ಬಳ್ಳಾರಿ: ಕಾಲುವೆಗೆ ಆಟೋ ಪಲ್ಟಿಯಾಗಿ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಬಳಿ ನಡೆದಿದೆ.
ಆಟೋದಲ್ಲಿ 9 ಕಾರ್ಮಿಕರು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ತುಂಗಭದ್ರಾ ಕಾಲುವೆಗೆ ಆಟೋ ಪಲ್ಟಿಯಾಗಿದೆ.
ಘಟನೆ ಸಂಬಂಧ ನಿಂಗಮ್ಮ, ದುರ್ಗಮ್ಮ, ಪುಷ್ಪಾವತಿ ಎಂಬುವವರ ಮೃತದೇಹಗಳು ಪತ್ತೆಯಾಗಿದ್ದು ಹೇಮಾವತಿ, ಶಿಲ್ಪಾ, ಮಹೇಶ್, ಭೀಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲು ತಪ್ಪಿಸಲು ಹೋಗಿ ಕಾಲುವೆಗೆ ಆಟೋ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy