್ಲದೆ ಕವಿ, ಕಲಾವಿದರಿಗೂ ಗುರುತು ತಂದುಕೊಡುತ್ತವೆ. ಗುರುತಿಸಿ ಬೆನ್ನು ತಟ್ಟುವವರೂ ಬೇಕು ಎಂದು ಜಯರಾಮ್ ರಾಯಪುರ ಹೇಳಿದರು.

    ಜಾನಪದ ವಿದ್ವಾಂಸರು, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡರು ಮಾತನಾಡಿ, ನೆಲೆಯಲ್ಲಿಯೇ ಜಾನಪದ ಕಲೆ ಉಳಿಸಿಕೊಳ್ಳುವ ಕಾರ್ಯವಾಗಬೇಕು. ಮಧುಗಿರಿಯಲ್ಲೇ ಬಯಲಾಟ ತಂಡಗಳ ಪ್ರದರ್ಶನ ಏರ್ಪಡಿಸಿ ನಾವು ಬೆಂಬಲ ನೀಡುತ್ತೇವೆ.  ಪಟ್ಟಣದಲ್ಲೇ ಸಾಹಿತ್ಯ ಪರಿಷತ್ ಆಡಿಟೋರಿಯಂ ಇದೆ. ಸ್ಥಳೀಯ ಆಡಳಿತ ತಹಶೀಲ್ದಾರ್ ಅವರು ಪ್ರೋತ್ಸಾಹ  ನೀಡುತ್ತಾರೆಂದು ಹೇಳುವಿರಿ ಇಲ್ಲೇ ಜಾನಪದ ಸಮ್ಮೇಳನ ಏರ್ಪಡಿಸಿ ನಾವೂ ಬಂದು  ಸಲಹೆ ಸಹಕಾರ ನೀಡುತ್ತೇವೆ. ನಮ್ಮಲ್ಲಿಗೂ ಕಲಾವಿದರು ಬರಲಿ ಎಂದರು.

    ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಹನಾ ನಾಗೇಶ್  ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಜಾನಪದ ವಿದ್ವಾಂಸರು, ಚಿಂತಕರೂ ಆದ ಚಿಕ್ಕಣ್ಣ ಯಣ್ಣೆಕಟ್ಟೆ, ಹೆಚ್.ಡಿ.ನರಸೇಗೌಡ, ಉದಯಶಂಕರ್, ಆರ್ಯವೈಶ್ಯ ಮಂಡಲಿ  ಸಂಘದ ಅಧ್ಯಕ್ಷರಾದ ಕೆ ಎನ್ ಶ್ರೀನಿವಾಸ್ ಮೂರ್ತಿ, ಪತ್ರಕರ್ತ ಎಂ.ಎಸ್.ರಘುನಾಥ್ ಮತ್ತು ಅಂಕಿತ್ ರಘುನಾಥ್  ಮತ್ತಿತರಿದ್ದರು.

    ವರದಿ: ಅಬಿದ್, ಮಧುಗಿರಿ

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ವನ್ಯಜೀವಿ–ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

    October 28, 2025

    ತುಮಕೂರು  | ‘ಸಾಬೂನು ಮೇಳ’ಕ್ಕೆ  ಚಾಲನೆ ನೀಡಿದ  ಸಿದ್ಧಲಿಂಗಮಹಾಸ್ವಾಮೀಜಿ

    October 27, 2025

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ

    November 2, 2025

    ಸರಗೂರು: ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ ಎಂದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪೂರ್ಣಿಮ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ…

    ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ

    November 2, 2025

    ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ

    November 2, 2025

    ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !

    November 2, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.